ಕಲಬುರಗಿ ಬರಹಗಾರರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨೪ ನೇ ಕಾವ್ಯಗೋಷ್ಠಿಯಲ್ಲಿ “ಆರೋಗ್ಯ” ದ ವಿಷಯದ ಬಗ್ಗೆ ಕಾವ್ಯ ರಚನೆ ಮಾಡಿರುವ ಕವಿಗಳ ಬರಹಗಳು ಇವು
( ಟೈಮ್ಸ್ ಆಫ್ ಕರ್ನಾಟಕ ಪ್ರಸ್ತುತಿ )
ಆರೋಗ್ಯವೇ ಭಾಗ್ಯ
ಆರೋಗ್ಯವೇ ಭಾಗ್ಯವೆಂದು
ತಿಳಿದವರೇ ಯೋಗ್ಯ ಇಂದು
ಜೀವನವೇ ಅಮೂಲ್ಯವೆಂದು
ಸಾರೋಣ ನಾವು ಇಂದು
ಯೋಗ ಧ್ಯಾನ ಮಾಡು ಎಂದು
ತಿಳಿದವರು ಹೇಳಿದರು ಅಂದು
ಸಮತೋಲನ ಆಹಾರವೇ ಶ್ರೇಷ್ಠವೆಂದು
ಸೇವಿಸಬೇಕು ನಾವು ಇಂದು
ಅಮ್ಮನ ಪೋಷಣೆ ಗರ್ಭದಿಂದ
ಅಪ್ಪನ ಪೋಷಣೆ ಜನನದಿಂದ
ನಮ್ಮ ಪೋಷಣೆ ಜ್ನ್ಯಾನಾರ್ಜನೆಯಿಂದ
ಬಾಳಬೇಕು ನಾವು ಆರೋಗ್ಯದಿಂದ
ಕಾಯಕವೇ ಕೈಲಾಸವೆಂದು
ತಿಳಿಯಬೇಕು ನಾವು ಇಂದು
ಊಟಬಲ್ಲವನಿಗೆ ರೋಗವಿಲ್ಲವೆಂದು
ಜಗಕೆ ನಾವು ಸಾರಬೇಕು ಇಂದು
ಶರಣರೆಡ್ಡಿ ಎಸ್, ಕೋಡ್ಲಾ
ಆರೋಗ್ಯ
ಆರೋಗ್ಯ ಅರಿತವ ಭಾಗ್ಯ
ಆರೋಗ್ಯ ಅರಿದೆ ಅಯೋಗ್ಯ
ಕೊರೋನಾ ಅರಿತು ನಡೆಯೊ ಯೋಗ್ಯ
ಮಾಸ್ಕ ಹಾಕುವುದು ಯೋಗ್ಯ||೧||
ಕೈ ತೊಳೆಯವುದು ಯೋಗ್ಯ
ಡಾಕ್ಟರ್ ಸಲಹೆ ಕೇಳುವುದು ಭಾಗ್ಯ
ನಿನ್ನ ಆರೋಗ್ಯ ಇರುತ್ತದೆ ಯೋಗ್ಯ
ಕೊರನಾ ಇಲ್ಲಂತ ತಿರುಗುವ ಅಯೋಗ್ಯ||೨||
ತಂಬಾಕು ಬಿಡುವುದು ಯೋಗ್ಯ
ಆಗ ನಿನಗ ಆರೋಗ್ಯ ಭಾಗ್ಯ
ಬಿಡಿ ಸಿಗರೇಟ್ ಸೇದುವ ಅಯೋಗ್ಯ
ಬಿಟ್ಟು ಬಿಡು ನಿನ್ನ ಆರೋಗ್ಯಭಾಗ್ಯ|೩|
