ಕವನ: ಕಾಲ ಚಕ್ರದ ಸುಳಿಯಲ್ಲಿ

Must Read

ಕಾಲ ಚಕ್ರದ ಸುಳಿಯಲ್ಲಿ

ಬದುಕಿನ ಬವಣೆಯಲ್ಲಿ
ಹೊತ್ತು ಮುಳಗಿ
ಹೊತ್ತು ಅರಳಿದೆ
ಕಾಲ ಚಕ್ರದ ಸುಳಿಯಲ್ಲಿ ….

ಮತದಾರನ ಮನೆಯ ಮುಂದೆ
ಓಟಿಗಾಗಿ ನಡೆಯುತ್ತಿದೆ
ರಾಜಕೀಯ ದೊಂಬರಾಟ
ಕಾಲ ಚಕ್ರದ ಸುಳಿಯಲ್ಲಿ ….

ತುತ್ತು ಅನ್ನ ಸಂಪಾದನೆಗೆ
ಹೋರಾಟ ಪ್ರತಿ ನಿತ್ಯ
ಜೀವನದ ಯಾನದಲ್ಲಿ
ಕಾಲ ಚಕ್ರದ ಸುಳಿಯಲ್ಲಿ ….

ಶರವೇಗದಲ್ಲಿ ಹರಿಯುತ್ತಿದೆ
ಪ್ರಜಾಪ್ರಭುತ್ವದಲ್ಲಿ
ಸುಳ್ಳಿನ ಭರವಸೆಯ ಕಂತೆ ಕಂತೆ
ಕಾಲ ಚಕ್ರದ ಸುಳಿಯಲ್ಲಿ


ತೀರ್ಥಹಳ್ಳಿ ಅನಂತ ಕಲ್ಲಾಪೂರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group