- Advertisement -
ಮನಸ್ಸಿನಾಗ ಮರಗಬೇಕ
ಮರುಗಬೇಕ ಮನದಾಗಲೇ
ಸತ್ತ ಮ್ಯಾಲ
ಹೇರಿಕೊಂಡ ಹೋಗುವಂಗಿಲ್ಲ
ಹೊನ್ನ ತಲಿ ಮ್ಯಾಲ
ಯಾಕ ಬಡಕೋತಿ
ಬರೀ ಗೊಳ್ಳ
ಜೀವನದಾಗ
ಬರೀ ಸುಳ್ಳ
- Advertisement -
ತಿಳಿದ ನಡಿಬೇಕಣ್ಣಾ
ಶರೀರ ಮ್ಯಾಲ
ಹಾಕುವರು ನಾಲ್ಕು
ಹಿಡಿ ಮಣ್ಣ
ತಿನ್ನುವಂಗಿಲ್ಲ
ನಾ ಗಳಿಸಿದ ಹೊನ್ನ
ಗಳಿಸಬೇಕಣ್ಣಾ
ಸಾವಿರ ಸಾವಿರ ಹೊನ್ನಿನಂಗ
ಹೊಳೆವ ಮನಸಣ್ಣಾ
ಎಷ್ಟ ಅತ್ತರೇನಣ್ಣಾ
ಸತ್ತವರು ಹೊಳ್ಳಿ
ಬರುವುದಿಲ್ಲ ನಿಜ ಗೊತ್ತೈತಣ್ಣಾ
ಎಲ್ಲವೂ ಗೊಳ್ಳ
- Advertisement -
ಕಟುಕರ ಮನ
ಕರುಗುವುದಿಲ್ಲ ನಿಜ
ಮಾಡಿ ನಡೆಯಿರಣ್ಣ ಸುಳ್ಳ
ಬರೀ ಮಾತಲ್ಲ ನೀ ತಿಳಿ
ನಡಿಬೇಕಣ್ಣಾ ಮ್ಯಾಲ
ಕೈ ಮಾಡಿ ಕರದರ
ಹೋಗಲೇ ಬೇಕಣ್ಣಾ
ನಾವೂ ನೀವೆಲ್ಲ
ಇರುವಂಗಿಲ್ಲ
ನನಗ ಗೊತ್ತಣ್ಣ
ಆಶೆ ಕನಸ ನನಸಿಗೆ
ಕಾಯದೊಳಗೆ
ಕಾಯಕ ಕಲಿಸಿದ ನಮ್ಮಣ್ಣ
ಬಸವಣ್ಣ
ತಪ್ಪಾಗಿದ್ದರೆ ಕ್ಷಮಿಸಿ
ಅಂತ ಹೇಳಿ
ನಡೆ ನುಡಿಗಳಂತೆ
ನಡಿಬೇಕಣ್ಣಾ
ಶರಣ ಶರಣೆಯರಂಗ
ಇದು ಬಯಲು ನಿ ತಿಳಿ ರಂಗ
________________
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪೂರ