ಕವನ – ನಕ್ಕನೇ ನಮ್ಮ ಬುದ್ಧ

Must Read

ನಕ್ಕನೇ ನಮ್ಮ ಬುದ್ಧ

ವೈಶಾಖ ಪೂರ್ಣಿಮೆಯ ದಿನ
ಮುಕ್ತಿಯ ಹುಡುಕಾಟದಲ್ಲಿ
ಕಪಿಲವಸ್ತುವನ್ನು ಬಿಟ್ಟು
ಹೊರಟು ಜ್ಞಾನೋದಯದ
ಮಾರ್ಗ ಕಂಡುಕೊಂಡ
ನಮ್ಮ ಬುದ್ಧ

ಪ್ರಾಣಿಬಲಿಯ ವಿರೋಧಿಸಿ
ಮೂಢನಂಬಿಕೆಯ ಖಂಡಿಸಿ
ಜಾತೀಯತೆಯ ಅಜ್ಞಾನವನ್ನು
ತೊಲಗಿಸಿದ ನಮ್ಮ ಬುದ್ಧ
ಆದರೇನು ತಮ್ಮ ತಮ್ಮಲ್ಲೇ
ಕಾದಾಡುವವರನ್ನು
ಕಚ್ಚಾಡುವವರನ್ನು
ಮೂಢನಂಬಿಕೆಯ ಹೊತ್ತು
ತಿರುಗುವವರನ್ನು
ಪ್ರಾಣಿ ಹತ್ಯೆ ಮಾಡುವವರನ್ನು
ನೋಡಿ ನಕ್ಕನೇ ನಮ್ಮ ಬುದ್ಧ

ನಿರ್ವಾಣದ ಪಥವ ಬೋಧಿಸುತ
ಮುಕ್ತಿಯ ದಾರಿಯ ತೋರಿಸುತ
ಇಂದ್ರಿಯಗಳ ನಿಯಂತ್ರಣ,
ಮಿತ ಆಹಾರ, ಅಷ್ಟಾ0ಗ ಯೋಗ ಎನ್ನುವ ಮಾರ್ಗದಿ
ಕೊಂಡೊಯ್ದರೂ
ತಮ್ಮದಲ್ಲದ ವಸ್ತುವಿಗೆ
ಹಪಹಪಿಸುವ ಜನರ
ಕಂಡು ನಕ್ಕನೇ ನಮ್ಮ ಬುದ್ಧ

ಯಾವುದೇ ಪವಾಡಗಳನ್ನು
ಮಾಡದೇ ಸತ್ಯ, ಸುಖ,ಶಾಂತಿ
ನೆಮ್ಮದಿ, ಮೋಕ್ಷದ ಮಾರ್ಗದರ್ಶನ ಮಾಡಿದ್ದು
ಬದಿಗಿಟ್ಟು
ಪವಾಡಸದೃಶ ಘಟನೆಗಳ
ಹಿಂದೆ ಬೆನ್ನತ್ತಿ ತಮ್ಮನ್ನು ತಾವೇ
ಮೂರ್ಖರನ್ನಾಗಿ ಮಾಡಿಕೊಳ್ಳುವುದನ್ನು ನೋಡಿ
ನಕ್ಕನೇ ನಮ್ಮ ಬುದ್ಧ

ಕಳಂಕಿತರನ್ನು ಕ್ರೂರರನ್ನು
ಮನಃಪರಿವರ್ತನೆ ಮಾಡಿ
ಸಮಾಜದಲ್ಲಿ ಒಂದಾಗುವಂತೆ
ಮಾಡಿದರೂ
ಮತ್ತೆ ಮತ್ತೆ ಅದೇ ದಾರಿಯಲ್ಲಿ
ಪಯಣಿಸುವವರನು ನೋಡಿ
ನಕ್ಕನೇ ನಮ್ಮ ಬುದ್ಧ.

ಸುಧಾ ಪಾಟೀಲ್ ( ಸುಶಿ )
ಬೆಳಗಾವಿ

Latest News

ಯಶಸ್ವಿ ಹಾಸನಾಂಬ ಫಿಲಂ ಫೆಸ್ಟಿವಲ್

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಕ್ಸ್ ಕಾನ್, ಡ್ರೀಮ್ ಸ್ಟುಡಿಯೋ ಎಂಟರ್ಟೈನ್ಮೆಂಟ್, ವೆಂಚರ್ ಮೂವೀಸ್  ವತಿಯಿಂದ ಹಾಸನಾಂಬ ಚಲನಚಿತ್ರೋತ್ಸವ 2025 ಕಾರ್ಯಕ್ರಮವನ್ನು...

More Articles Like This

error: Content is protected !!
Join WhatsApp Group