ಕವನ: ಮಹಾಗೌರಿ

Must Read

ಮಹಾಗೌರಿ

ನಾರಿಮಣಿಯರ ನೂರು ದುಗುಡವ
ದೂರಮಾಡಲು ಧರೆಗೆ ಬಂದಿಹ
ಗೌರಿ ದೇವಿಗೆ ನಮಿಸಿರೆಲ್ಲರು ಶರಣು ಗೌರಮ್ಮಾ
ಮೂರು ಕಣ್ಣಿವೆ ನಾಲ್ಕು ಕರಗಳು
ಸೀರೆಹಸಿರಿನ ಧರಿಸಿ ಸುಂದರಿ
ತೋರು ನಿನ್ನಯ ಮಹಿಮೆ ನಮ್ಮಲಿ ಮಹಾಗೌರಮ್ಮಾ//1

ವೃಷಭ ವಾಹನರೂಢೆ ಪಾರ್ವತಿ
ಖುಷಿಯ ಬದುಕಿನ ದಾರಿ ತೋರಿಸು
ತೃಷೆಯ ನೀಗಿಸಿ ಕಾಯ್ವ ಗಂಗೆಯ ತಂಗಿ ಗೌರಮ್ಮಾ
ಹಸಿವೆ ತಣಿಸುವೆಯನ್ನಪೂರ್ಣೆಯೆ
ಫಸಲು ಬೆಳೆಯುವ ವರವ ನೀಡುತ
ತುಸುವೆ ಕರುಣೆಯ ಕಂಗಳಿಂದಲಿ ಹರಸು ನಮ್ಮಮ್ಮಾ//2

ಕರದಿ ಡಮರುಗ ಪಿಡಿದ ದೇವತೆ
ವರದ ಹಸ್ತದಿ ಭಕುತರೆಲ್ಲರ
ಹರಸಿ ಕಾಯುವ ಮಮತೆ ಮಡಿಲಿನ ಮಾತೆ ದುರ್ಗಮ್ಮಾ
ಹರನ ಮಡದಿಯೆ ಗಣಪ ಮಾತೆಯೆ
ಧರಣಿ ಮಂಡಲ ರಕ್ಷೆ ಗೈಯುತ
ಚರಣ ಕಮಲಕೆ ಶರಣು ಬಂದೆವು ವರವ ನೀಡಮ್ಮಾ//3


ಶ್ರೀಮತಿ ಬಸಮ್ಮ ಏಗನಗೌಡ್ರ
ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚವಢಾಳ
ತಾ ಸವಣೂರು ಜಿ ಹಾವೇರಿ
9902283161

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group