Homeಕವನಕವನ :ಮರಳಿ ಮೂಕನಾದೆ

ಕವನ :ಮರಳಿ ಮೂಕನಾದೆ

spot_img

ಮರಳಿ ಮೂಕನಾದೆ

ನಿನ್ನ ಹೊಗಳಿ ಬರೆದ
ಕವಿತೆಗಿನ್ನು ಕಾಗದದ
ಭಾಗ್ಯ ಬಂದಿಲ್ಲ
ಮಾತಾಡಲೆನ್ನ ಮನಕೆ
ಧೈರ್ಯವೂ ಸಾಲುತಿಲ್ಲ
ನನ್ನೀ ವೇದನೆಯ ನಿನ್ನೆದುರು
ಬಿಚ್ಚಿಡುವ ಪರಿಣತಿಯಿಲ್ಲ

ಕುಂಚ ಹಿಡಿದ ನಾನು
ಕನ್ನಡಿ ಮುಂದೆ ಕುಳಿತ
ನಿನ್ನ ಕಣ್ಣೇಟಿಗೆ ಸೋತಿದ್ದೇನೆ
ತುಟಿಗೆ ರಂಗು ತುಂಬಿದವನು
ಚುಂಬಿಸುವನುಮತಿ
ಇಲ್ಲವೆಂದು ಅರಿತಿದ್ದೇನೆ.

ನನ್ನೆದೆಯ ಕನಸು ಕೊಳ್ಳಲು
ನಿನಗೆ ಧಾವಂತವಿಲ್ಲ
ಮಾರಲು ನನಗೆ ಚತುರತೆಯಿಲ್ಲ
ಬ್ರಶ್ಶು ಕ್ಯಾನ್ವಾಸನ್ನು
ಮುಟ್ಟಬಹುದಷ್ಟೇ
ಚಿತ್ರವೇ ತನ್ನದೆನ್ನಲು ಸಾಧ್ಯವಿಲ್ಲ

ನಿನ್ನ ನಯನಗಳು ಮಾತ್ರ
ಮೋಸಗೊಳಿಸುತ್ತದೆ
ಸನಿಹ ಬರುವಂತೆ ಆಹ್ವಾನಿಸುತ್ತದೆ
ನನ್ನ ಖಾಲಿ ಜೇಬು
ಮೇಕಪ್ಪುಡಬ್ಬಿ ತಡೆಯುತ್ತಿದೆ
ಹೃದಯವಿದು ಹತಾಶೆಯಿಂದ
ಮರಳಿ ಮೂಕವಾಗುತ್ತಿದೆ

 ಡಾ.ಭವ್ಯ ಅಶೋಕ ಸಂಪಗಾರ್

RELATED ARTICLES

Most Popular

error: Content is protected !!
Join WhatsApp Group