ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

Must Read

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಪ್ರದೀಪ ತಂದೆ ಸೂರಪ್ಪ @ ಸುರೇಶ ಯಂಟಮಾನ ರನ್ನು ಕಟ್ಟಿಗೆ, ಇಟ್ಟಿಗೆಗಳಿಂದ ಮತ್ತು ಕಲ್ಲುಗಳಿಂದ ತಲೆಯ ಹಿಂಬದಿಯಲ್ಲಿ ಹೊಡೆದು ಭಾರಿ ಗಾಯಪಡಿಸಿ ಬರ್ಬರವಾಗಿ ಹತ್ಯೆಗೈದು ಆರೋಪಿಗಳು ಪರಾರಿಯಾದ ಪ್ರಕರಣ ಆಲಮೇಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್.ಪಿ. ರಾಮ ಅರಸಿದ್ದಿ, ಇಂಡಿ ಡಿಎಸ್ಪಿ ಶ್ರೀಧರ ದೊಡ್ಡಿ, ಸಿಪಿಐ ಎಚ್. ಎಮ್. ಪಟೇಲ. ಪಿಎಸ್‍ಐ ಸುರೇಶ ಆರ್ ಗಡ್ಡಿ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಕೊಂಡಿದ್ದಾರೆ.

ಹಿನ್ನೆಲೆ: ಕೊಲೆಯಾದ ಪ್ರದೀಪ ಈತನು ಸನ್ 2016 ರಲ್ಲಿ ಆಲಮೇಲ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ 13 ನೇ ವಾರ್ಡನಲ್ಲಿ ಕಾಂಗ್ರೆಸ್ ಪಕ್ಷದಿಂದ ಆರಿಸಿ ಬಂದಿದ್ದನು. ಸದರ ಚುನಾವಣೆಯಲ್ಲಿ ಆತನ ವಿರುದ್ದ ಚುನಾವಣೆಗೆ ನಿಂತಿದ್ದ ಆರೋಪಿತರ ಪೈಕಿ ಗುಂಡು ತಂದೆ ತಿಪ್ಪಣ್ಣ ಮೇಲಿನಮನಿ ಈತನು ಸೋತಿದ್ದನು. ಮತ್ತು ಚುನಾವಣೆ ಸಂದರ್ಭದಲ್ಲಿ ಆರೋಪಿತರ ಕಡೆಯ ಜನರಿಗೂ ಮತ್ತು ಫರ್ಯಾದಿಯ ಕಡೆಯ ಜನರಿಗೂ ಜಗಳ ಗಲಾಟೆ ಆಗಿದ್ದರಿಂದ ಫಿರ್ಯಾದಿಯ ಕಡೆಯ ಜನರಿಗೂ ಮತ್ತು ಮೇಲಿನಮನಿ ಕಡೆಯ ಜನರಿಗೂ ವೈಮನಸ್ಸಾಗಿತ್ತು ಈ ಸಲ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಪ್ರದೀಪ ಇತನು 17 ನೇ ವಾರ್ಡದಿಂದ ಚುನಾವಣೆಗೆ ನಿಲ್ಲಬೇಕು ಅಂತಾ ತಯಾರಿಯಲ್ಲಿದ್ದನು ಇದೇ ಸಿಟ್ಟಿನಿಂದ ಆರೋಪಿತರಾದ ಸೋಮನಾಥ ತಂದೆ ದವಲಪ್ಪ ಮೇಲಿನಮನಿ, ಭೀಮು ತಂದೆ ತಿಪ್ಪಣ್ಣ ಮೇಲಿನಮನಿ, ಸಂಜು ತಂದೆ ಸಂಗಪ್ಪ ಮೇಲಿನಮನಿ, ಗೌತಮ ತಂದೆ ಗಾಲೀಬ ಮೇಲಿನಮನಿ, ಮುತ್ತು ತಂದೆ ಭೀಮು ಮೇಲಿನಮನಿ, ಪಿಂಟೊ ಉರ್ಫ ಸಂಗಪ್ಪ ತಂದೆ ಭೀಮು ಮೇಲಿನಮನಿ, ದೇವು ತಂದೆ ಅನೀಲ ಮೇಲಿನಮನಿ, ಶಿವಪುತ್ರ ತಂದೆ ಸಂಗಪ್ಪ ಮೇಲಿನಮನಿ, ವೀರೇಶ ತಂದೆ ಗುರುರಾಜ ಮೇಲಿನಮನಿ, ಸಂತೋಷ ತಂದೆ ಶಾಂತಪ್ಪ ಮೇಲಿನಮನಿ, ಶಿವು ತಂದೆ ಶಾಂತಪ್ಪ ಮೇಲಿನಮನಿ, ಸತೀಶ ತಂದೆ ಅನೀಲ ಮೇಲಿನಮನಿ, ಗುಂಡು ತಂದೆ ತಿಪ್ಪಣ್ಣ ಮೇಲಿನಮನಿ ಸೇರಿದಂತೆ 13 ಜನ ಸೇರಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಮೃತನ ತಂದೆ ಸೂರಪ್ಪ ಯಂಟಮಾನ ಫಿರ್ಯಾದಿಯಲ್ಲಿ ತಿಳಿಸಿದ್ದಾರೆ.


ನಿನ್ನೆ ತಡರಾತ್ರಿ ರೌಡಿಶೀಟರ್ ಪ್ರದೀಪ ಎಂಟಮಾನನ್ನು ಕೊಲೆ ಮಾಡಿದ ಸೋಮನಾಥ ಸೇರಿದಂತೆ 13 ಜನ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ ಅಲ್ಲದೇ ಹತ್ಯೆಯಾಗಿರುವ ಪ್ರದೀಪ ಆಲಮೇಲ ಪಟ್ಟಣ ಪಂಚಾಯತಿಯ 17ನೇ ವಾರ್ಡಿಗೆ ಸ್ಪರ್ಧಿಸಲು ಎಲ್ಲ ತಯಾರಿ ಮಾಡಿಕೊಂಡಿದ್ದ ಅದಕ್ಕಾಗಿ ಸೋಮನಾಥ ಸೇರಿದಂತೆ 13 ಜನ ಆರೋಪಿಗಳು ಕಟ್ಟಿಗೆ ಹಾಗೂ ಕಲ್ಲುಗಳಿಂದ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ, ಹತ್ಯೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ, ಹತ್ತು ಜನ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ, ಇದೊಂದು ರಾಜಕೀಯ ದ್ವೇಷ ಎನ್ನುವದು ಮೇಲ್ನೋಟಕ್ಕೆ ಕಂಡು ಬಂದಿದೆ.

ಆನಂದಕುಮಾರ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಪೂರ

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group