Homeಸುದ್ದಿಗಳುಕವಿತೆಗಳ ಆಹ್ವಾನ

ಕವಿತೆಗಳ ಆಹ್ವಾನ

“ಸುವರ್ಣ ಕರ್ನಾಟಕ ಸಂಭ್ರಮ”ದ ನಿಮಿತ್ತವಾಗಿ ಮೂಡಲಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಹಮ್ಮಿಕೊಂಡಿರುವ ರಾಜ್ಯಮಟ್ಟದ ಕವಿಗೋಷ್ಠಿಗೆ ಕನ್ನಡ ನಾಡು,ನುಡಿ, ಸಂಸ್ಕೃತಿ, ಭಾಷೆ, ನಾಡ ಭಕ್ತಿ, ಇತಿಹಾಸ ಹೀಗೆ ಕನ್ನಡ ನಾಡಿನ ಹಿರಿಮೆ-ಗರಿಮೆ ಕುರಿತು ಬರೆದ ಕವಿತೆ (ಕವನ) ಗಳನ್ನು ಆಹ್ವಾನಿಸಲಾಗಿದೆ.

ಕವಿತೆಗಳನ್ನು ಕಳುಹಿಸಲು ದಿನಾಂಕ ಜೂನ್ ೨೫/೨೦೨೪ರಿಂದ ಜುಲೈ೨೦/೨೦೨೪ರ ವರೆಗೆ ಸಮಯ ನೀಡಲಾಗಿದೆ. ನಂತರ ಬಂದ ಕವಿತೆಗಳನ್ನು ಸ್ವೀಕರಿಸುವುದಿಲ್ಲ. ಕವಿತೆ ಕಳುಹಿಸಿದ ಪ್ರತಿ ಕವಿಗೆ ಸರ್ಟಿಫಿಕೇಟ್ ಹಾಗೂ ಐ.ಎಸ್.ಎಸ್.ಎನ್. ನಂಬರಿನೊಂದಿಗೆ ಪ್ರಕಟಿಸಿದ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗುವ ಕವನ ಸಂಕಲನವನ್ನು ಪೋಸ್ಟ ಮತ್ತು ಬಾಹ್ಯ ವಾಗಿ ತಲುಪಿಸಲಾಗುವುದು.

ಪ್ರತಿಯೊಬ್ಬ ಕವಿಯು ಹದಿನಾರು ಸಾಲು ಮೀರದಂತೆ ಕವಿತೆ ರಚಿಸಬೇಕು. ಗುಣಮಟ್ಟದ ಕವಿತೆಗಳಿಗೆ ಆದ್ಯತೆ ನೀಡಲಾಗುವುದು. ತಾವು ಕಳುಹಿಸುವ ಕವಿತೆಯು ಇದುವರೆಗೆ ಯಾವುದೆ ಪತ್ರಿಕೆ ಅಥವಾ ಗ್ರಂಥಗಳಲ್ಲಿ ಪ್ರಕಟವಾಗಿರಬಾರದು.

ಕವಿತೆ ಕಳುಹಿಸುವ ಪ್ರತಿ ಕವಿಯೂ ರಜಿಸ್ಟ್ರೇಷನ್ ಗಾಗಿ ೫೦೦ ರೂಪಾಯಿಗಳನ್ನು ೯೯೧೬೨೪೬೩೭೬. ಈ ನಂಬರಗೆ ಪೋನ್ ಫೇ/ಬ್ಯಾಂಕ್ ಅಕೌಂಟ್ ನಂಬರಿಗೆ ಕಳುಹಿಸಿ ರಸಿದಿ(ಸ್ಕ್ರೀನ್ ಶಾಟ್) ಕಳುಹಿಸಬೇಕು. ಕವಿಗೋಷ್ಠಿ ಆನ್ಲೈನ್ ಹಾಗೂ ಆಫ್ ಲೈನ್ ನಡೆಯುತ್ತದೆ ಎಂದು ಮೂಡಲಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಂಜಯ ಶಿಂಧಿಹಟ್ಟಿರವರು ಮಾಧ್ಯಮಗಳ ಮುಖಾಂತರ ತಿಳಿಸಿದ್ದಾರೆ. ಕವಿತೆ ಪ್ರಕಟಿಸಲು ಸಲಹಾ ಮಂಡಳಿಯ ನಿರ್ಣಯವೇ ಅಂತಿಮ.

RELATED ARTICLES

Most Popular

error: Content is protected !!
Join WhatsApp Group