ಕವನ: ತುಂಡುಬಟ್ಟೆಯಲಿ ತೂಕದ ವ್ಯಕ್ತಿತ್ವ

Must Read

ತುಂಡುಬಟ್ಟೆಯಲಿ ತೂಕದ ವ್ಯಕ್ತಿತ್ವ

ಸ್ವಾತಂತ್ರ್ಯವೆಂಬ ಸುಂದರ ಕಡಲೊಳು
ತೇಲಿ ಬರುತಿದೆ ಗಾಂಧಿ ನೆನಪು

ಲೋಕಪ್ರಿಯ ಇವರು ರಾಷ್ಟ್ರಪಿತರು
ಭಾರತಾಂಬೆಯ ಶ್ರೇಷ್ಠ ಸುತರು
ಶಿಕ್ಷಣ ಸತ್ಯಾಗ್ರಹ ಗಂಟೆ ಜಾಗಟೆಯಿಂದ
ಸತ್ತಂತಿಹರನು
ಬಡಿದೆಬ್ಬಿಸಿದವರು
ಕೊಬ್ಬಿದ ವಿದೇಶಿಯರ ಸೊಕ್ಕಡಗಿಸಿ
ದಾಸ್ಯದ ಸಂಕೋಲೆಗೆ ಮುಕ್ತಿ ನೀಡಿದವರು….
ಲೋಕಪ್ರಿಯರು ರಾಷ್ಟ್ರಪಿತರು

ತನ್ನ ಬದುಕಿನ ಕಂದರ ಲೆಕ್ಕಿಸದೇ
ಮನೆ ಮನಗಳ ಬಡಿದೆಬ್ಬಿಸಿದವರು
ಭಾರತಾಂಬೆಯ ನಿಜದಿ ಬಿಡುಗಡೆಗೊಳಿಸಿ
ತ್ಯಾಗದ ಮೂಟೆಯ ಹೊತ್ತು ನಿಂತವರು….

ದಮನಿತರ ಕಣ್ಣೀರಿಗೆ ಕರಗಿದ ರಾಷ್ಟ್ರಪಿತ
ಅಧಿಕಾರ ಅಂತಸ್ತನ್ನು ದೂರ ತಳ್ಳಿದ ನಿಜಸುತ
ತುಂಡು ಬಟ್ಟೆಯಲ್ಲಿ ತೂಕದ ವ್ಯಕ್ತಿ ತ್ವ…
ನಿನಗಾರು ಸರಿ ತಾತ
ಅಹಿಂಸೆಯೇ ನಿನ್ನ ಪರಮ ತತ್ವ

ಸತ್ಯ ಶಾಂತಿ ತ್ಯಾಗ ಮೂರ್ತಿ
ಜಗದ ತುಂಬ ನಿನ್ನ ಕೀರ್ತಿ
ಬಂದೊಮ್ಮೆ ನೋಡು
ಭರತ ಭೂಮಿಯ ಪಾಡು
ನೀ ತಂದ ಸ್ವಾತಂತ್ರ್ಯ ಸ್ವೇಚ್ಛೆಯಾಗಿರಲು
ಮತ್ತೊಮ್ಮೆ ಬಾ ನೀ ಚಾಟಿ ಬೀಸಲು….


ಶ್ರೀಮತಿ ಮೀನಾಕ್ಷಿ ಸೂಡಿ
ಕಿತ್ತೂರ

Latest News

ಸ್ವಾತಂತ್ರ ಹೋರಾಟಗಾರ, ಹೈ. ಕ. ವಿಮೋಚನಾ ರೂವಾರಿ ಚಂದ್ರಶೇಖರ ಪಾಟೀಲ ಮಹಾಗಾಂವ

ಚಂದ್ರಶೇಖರ ಸಂಗಶೆಟ್ಟಿ ಪಾಟೀಲ , ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದ ಶಾಸಕಾಂಗ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ ಹೋರಾಟಗಾರ ಮತ್ತು ರಾಜಕಾರಣಿ. ಸ್ವಾತಂತ್ರ ಹೋರಾಟಗಾರ ಹೈದ್ರಾಬಾದ...

More Articles Like This

error: Content is protected !!
Join WhatsApp Group