ಕವನ: ಅನ್ನದಾತ ರೈತ

Must Read

ಅನ್ನದಾತ ರೈತ

ಹಗಲಿರುಳು ದುಡಿಯತ್ತಾನೆ
ಮಾಡಿಕೂಳ್ಳದೆ ಬೇಸರ
ಇವನ ದುಡಿಮೆಗೆ ಜೊತೆಯಾಗಿರುತ್ತಾನೆ
ನೇಸರ
ಎತ್ತುಗಳ ಜೊತೆಯಾಗಿ ಉಳುತ್ತಾನೆ
ಸರಸರ
ಇವನ ಮನದಲ್ಲಿ ಎಂದು ಸುಳಿಯದು
ಅಹಂಕಾರ‌
ಭೂಮಿತಾಯಿ ಮೇಲೆ ಇದೆ
ಇವನಿಗೆ ಮಮಕಾರ
ಇವನಿಗೆ ಗೊತ್ತು “ಕೈ ಕೆಸರಾದರೆ
ಬಾಯಿ ಮೊಸರ”
ದಬ್ಬಾಳಿಕೆ ನಡೆಯುತ್ತಿದೆ ಇವನ
ಮೇಲೆ ನಿರಂತರ
ಸಮಾಜಕ್ಕೆ ಇಲ್ಲ ಇವನ
ಮೇಲೆ ಕನಿಕರ
ಸಿಗುತ್ತಿಲ್ಲ ಇವನ ಬೆಳೆದ
ಬೆಳೆಗೆ ಪರಿಹಾರ
ಅನ್ನದಾತನ ಬಗ್ಗೆ ಮಾಡಬೇಡಿ
ತಾತ್ಸಾರ
ಇವನು ಬೆಳೆಯದಿದ್ದರೆ ಜಗತ್ತಿಗೆ
ಬರುತ್ತೆ ಸಂಚಕಾರ
ಅನ್ನದಾತರೆ ನಿಮಗೆ ಬರದಿರಲಿ
ಆತ್ಮಹತ್ಯೆ ವಿಚಾರ.
ರೈತರಿಗೆ ಹೇಳಿ ಜೈಕಾರ
ದೇಶ ಬೆಳೆಯುತ್ತದೆ ಉತ್ತರೊತ್ತರ.


ಕಿರಣ.ಯಲಿಗಾರ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group