Homeಕವನಕವನ : ಅಪ್ಪನೆಂಬ ಅದ್ಭುತ ಸಾಗರ

ಕವನ : ಅಪ್ಪನೆಂಬ ಅದ್ಭುತ ಸಾಗರ

spot_img

ಅಪ್ಪನೆಂಬ ಅದ್ಭುತ ಸಾಗರ

ಆಕಾಶದಲ್ಲಿ ಮಿನುಗುವ ನಕ್ಷತ್ರಗಳ ಬೆಳಕಿನಲಿ ಮಿಂಚುಹುಳವಾಗಿದ್ದನು ನನ್ನಪ್ಪ
ತ್ಯಾಗದ ಪ್ರತಿರೂಪವಾದರೂ ಜಗತ್ತಿಗೆ ಕಾಣದ ಭಾವಜೀವಿ
ನನ್ನಪ್ಪ

ಕೈ ಹಿಡಿದು ಶಿಕ್ಷಣ ಕೊಡಿಸಿ
ಹೆಗಲಿಗೆ ಹೆಗಲು ಕೊಟ್ಟು
ಸಂಸಾರವೆಂಬ ಸಾಗರವ
ಅವ್ವನೊಡನೆ ಈಜಿ ಬದುಕಿನ ದಡ ಮುಟ್ಟಿಸಿದ
ಅದ್ಭುತ ಸಾಗರ ನನ್ನಪ್ಪ

ಸುಖದಲ್ಲಿ ನಗಿಸಿ
ಜವಾಬ್ದಾರಿಯಿಂದ ನಮ್ಮನ್ನು ಗದರಿಸಿ
ಅಪ್ಪನೆಂದರೆ ಬಾಲ್ಯದ ಭೂತವೆಂಬಂತೆ ಬಿಂಬಿಸಿದರೂ
ಸಂಸಾರ ನೊಗ ಹೊತ್ತ
ಬಾಳುವೆಯ ಜೋಡೆತ್ತು
ನನ್ನಪ್ಪ

ಒಪ್ಪತ್ತಿನ ಊಟದಿಂದ ಹಿಡಿದು ಐಶಾರಾಮಿ ಊಟದವರೆಗೆ ದುಡಿಮೆಯ ಬೆವರಿನ ಬೆಲೆ ತಿಳಿದುಕೊಳ್ಳುವದ ಕಲಿಸಿದ
ಬೆವರ ಹನಿಯ ಕೂಲಿಕಾರ
ಮಕ್ಕಳ ಪಾಲಿನ ದೇವರು
ದುಡಿಮೆಯ ನಂಬಿದ ಸಂತನಾಗಿದ್ದರು
ನನ್ನಪ್ಪ

(ವಿಶ್ವ ಅಪ್ಪಂದಿರ ದಿನದ ಸವಿನೆನಪಿಗಾಗಿ)

✍️✍️ ಶಿವಕುಮಾರ ಕೋಡಿಹಾಳ ಮೂಡಲಗಿ

RELATED ARTICLES

Most Popular

error: Content is protected !!
Join WhatsApp Group