ದಿನ ನಿತ್ಯ ವ್ಯಾಯಾಮ ಆರೋಗ್ಯ
ದಿನ ನಿತ್ಯ ದೇವರ ದರ್ಶನ ಯೋಗ್ಯ
ಸಾರಾಯಿ ಕುಡಿಯುವ ಅಯೋಗ್ಯ
ಬಿಡು ನಿನ್ನ ದುಶ್ಚಟ ಆರೋಗ್ಯ ಭಾಗ್ಯ
ಮಹಾಂತೇಶ ಎನ್ ಪಾಟೀಲ
ಆರೋಗ್ಯ
ಆರೋಗ್ಯವಾಗಿರು ಎಲೆ ಮನವೆ
ಅಲ್ಪಾಯು ಆಗಬೇಡ ತಿಳಿ ಮನವೆ
ಯೋಗ ಧ್ಯಾನ ವಾಯು ವಿಹಾರ
ಜೊತೆಗೆ ಇರಲಿ ಮಿತಾಹಾರ||
ಹಿತಕರವಾದ ರುಚಿಕರವಾದ
ಮನೆ ಊಟವನ್ನು ನೀ ಮಾಡು
ಪಿಜ್ಜಾ ಬರ್ಗರ್ ಪೆಪ್ಸಿ ಕೋಲಾ
ಇವುಗಳಿಂದ ಇರು ನೀ ದೂರ||
ಎಷ್ಟೇ ಸಂಪತ್ತು ಇದ್ದರೂ ತಪ್ಪದು
ಬಂದೆ ಬರುವುದು ಆಪತ್ತು
ಆಪತ್ತು ಬಂದಾಗ ಅಳಬೇಡ ನೀ ಕುಂತು
ಮಾಡು ವಾರಕ್ಕೊಂದು ಉಪವಾಸ ಒಪ್ಪತ್ತು||
ನಿನ್ನ ಆರೋಗ್ಯ ಕೆಟ್ಟಾಗ ಯಾರಿಲ್ಲ
ನೋಡಿಕೊಳ್ಳುವವರು ನಿನ್ನನ್ನ
ಕೈತುಂಬ ಕೆಲಸ ಕಣ್ತುಂಬ ನಿದ್ದೆ
ಮನಸು ತುಂಬಾ ಇರಲಿ ಒಳ್ಳೆ ಕನಸು||
ಶ್ರೀಮತಿ ಸಂಗಮ್ಮ ಧಮ್ಮೂರಕರ
ಸ ಕಿ ಪ್ರಾ ಶಾಲೆ ಉರ್ದು ಅರೆಜಂಬಗಾ
ತಾ ಕಾಳಗಿ ಜಿ ಕಲಬುರಗಿ
ದೇಶದ ಸೌಭಾಗ್ಯ
ಯೋಗ ಧ್ಯಾನ ನಡಿಗೆ
ಆರೋಗ್ಯಕ್ಕೆ ಸಿದ್ದ ಅಡಿಗೆ
ಇವಕ್ಕೆ ಕೊಡಬೇಕಿಲ್ಲ ಬಾಡಿಗೆ
ಪಾಲಿಸಿ ಪಡೆಯಿರಿ ಸ್ವಾಸ್ಥ್ಯ ದ ಕೊಪ್ಪರಿಗೆ
ಆರೋಗ್ಯವೇ ನಮ್ಮ ಭಾಗ್ಯ
ಜನರ ಆರೋಗ್ಯವೇ ದೇಶದ ಸೌಭಾಗ್ಯ
ಆರೋಗ್ಯವಂತ ಮಾನವ ಯೋಗ್ಯ
ದೇಶವನ್ನು ಪ್ರಗತಿಯತ್ತ ಸಾಗಿಸುವ ಭಾಗ್ಯ
ಹಿತಮಿತವಾದ ಆಹಾರ
ಆರೋಗ್ಯದ ಆಗರ
ಶುಚಿಯಾದ ಬಿಸಿಯಾದ ಆಹಾರ
ಉತ್ತಮ ಆರೋಗ್ಯಕ್ಕೆ ಮೂಲಾಧಾರ
