- Advertisement -
ವಿವೇಕನ ನೋಟ
ಭಾರತ ಮಾತೆಯ ಹೆಮ್ಮೆಯ ಸಿಂಹಗಳೇ
ಏಳಿ ಎದ್ದೇಳಿ ಎಂದು ಕರೆಕೊಟ್ಟು
ಹೋದ ನನಗೆ ನಿದ್ದೆಯೇ ಇಲ್ಲ
- Advertisement -
ಮಲಗಿದವರನ್ನು ಎಚ್ಚರಿಸಬಹುದು
ಮಲಗಿದಂತೆ ನಾಟಕ ಮಾಡುವವರನ್ನು ನಾ ಹೇಗೆ ಎಚ್ಚರಿಸಲಿ
ಭರತ ಭೂಮಿಯ ಪುಣ್ಯ ಸಿಂಹಗಳೇ
- Advertisement -
ಭಾರತಮಾತೆ ಭರತಭೂಮಿಯ
ಚರಿತೆ ಮರೆತು ಹೋಯಿತೇ?
ಯುವಕರ ಐಕಾನ್ ಆಗಿದ್ದ ನನ್ನನ್ನು
ಕೇವಲ ಚಿತ್ರಪಟ ಜನ್ಮದಿನಾಚರಣೆಗೆ ಸೀಮಿತಗೊಳಿಸಿದ್ದೀರಿ
ಭಾರತ ಬದಲಾಗುವುದನ್ನು ಕಾಣಬೇಕೆಂಬ ಬಯಕೆಯಿಂದ ನನ್ನ ದೂರದೃಷ್ಟಿ ನೆಟ್ಟಿರುವೆ
ಬದಲಾಯಿಸುವಿರಾ ಭವಿಷ್ಯದ ಭಾರತವ?
ಸಹೋದರ ಸಹೋದರಿಯರೇ ನಿಮ್ಮೊಡಲಿನಿಂದ ಹೇಳಿ ನನ್ನ
ಈ ನೋಟವ ಅರ್ಥ ಮಾಡಿಕೊಳ್ಳಿ
ನಿಮ್ಮ ಮುಂದಿರುವ ಭವಿಷ್ಯ ಬದಲಾಯಿಸಿಕೊಳ್ಳಿ
ಶಿವಕುಮಾರ ಕೋಡಿಹಾಳ
ಮೂಡಲಗಿ