spot_img
spot_img

ಆರೋಗ್ಯಕರ ವಿಚಾರಗಳಿಂದ ಆತ್ಮರಕ್ಷಣೆ ಸಾಧ್ಯವಿದೆ

Must Read

- Advertisement -

We Come With Nothing, We go with Nothing, but one Great thing We can achieve in our Beautiful Life is -A Little remembrance in Someone’s Mind and a Small Place in Someone’s Heart.

ಯಾರನ್ನೂ ಓಲೈಸಬೇಕಿಲ್ಲ ಎಂಬ ಸತ್ಯ ತಿಳಿದಾಗಲೆ ನಮ್ಮ ಸ್ವಾತಂತ್ರ್ಯ ಪ್ರಾರಂಭವಾಗುತ್ತದೆ.

ಇಲ್ಲಿ ನಾವು ಯಾರಿಗೋ ಶರಣಾಗಿ ಯಾರನ್ನೋ ಓಲೈಸಿಕೊಂಡು ಜೀವನ ನಡೆಸುವಾಗ ಯಾರೋ ನಮ್ಮನ್ನು ಆಳುತ್ತಿರುವ ಅನುಭವವಾಗುತ್ತದೆ.ಇದು ಭೌತಿಕ ಜಗತ್ತಿನಲ್ಲಿ ನಡೆಯುತ್ತಿರುವ ಸತ್ಯ.

- Advertisement -

ಹಾಗೆಯೇ ಅಧ್ಯಾತ್ಮಿಕ ಜಗತ್ತಿನಲ್ಲಿ ನಾವು ಮುಂದೆ ನಡೆಯಬೇಕಾದರೆ ಹೊರಗಿನ‌ ಓಲೈಕೆಯಿಂದ ಒಳಗಿನ ಹಾರೈಕೆ ಮುಖ್ಯ. ನಮ್ಮೊಳಗಿರುವ ಜ್ಞಾನವನ್ನು ಪ್ರದರ್ಶನಕ್ಕೆ ಬಳಸುತ್ತಾ ಹೊರಬಂದವರಿಗೆ ತಿರುಗಿ ಒಳ ನಡೆಯುವುದು ಕಷ್ಟ.

ಹೀಗಾಗಿ ಹಿಂದಿನ ಮಹಾತ್ಮರುಗಳು ಜೀವ ಇದ್ದಾಗ ಯಾವ ಓಲೈಕೆಗಳಿಗೆ ಶರಣಾಗದೆ ತಮ್ಮನ್ನು ತಾವರಿತು ಕಷ್ಟಪಟ್ಟು ಸತ್ಯ,ಧರ್ಮದ ಕಡೆಗೆ ಒಬ್ಬಂಟಿಯಾಗಿಯೇ ಹೋದರು. ಬರೋವಾಗ ಒಬ್ಬರೆ ಹೋಗುವಾಗಲೂ ಒಬ್ಬರೆ ಬಂದು ಹೋಗುವ‌ ನಡುವಿರುವ ಅಂತರದಲ್ಲಿರುವ ಅನೇಕರ ಓಲೈಕೆಗಳಿಂದ ಸ್ವಾತಂತ್ರ್ಯ ಸಿಕ್ಕರೆ ಉತ್ತಮ.

ಸ್ವಾತಂತ್ರ್ಯ ಕಳೆದುಕೊಂಡು ಹೋದರೆ ಇದೆ ನಷ್ಟ. ಎಲ್ಲರೂ ಮಾಡೋದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುವಾಗ ಯಾರನ್ನು ಬೇಡಿ ಕಾಡಿ ಪಡೆದು ತಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯಾದಾಗಲೆ ಆತ್ಮಕ್ಕೆ ಶಾಂತಿ ಸಿಗೋದಿಲ್ಲ. ಶಾಂತಿ,ತೃಪ್ತಿ ಮುಕ್ತಿ ಪಡೆಯಲು ಸ್ವತಂತ್ರ ಜ್ಞಾನವಿರಬೇಕು.

