ಅಲ್ಲ ನಾವು ವೀರಶೈವರು
————————–
ಅಲ್ಲ ನಾವು ವೀರಶೈವರು
ನಾವು ಲಿಂಗವಂತರು
ಅಪ್ಪ ಬಸವನ ಧರ್ಮದಲ್ಲಿ
ಸತ್ಯ ಸಮತೆ ಕಾಣುವವರು
ನ್ಯಾಯ ನಿಷ್ಟುರಿ,ನಿತ್ಯ ಕಾಯಕ
ಹಸಿದ ಜೀವವ ಸಲುಹುವವರು
ಅಗಸ ಅರಸ ಕೂಡಿ ಭೋಜನ
ಕರುಣೆ ಪ್ರೀತಿಯ ಕಾನನ
ಅರಿವೇ ಗುರುವು ನುಡಿಯು ಲಿಂಗ
ನಡೆಯು ಜಂಗಮ ಪಾವನ
ವಚನ ಗ್ರಂಥ ನಮ್ಮ ಉಸಿರು.
ಮರ್ತ್ಯ ಲೋಕಕೆ ಅಚ್ಚ ಹಸಿರು
ದೀನ ದಲಿತ ಬೇಧವಳಿದು
ಶರಣ ರಾಜ್ಯ ಕಟ್ಟುವವರು.
ಇಲ್ಲ ಲಿಂಗಕೆ ಹಾಲು ತುಪ್ಪ,
ಪುರೋಹಿತರ ಕೈಗೆ ಕಪ್ಪ.
ಕರಣ ಹಸಿಗೆ ಮಂತ್ರ ಗೌಪ್ಯ,
ಷಟಸ್ಥಲವು ದಿವ್ಯವು .
ಶರಣ ಸಂಕುಲ ಜೀವ ತೆತ್ತಿದೆ
ಮನುಕುಲದ ಬಾಳ ದೀಪಕೆ
ಬಿರುಗಾಳಿ ಬೀಸಿದರೂ.,
ಆರದಿಹುದು ಬಸವ ಸೊಡರು
ಬೇಡ ನಮಗೆ ವೀರಶೈವ,
ನಾವು ಲಿಂಗವಂತರು
ಅಪ್ಪ ಬಸವನ ಧರ್ಮದಲ್ಲಿ,
ಇಲ್ಲ ಯಾವ ತೊಡರು
—————————————-
ಡಾ. ಶಶಿಕಾಂತ.ಪಟ್ಟಣ -ರಾಮದುರ್ಗ
Must Read

