ಕವನ : ನನ್ನಪ್ಪ

Must Read

ನನ್ನಪ್ಪ

ಉಸಿರ ನೀಡಿ
ಬೆವರ ಬಸಿದು
ಬೆಚ್ಚಗಿನ ಸೂರಲಿ
ಪೊರೆದ ಜೀವ.

ನೋವ ನುಂಗಿ
ನಲಿವ ಹಂಚಿ
ಬಾನಂಚಿನ ತಾರೆ
ಇರುಳಲೂ ಮಿನುಗುತ.

ವಾತ್ಸಲ್ಯ ತೋರಿ
ತಲ್ಲಣವ ದೂರಿಕರಿಸಿ
ತನ್ನದಲ್ಲದ ಬದುಕಿಗೆ
ತೇಯ್ದ ಗಂಧ.

ತಾನು ಹಸಿದು
ತನ್ನವರ ಹೊಟ್ಟೆ ತುಂಬಿಸಿ
ಮಾಸಿದ ಬಟ್ಟೆಯಲೂ
ದಿಟ್ಟ ನಿರ್ಧಾರ ಕೈಗೊಳ್ಳುವ.

ಛಲವ ಹೊತ್ತು ಸಾಗಿ
ಒಲವ ಬಲವ ತುಂಬಿ
ಬಾಳ ಬಂಡಿಗೆ ನೊಗವೇ ಆಗಿ
ತಾಳ ಮೇಳ ಸೇರಿಸುತ.

ಆಲದ ಮರದ ಬೇರು
ನೆಲೆಗಾಗಿ ಹೋರಾಟ
ತನ್ನದೆಲ್ಲ ಕಡೆಗಣಿಸಿ
ಮುಂದಡಿಗೆ ಪ್ರೇರಣೆ.

ರೇಷ್ಮಾ ಕಂದಕೂರ
ಶಿಕ್ಷಕಿ, ಸಿಂಧನೂರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group