ಗೆಳತಿ ಅಂದರೆ ನೀನೆಯೆನು ?
————————————
ಸೂರ್ಯ ಮೂಡುವ ಮುನ್ನ.
ಪ್ರೀತಿ ಅರಳಿದ ಉಷೆ ಚಿನ್ನ.
ಸೂರೆಗೊಂಡೆ ನೀನು ನನ್ನ
ಭಾವ ತುಂಬಿದ ಜೀವನ .
ಮನಕೆ ಮನ ಕೂಡಿಕೊಂಡಿತು
ಸ್ಫೂರ್ತಿ ಚಿಲುಮೆ ಚೇತನ .
ನೀನು ನಡೆವ ದಾರಿಯಲ್ಲಿ
ನಗೆಯ ಮಲ್ಲಿಗೆ ಚಂದನ .
ಮಧುರ ದಿನವು ನೀರಿಕ್ಷೆಯ
ನಮ್ಮ ಬಾಳು ನಂದನ .
ನಿನ್ನ ನೋಡುತ ಮರೆಯುವೆ
ನಾನು ಭೂಮಿಯೆ೦ಬ ಸದನ
ಏಕೆ ಜಗಳ ವಾದ ಕದನ
ನೀನು ಸ್ವರ್ಗದ ಬಂಧನ .
ನಿನ್ನ ನಗೆಯಲಿ ಬಾಳ ಕಂಡೆ.
ನೋವು ಕಷ್ಟಕೆ ಕಲ್ಲು ಬಂಡೆ.
ಗೆದ್ದು ನಿಲ್ಲುವ ಚತುರ ಚೆಲುವೆ
ಗೆಳತಿ ಅಂದರೆ ನೀನೆಯೆನು ?
———————————–
ವಿಶ್ವ ಪುರುಷ ದಿನ
—————————-
ಗೆಳೆಯರೇ
ಇಂದು ಪುರುಷ ದಿನ
ಮುಂಜಾನೆ ಕೆಲಸದವಳು
ಕೈ ಕೊಟ್ಟಳು .
ನನ್ನವಳ ಮುನಿಸು
ಎಂದಿನಂತೆ ಕಸಬರಿಗೆ ಹಿಡಿದೆ.
ಮಗುವಿನ ಬಟ್ಟೆ ಇಸ್ತ್ರಿ ಮಾಡಿದೆ.
ಮನೆಯೊಡತಿ ಮಾರ್ಕೆಟಿಗೆ
ಮನೆಯಲ್ಲಿ ಗೃಹ ಕೆಲಸ
ಹಾಲು ಕಾಯಿಸುವುದು.
ಬಿಲ್ಲ ಕಟ್ಟುವುದು
ಟೀ ಕುದಿಸುವುದು.
ಅಯ್ಯೋ ಗ್ಯಾಸಿನ ತೊಂದರೆ.
ಗಾಡಿಯಲ್ಲಿ ಸಿಲಿಂಡರ್ ತಂದೆ
ಪೋಸ್ಟ್ ಕೊರಿಯರ್ ಬಿದ್ದಿವೆ
ಬಾಕ್ಸ್ ತುಂಬಾ ಎತ್ತಿ ತಂದೆ.
ಸಂಜೆ ನಲ್ಲಿಯಲ್ಲಿ ನೀರಿಲ್ಲ
ಕೊಳಾಯಿ ಖಾಲಿ
ಮತ್ತೆ ಹೊತ್ತೆ ಕೊಡ ಬಕೀಟು.
ದಿನಸಿ ಅಂಗಡಿ ಗಿರಣಿ ಕೆಲಸ
ಬಾನಿನಲಿ ಚುಕ್ಕಿ ಮೂಡಿದವು .
ಟಿವಿಯಲಿ ವಿಶ್ವ ಪುರುಷ ದಿನ ಚರ್ಚೆ.
ಮನೆಯೊಡತಿಗೆ ನೆನಪಾಯಿತು.
ಏನ್ರೀ ಇಂದು ವಿಶ್ವ ಪುರುಷ ದಿನ ?
ಅಭಿನಂದನೆ ಎಂದಳು ನಗಲಿಲ್ಲ ನಾನು.
ಒಳಗೊಳಗೇ ಹೆಮ್ಮೆ .
ಇಂದು ವಿಶ್ವ ಪುರುಷ ದಿನ.
——————————————
ಡಾ. ಶಶಿಕಾಂತ ಪಟ್ಟಣ .ಪೂನಾ
Must Read
- Advertisement -
- Advertisement -
More Articles Like This
- Advertisement -