- Advertisement -
ಕೃಷ್ಣನ ಕುಂಚದಿ ಮಿಂಚಿದ ರಾಧೆ
ರಾಧೆಯನು ಚಿತ್ರಿಸಲು
ಮಾಧವನು ಕುಳಿತಿಹನು
ಶೋಧಿಸುತ ಅನುರಾಗ ವರ್ಣ
- Advertisement -
ಮೋದದಲಿ ಮೈಮರೆತು
ಯಾದವ ಕುಲ ತಿಲಕ
ಮಾಧವಿಗು ನೀಲವನೆ ಬಳಿದ
- Advertisement -
ನಾಸಿಕವ ಕುಂಚದಲಿ
ಕೇಶವನು ತೀಡುತಲಿ
ತೋಷವನು ಮೊಗದಲ್ಲಿ ಬರೆದ
ಕುಂಚದ ತುದಿಯಲ್ಲಿ
ಮಿಂಚುತಿದೆ ನಿಜದೊಲವು
ಸಿಂಚನದಿ ಪ್ರೇಮವನೆ ಸುರಿದ
ಇಂಚಿಂಚು ಶೃದ್ಧೆಯಲೆ
ಹಂಚುತಲಿ ಚೆಲುವ ಹೊಳೆ
ಒಂಚೂರು ವಿಚಲಿಸದೆ ಕೊರೆದ
ನೈದಿಲೆಯ ಮೊಗದವಳು
ಮೈದಳೆದು ಕಾಗದದೆ
ಮೂಡಿಹಳು ಚೆಲುವರಸಿ ರಾಧೆ.
ಶ್ರೀಮತಿ ಕಮಲಾಕ್ಷಿ ಕೌಜಲಗಿ, ಬೆಂಗಳೂರು.