spot_img
spot_img

ಸಿಂದೋಗಿಯಲ್ಲಿ ಪಾಲಕರ ಸಭೆ

Must Read

spot_img
- Advertisement -

ಸವದತ್ತಿ: ತಾಲೂಕಿನ ಸಿಂದೋಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಂದೋಗಿ ಪ್ರೌಢ ಶಾಲೆಯಲ್ಲಿ ಸನ್ 2024- 25 ನೇ ಸಾಲಿನ ಮಕ್ಕಳ ಪಾಲಕರ ಪೋಷಕರ ಸಭೆಯನ್ನು ಏರ್ಪಡಿಸಲಾಗಿತ್ತು

ಸಭೆಯ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ದೂದಪ್ಪ ವಹಿಸಿದ್ದರು ಸಭೆಯ ಉದ್ಘಾಟಕರಾಗಿ ಯಶವಂತ ಕುಮಾರ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಸೌದತ್ತಿ ರವರು ಆಗಮಿಸಿದ್ದರು

ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಡಿ ಡಿ ಟೋಪೂಜಿ ಗ್ರಾಮ ಪಂಚಾಯತಿಯ ಸದಸ್ಯರಾದ ಶ್ರೀಮತಿ ಮಾಯವ್ವ ಟೋಪೋಜಿ,  ಮಲ್ಲಿಕಾರ್ಜುನ ದಸ್ತಿ, ಸವದತ್ತಿಯ ಎಪಿಎಂಸಿ ಸದಸ್ಯ ಫಕ್ಕಿರಪ್ಪಾ ಚಂದ್ರಗಿ ಯವರು ಎಸ್. ಡಿ ಎಂ. ಸಿ. ಯ ಸದಸ್ಯರುಗಳು ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ  ರಮೇಶ್ ಬೆಡಸೂರ ಶಾಲೆಯ ಗುರುಗಳು ಗುರು ಮಾತೆಯರು ಮತ್ತು ಮಕ್ಕಳ ಪಾಲಕರು ಪೋಷಕರು ಹಾಜರಿದ್ದರು

- Advertisement -

ಈ ಸಂದರ್ಭದಲ್ಲಿ ಉದ್ಘಾಟಕರಾಗಿ ಆಗಮಿಸಿದ ಯಶವಂತ ಕುಮಾರ್ ಮಕ್ಕಳನ್ನು ಶಾಲೆಗೆ ಸೇರಿಸುವುದು ಅಷ್ಟೇ ಪಾಲಕರ ಕರ್ತವ್ಯ ಅಲ್ಲ ಮಕ್ಕಳು ಶಾಲೆಯಿಂದ ಬಂದ ನಂತರ ಅವರಿಗೆ ಹಾಕಿ ಕೊಟ್ಟಂತಹ ಮನೆ ಕೆಲಸಗಳನ್ನು ನೋಡುವುದು ಮಕ್ಕಳಿಗಾಗಿ ಆಸ್ತಿಯನ್ನು ಮಾಡುವುದರ ಬದಲು ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಲು ಪಾಲಕರಿಗೆ ಕರೆ ನೀಡಿದರು. ಸರಕಾರದಿಂದ 14 ವರ್ಷದವರೆಗೆ ಉಚಿತವಾಗಿ ಮತ್ತು ಕಡ್ಡಾಯವಾಗಿ ಶಿಕ್ಷಣ ನೀಡುವ ಯೋಜನೆ ಜಾರಿಯಲ್ಲಿ ಇರುವುದರಿಂದ ಇದರ ಸದುಪಯೋಗ ಪಡೆದುಕೊಳ್ಳುವಂತೆ ಪಾಲಕರಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ದಿ ಡಿ ಟೋಪೋಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಶಿಂದೋಗಿ ಇವರು ಸರಕಾರ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನ ಜಾರಿಗೆ ತಂದಿದ್ದು ಇದರ ಉಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು ಮಕ್ಕಳು ದುಶ್ಚಟಗಳಿಂದ ದೂರವಿದ್ದು ಒಳ್ಳೆ ರೀತಿಯಿಂದ ಅಭ್ಯಾಸ ಮಾಡುವಂತೆ ಶಾಲೆಯ ಗುರುಗಳು ಹಾಗೂ ಪಾಲಕರು ವಿಶೇಷ ಕಾಳಜಿ ವಹಿಸಿ ಮಕ್ಕಳ ಮೇಲೆ ನಿಗಾ ಇಡಲು ವಿನಂತಿಸಿದರು.

- Advertisement -
- Advertisement -

Latest News

ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ

ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group