- Advertisement -

ಸ್ವತಂತ್ರ ಜ್ಞಾನ ಒಳಗಿರುತ್ತದೆ. ಅದನ್ನು ಗುರುತಿಸಿ ಶಿಕ್ಷಣ ನೀಡಿದಾಗಲೇ ಮಕ್ಕಳು ಸ್ವತಂತ್ರ ವಾಗಿ ಜೀವನ ನಡೆಸಬಹುದು. ಅಡ್ಡದಾರಿ ಹಿಡಿದು ಯಾರನ್ನೋ ಮನವೊಲಿಸಲು ಹೋದವರು ತಿರುಗಿ ಸೀದಾದಾರಿಗೆ ಬಂದು ಅಂತ್ಯ ಕಾಣಲೇಬೇಕು. ದಾರಿ ಯಾವುದಯ್ಯಾ ಸ್ವರ್ಗಕ್ಕೆ ಎಂದರೆ ಸತ್ಯ, ಧರ್ಮದ ಸ್ವತಂತ್ರವಾಗಿರುವ ಜ್ಞಾನದ ಮಾರ್ಗವೆನ್ನಬಹುದು.ಜ್ಞಾನ‌ ಒಳಗಿದೆ ವಿಜ್ಞಾನ ಹೊರಗಿದೆ.

ಜ್ಞಾನ ಬೆಳೆಯಲು ಹಣದ ದಾನ ಮಾಡಬೇಕು ವಿಜ್ಞಾನ ಬೆಳೆಸಿಕೊಳ್ಳಲು ಹಣವನ್ನು ಸುರಿಯಬೇಕು. ಇಲ್ಲಿ ಆಧ್ಯಾತ್ಮಿಕ ವಿಜ್ಞಾನದಲ್ಲಿ ಹಣಕ್ಕಿಂತ ಗುಣವನ್ನು ಬೆಳೆಸಿಕೊಳ್ಳುವುದು  ಮುಖ್ಯವಾಗಿದೆ ಎನ್ನಬಹುದು. ವಿದ್ಯೆ ಹೊರಗಿನಿಂದ  ಪಡೆಯುವಾಗ ಆಂತರಿಕ ಜ್ಞಾನದ ಬಗ್ಗೆ ತಿಳಿದಿದ್ದರೆ ಅದಕ್ಕೆ ಪೂರಕವಾದ ಶಿಕ್ಷಣ ನೀಡಿದರೆ ಜ್ಞಾನೋದಯವಾಗುತ್ತದೆ.

ಇದಕ್ಕೆ ವಿರುದ್ಧದ ಶಿಕ್ಷಣ ನೀಡಿದರೆ ಅದೇ ಮುಂದೆ ಮಾರಕವಾಗುವ ಸಾಧ್ಯತೆಯಿದೆ. ಹಣ ಗಳಿಸುವುದಕ್ಕಾಗಿ ಶಿಕ್ಷಣದಲ್ಲಿ ಸುಜ್ಞಾನದ ಜೊತೆಗೆ ವಿಜ್ಞಾನವಿರಬೇಕು. ಒಂದು ಬಿಟ್ಟು ಇನ್ನೊಂದು ನಡೆದರೆ ಒಕ್ಕಣ್ಣ ಸ್ಥಿತಿ. ಸ್ವತಂತ್ರ ಜ್ಞಾನದಿಂ ದಮಾನವ ಸ್ವತಂತ್ರ ವಾಗಿ ನಡೆಯಬಹುದು. ಪರತಂತ್ರ ಜ್ಞಾನ ಅತಂತ್ರಸ್ಥಿತಿಗೆ ಕಾರಣವಾಗಬಹುದು.

ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದ ಮೇಲೆ ನಮಗೆ ಶಿಕ್ಷಣದಲ್ಲಿ ಬದಲಾವಣೆಯ ಅವಶ್ಯಕತೆ ಕಾಣುತ್ತಿದೆ. ಕಾರಣ ಇದರ ಪ್ರತಿಫಲವನ್ನು ಅನುಭವಿಸುತ್ತಿರೋದು ಇಡೀ ಸಮಾಜ. ಸಂಸಾರದ ಚೌಕಟ್ಟಿನಿಂದ ಒಮ್ಮೆ ಹೊರಬರಲೇಬೇಕು. ಸಮಾಜದ ಮಧ್ಯೆ ನಿಂತು ಸತ್ಯ ತಿಳಿದಾಗಲೇ ನಿಜವಾದ ಸತ್ಯದರ್ಶನ ಸಾಧ್ಯ. ಇದು ಯಾರ ತಪ್ಪಲ್ಲ ಕಾಲದ ಪ್ರಭಾವವಷ್ಟೆ. ಬದಲಾವಣೆ ಜಗದ ನಿಯಮ. ಹಾಗೆಯೇ ಶಿಕ್ಷಣದಲ್ಲಿಯೂ ಉತ್ತಮ ಬದಲಾವಣೆಯಾದರೆ ಶಾಂತಿ.