ಆರೋಗ್ಯವಿದ್ದರೆ ಸಂತಸ
ಆರೋಗ್ಯವಿದ್ದರೆ ಆಯುಷ್ಯ
ಆರೋಗ್ಯವಿದ್ದರೆ ಸಹವಾಸ
ಆರೋಗ್ಯವಿದ್ದರೆ ಉಲ್ಲಾಸ
ನೀಲಮ್ಮ ಎಸ್ ಸಾಲಿಮಠ
ಆರೋಗ್ಯ ಅಮೂಲ್ಯ
ಆರೋಗ್ಯ ಭಾಗ್ಯ ಪಡೆಯಲು
ಹಣ್ಣು-ತರಕಾರಿ ತಿನ್ನಿರಿ ಮೊದಲು
ಜೀವನ ಅಮೂಲ್ಯ ವಾಗಲು
ಯೋಗ ಧ್ಯಾನ ಮಾಡಿರಿ ಮೊದಲು
ಹಣವಿರುವವನಲ್ಲ ಆರೋಗ್ಯವಿಲ್ಲ
ಆರೋಗ್ಯ ವಿರುವವನಲ್ಲಿ ಮುಷ್ಟನವಿಲ್ಲ
ದೇಹವು ರೋಗದ ಗುಡಲ್ಲ
ಆರೋಗ್ಯ ಭಾಗ್ಯ ವಿರುವ ದೇಹವೇ ದೇಗುಲ
ದುಡಿದು ತಿಂದರೆ ಆರೋಗ್ಯ ಉಂಟು
ಕುಳಿತು ತಿಂದರೆ ರೋಗವು ಉಂಟು
ಆರಾಧನೆಯಲ್ಲಿ ಮನಃಶಾಂತಿ ಉಂಟು
ಮನ ಶಾಂತಿಯಲ್ಲಿ ಆರೋಗ್ಯದ ಗುಟ್ಟು
ದ್ವೇಷ ಅಸೂಯ್ಯ ಬೇಡಣ್ಣ
ಪ್ರೀತಿಯ ಮಂತ್ರವ ಜಪಿಸಣ್ಣ
ಆರೋಗ್ಯದಿಂದ ಆಯಸ್ಸು ಪಡಿಯಣ್ಣ
ಬಾಳಬೇಕು ನೀನು
ಕವಿತಾ ಶ್ರೀನಿವಾಸ್, ಕೊಡ್ಲಾ
ಗುಲ್ಬರ್ಗ ಜಿಲ್ಲೆ ಸೇಡಂ ತಾಲೂಕು
ಆರೋಗ್ಯ ಚಿರಾಯು
ಮೋಹಕ ವಸ್ತುಗಳು ಸವಿದು ಹಾಳಗಬೇಡ,
ಬಾಯಿ ಚಪಲಕ್ಕೆ ತಿಂದು ತೇಗಬೇಡ,
ಕಲುಷಿತ ಸೇವನೆ ಮಾಡೀತು ಕೇಡ,
ಆರೋಗ್ಯ ಕೆಟ್ಟಿತು ನೀ ನೋಡ.
ನಾವು ಬದುಕಲು ತಿನ್ನೋಣ,
ಆದರೆ, ತಿನ್ನಲಿಕ್ಕೆ ಬದುಕ ಬೇಡಣ್ಣ,
ಜೀವ ಜಗತ್ತು ದೊಡ್ಡದಣ್ಣ,
ಆರೋಗ್ಯ ಅರಿತು ನೀ ನಡೆಯಣ್ಣ.
ಆರೋಗ್ಯವಿದ್ದರೆ ನಾವೇಲ್ಲ ಚೆಂದ,
ಅನಾರೋಗ್ಯವಿದ್ದರೆ ಮನೆಯದಿ ಬಂಧ,
ಹಿತ ಮಿತ ಆಹಾರ ಬಲು ಅಂದ,
ಮನೆಯಲ್ಲಿ ಕುಣಿಯುತ್ತಿತ್ತು ಆನಂದ ಕಂದ.
