spot_img
spot_img

ಕವನ: ನಿತ್ಯ ಸತ್ಯ

Must Read

spot_img
- Advertisement -

ನಿತ್ಯ ಸತ್ಯ

ಸಮಾರಂಭದಿ ಭರದಿಂದ ಸಾಗುತ್ತಿದ್ದೆ ಮುಂದೆ
ನಾಲ್ಕಾರು ಜನ ಜಗ್ಗಿದರೆನ್ನ ಹಿಂದೆ/
ತಿರುಗಿ ನೋಡಿದಾಗ ಅನಿಸಿದ್ದು ನಂಗೆ
ನಾನೂ ದೊಡ್ಡ ಕಾರಿನಲ್ಲಿ ಬರಬೇಕಿತ್ತು ಹಿಂಗೆ//

ಅಂದುಕೊಂಡಿದ್ದೆ ಆಸ್ತಿಪಾಸ್ತಿ ಏತಕ್ಕೆಂದು
ಕಷ್ಟ ತಿಳಿಸಿತು ಹಣದ ಮಹತ್ವವೇನೆಂದು/
ಗೊತ್ತು ಕಾಂಚಾಣವೇನೂ ಜೀವ ಉಳಿಸಲ್ಲವೆಂದು
ಆದರೆ ಶುಶ್ರೂಷೆ ಸಿಗಬೇಕಲ್ಲ ಆಸ್ಪತ್ರೆಯಲಿಂದು//

ತಿಳಿದಿದ್ದೆ ನಾ ವ್ಯಕ್ತಿತ್ವವೇ ಮುಖ್ಯವೆಂದು
ತಿಳಿಸಿತು ಸಮಾಜ ಸಂಪತ್ತೂ ಅಗತ್ಯವೆಂದು/
ಮತಿಯಲಿತ್ತು ಹುದ್ದೆ ಹೆಸರು ನನಗ್ಯಾಕೆಂದು
ಜಗತ್ತು ತಿಳಿಸಿತು ಜೀವನದಿ ಎಲ್ಲ ಬೇಕೆಂದು//

- Advertisement -

ಮದ್ದಾನೆಗಳ ಸೊಕ್ಕಡಗಿಸಲಿಂದು
ಚುಚ್ಚಿರಲು ಕಾಲಿಗೆ ಮುಳ್ಳೊಂದು
ಮದ್ದಾನೆಯೇ ಬೇಕು ಮತ್ತೊಂದು/
ತೆಗೆಯಲು ಮುಳ್ಳೇ ಬೇಕು ಮತ್ತೊಂದು//

ಹೇಳಿತು ಮನ ಉಸಿರು ನಿಲ್ಲುವ ಮುನ್ನ
ನಿನ್ನ ಹೆಸರು ಉಳಿಸೆಂದು/
ಮಣ್ಣ ಸೇರಿದ ಮೇಲೂ
ನೆಲದಿ ಉಳಿಯಲಿ ಕೀರ್ತಿ ಎಂದೆಂದೂ//

ಅಂತೆಯೇ ಮಾಡಬೇಕಿದೆ ಜನ ಸೇವೆಯಿಂದು
ಅದಕಾದರೂ ಬೇಕು ಕಾಸು,ಹೈಕ್ಲಾಸು ಇಂದು/
ಬರೀಗೈಲಿ ಹೊರಟರೆ ಬರುವರ್ಯಾರಿಂದು
ಕುರುಡು ಕಾಂಚಾಣವೇ ಮೆರೆಯುತಿದೆ ಇಂದು//

- Advertisement -

ಶ್ರೀಮತಿ ಜ್ಯೋತಿ ಸಿ ಕೋಟಗಿ, ಶಿಕ್ಷಕಿ
ಸ.ಮಾ.ಪ್ರಾ. ಶಾಲೆ ತಲ್ಲೂರ

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group