ಇದಕ್ಕಾಗಿ ಯಾರನ್ನೋ ಬೇಡುವ ಅಗತ್ಯವಿಲ್ಲ. ಓಲೈಸುವ ಅಗತ್ಯವಿಲ್ಲ. ಪೋಷಕರಾದವರು ತಮ್ಮ ಮೂಲದ ಜ್ಞಾ‌ನ ಸದ್ಬಳಕೆ ಮಾಡಿಕೊಂಡು ಅಳವಡಿಸಿಕೊಂಡರೆ ಮಕ್ಕಳು ಸ್ವತಂತ್ರವಾಗಿ ಜೀವನ ಸತ್ಯವನ್ನರಿತು ಜೊತೆಗೆ ಹೆಜ್ಜೆ ಹಾಕಬಹುದಷ್ಟೆ. ನಮ್ಮ ಜ್ಞಾನವೇ ನಮಗೆ ಶತ್ರು ಎನಿಸಿದರೆ ನಮಗೆ ನಾವೇ ವೈರಿಗಳಷ್ಟೆ.

ಒಳಗಿರುವ ಅತಿಯಾದ ಆಸೆ,ಆಕಾಂಕ್ಷೆ, ಸ್ವಾರ್ಥ,ಅಹಂಕಾರಕ್ಕೆ ಹೊರಗೆ ಮದ್ದಿಲ್ಲ. ಇವೇ ಮಾನವನ ಹಿತಶತ್ರುಗಳು. ಇದನ್ನು ಶಿಕ್ಷಣದಿಂದ ದೂರ ಮಾಡೋದೆ ಗುರು ಹಿರಿಯರ ಧರ್ಮ ಕರ್ಮ. ಕಾಲಚಕ್ರ ತಿರುಗುವುದನ್ನು, ಭೂಮಿ ತಿರುಗುವುದನ್ನು ಯಾರೂ ನಿಲ್ಲಿಸಲಾಗದು. ಉತ್ತಮ ಬದಲಾವಣೆಗೆ ನಾವೇ ಮನಸ್ಸು ಮಾಡಿದರೆ ಒಳ್ಳೆಯದಾಗುತ್ತದೆ. ಹೆಚ್ಚು ಹಣ ಗಳಿಸುವವರು ಸುಖಿ ಎಂದಲ್ಲ.

ಕಡಿಮೆ ಹಣವಿರುವವರು ದು:ಖಿಗಳಲ್ಲ. ಯಾರಲ್ಲಿ ಅಜ್ಞಾನವಿರುವುದೋ ಅವರಿಗೆ ಹಣದ ಸದ್ಬಳಕೆ ಮಾಡುವುದು ಕಷ್ಟ.ಹೀಗಾಗಿ ಜ್ಞಾನದಿಂದ ಹಣಗಳಿಸುವ ಶಿಕ್ಷಣದ ಅಗತ್ಯವಿದೆ ಎನ್ನಬಹುದು. ಇದು ನಮ್ಮೊಳಗೂ ಹೊರಗೂ ಶಾಂತಿ ತರಬಹುದು. ಪೋಷಕರು ಎಂದರೆ ಕೇವಲ ಮಕ್ಕಳ ಪೋಷಕರಾಗದೆ ದೇಶದ ಪೋಷಕರಾದರೆ ಸದ್ಗತಿ.

ಭಾರತೀಯರಿಗೆ ಆತ್ಮವೆ ದೇಶ. ಅದರೊಳಗಿರುವ‌ ಪ್ರಜೆಗಳಾದ ನಮ್ಮಲ್ಲಿರುವ ಜೀವಶಕ್ತಿಗೆ ಪೂರಕವಾದ ಆಹಾರ ನೀಡಿದರೆ ಆರೋಗ್ಯ ಉತ್ತಮವಾಗಲು ಸಾಧ್ಯ. ಆರೋಗ್ಯಕರ ವಿಚಾರಗಳಿಂದ ಆತ್ಮರಕ್ಷಣೆ ಸಾಧ್ಯವಿದೆ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group