ಆರೋಗ್ಯವಿದ್ದರೆ ದೇಹವೇ ದೇಗುಲ,
ಆರೋಗ್ಯ ತರಲಿ ನಂದ ಗೋಕುಲ,
ನಗು ಚೆಲ್ಲಿ ಮನವರಳಿ ನಲಿಯಲಿ,
ಬಾಳು ಬೆಳಕಾಗಲಿ ಚಿರಾಯು…?
ಧರ್ಮಣ್ಣ ಎಚ್ ಧನ್ನಿ
ಪತ್ರಕರ್ತರು,
ಸಂಯುಕ್ತ ಕರ್ನಾಟಕ ಪತ್ರಿಕೆ.ಕಲಬುರ್ಗಿ
ಆರೋಗ್ಯವೇ ಭಾಗ್ಯ
ಆರೋಗ್ಯವೇ ನಮ್ಮ ಭಾಗ್ಯ
ತಿಳಿದು ನಡೆದರೆ ಪಡೆಯುವೆ ನೀ ಸೌಭಾಗ್ಯ
ಸೇವಿಸು ಹಿತಮಿತವಾದ ಆಹಾರ
ಹೊಂದುವೆ ನಿರೋಗಿ ಶರೀರ ॥೧॥
ಸದೃಢವಾದ ಕಾಯದಲ್ಲಿ
ನೆಲೆಸುವುದು ಸದೃಢವಾದ ಮನಸ್ಸು
ಪಡೆಯಲು ಗಟ್ಟಿ ಶರೀರ
ಮಾಡು ನೀ ಯೋಗ ವ್ಯಾಯಾಮ ಕಸರತ್ತು॥ ೨॥
ತಾಜಾ ಹಣ್ಣು ಹಸಿರು ತರಕಾರಿ
ಮೊಳಕೆ ಕಾಳು ಮೊಟ್ಟೆ ಹಾಲು
ಸೇವಿಸು ಪೌಷ್ಟಿಕಾಂಶವುಳ್ಳ ಆಹಾರ
ಪಡೆಯುವೆ ಗಟ್ಟಿಮುಟ್ಟಿ ಶರೀರ ॥ ೩॥
ಆಳಾಗಿ ದುಡಿ ಅರಸನಾಗಿ ಉಣ್ಣು
ಸುಖ ಶಾಂತಿಗೆ ದೂರಬೇಡ ಪರರನ್ನು
ಇದ್ದುದರಲ್ಲಿಯೇ ಪಡೆ ಸಂತೋಷವನ್ನು
ಕಾಣುವೆ ಜೀವನದಲ್ಲಿ ಸಾಮರಸ್ಯವನ್ನು ॥ ೪॥
ಶ್ರೀಮತಿ ವೆಂಕುಬಾಯಿ ಎಸ್ ರಜಪೂತ (ಪ್ರೇಮಾ).
ತಾ:ಆಳಂದ
ಕಾಯಕವೇ ಆರೋಗ್ಯ
ಬಂಡ ಬಾಳಿನಲ್ಲಿ ಆರೋಗ್ಯವು ಮುಖ್ಯ
ಬಂಡಿ ಏಳೆಯಲು ಬೇಕು ಕಸುವಿನ ಸೌಖ್ಯ
ಕಾಯಕಕ್ಕೆ ಕಾಯಕದಿಂದಲೇ ಸೌಭಾಗ್ಯ
ಮಿತಆಹಾರ ನೆಮ್ಮದಿ ಖುಷಿ ಆಗರದ ಭಾಗ್ಯ
ಧನಕನಕ ಇದ್ದರೇನು ಇಲ್ಲದಿರೇ ಆರೋಗ್ಯ
ಜೀವನದಲಿ ಶಿಸ್ತು ಹಾಕಿಕೊಂಡರೆ ಯೋಗ್ಯ
ಕಲಬರಿಕೆ ಜಗದಲಿ ಯೋಗ ಧ್ಯಾನ ಮುಖ್ಯ
ಉತ್ತಮ ಜೀವನಶೈಲಿ ನರಜೀವಕೆ ಸೌಭಾಗ್ಯ
ಕೊರೋನಾ ಹವಾಳಿಗೆ ದಿವಾಳಿ ಬಾಳಾಗಿದೆ
ಕಾಣದ ಕ್ರಿಮಿ ಜೀವದ ಜೀವನ ತಲ್ಲಣಿಸಿದೆ
ಅಹಂ ಅಹಂಕಾರ ಕೊಡು ಮುರಿದು ಹಾಕಿದೆ
ಸ್ವಾಥ೯ ನರನ ಪಾಪದ ಕೊಡವು ತುಳಿಕಿದೆ
ಮನುಜ ಹಸಿರು ಉಳಿಸಿ ಬೆಳಸಬೇಕು
ಪ್ರೀತಿ ವಿಶ್ವಾಸ ಬಾಂಧವ್ಯದಿ ಬದುಕಬೇಕು
ಸ್ವಾಥ೯ ಬಿಟ್ಟು ಆರೋಗ್ಯದಿ ಬಾಳಬೇಕು
ಆರೋಗ್ಯವೇ ಭಾಗ್ಯ ಅರಿತು ಸಾಗಬೇಕು .
ರತ್ನಾ ಎಂ ಅಂಗಡಿ ✍🏽
ಹುಬ್ಬಳ್ಳಿ
ಆರೋಗ್ಯ ಜೀವನ
ಶ್ರಮಪಡುವ ಜನರುಕಾಯಕಮಾಡುವರು
ದೇಹಕ್ಕೆ ಆಹಾರ ಸೇವಿಸುವರು
ಸಮತೋಲನ ಆಹಾರ ತಿನ್ನುವರು||
ನಮ್ಮನ್ನು ನಾವು ಪ್ರೀತಿಸಬೇಕು
ಆರೋಗ್ಯ ದೇಹದ ಆರೋಗ್ಯ ಮನಸ್ಸು ಬೇಕು
3 ಲೀಟರ್ ನೀರು ಕುಡಿಯಬೇಕು||
ಧೂಮಪಾನ, ಮದ್ಯಪಾನ ಬಿಡಬೇಕು
ರೋಗ ಬರದಂತೆ ಆರೋಗ್ಯ ನೋಡಬೇಕು
ಪ್ರತಿದಿನ ಹಣ್ಣಿನ ರಸ ಸೇವಿಸಬೇಕು||
ಯೋಗದಿಂದ ಭವಭಂಗಿ ಹೊರಳಬೇಕು
ಭವ ಭಂಗಿಯಿಂದ ಯೋಗ ಅರಳಬೇಕು
ಆರೋಗ್ಯ ಜೀವನ ಆಗಬೇಕು||
ಬೆಳಿಗ್ಗೆ ಜಲ್ದಿ ಎದ್ದುರಾತ್ರಿ ಜಲ್ದಿಮಲಗಬೇಕು
ಮುಂಜಾನೆ ರಾಜನ ತರ ತಿನ್ನಬೇಕು ಮಧ್ಯಾಹ್ನ ಶ್ರೀಮಂತ ತರ ತಿನ್ನಬೇಕು ರಾತ್ರಿ ಭಿಕ್ಷುಕನ ತರ ತಿನ್ನಬೇಕು||
“ಆರೋಗ್ಯವೇ ಭಾಗ್ಯ” ಸರ್ವ ಜನರಿಗೆ
ಶ್ರೀಮತಿ ಅನಸೂಯ ಬಾಯಿ ಎಸ್ ನಾಗನಹಳ್ಳಿ ಸಹಶಿಕ್ಷಕರು ತಾಲೂಕು ಆಳಂದ್ ಜಿಲ್ಲಾ ಕಲಬುರಗಿ