spot_img
spot_img

ಪಿಯುಸಿ ಫಲಿತಾಂಶ; ಆರ್ ಡಿ ಪಾಟೀಲ ಕಾಲೇಜಿನ ಅದ್ಭುತ ಸಾಧನೆ

Must Read

- Advertisement -

ಸಿಂದಗಿ: 2022-23 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಕಲಾವಿಭಾಗದಲ್ಲಿ ಕುಮಾರ ಹಣಮಂತ ಭೂ. ಹಾದಿಮನಿ 586 (97.66%)  ಪ್ರಥಮಸ್ಥಾನ, ಕುಮಾರಿ ಮಲ್ಲಮ್ಮ ಈ.ಬಿರಾದಾರ 582 (97%), ದ್ವಿತೀಯಸ್ಥಾನ, ಕುಮಾರಿ ರಾಧಿಕಾ ತೆಗ್ಗಿನಮನಿ 581 (96.83%) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 

ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ಒಟ್ಟು ಕಲಾ ವಿಭಾಗದಲ್ಲಿ 83 ವಿದ್ಯಾರ್ಥಿಗಳು ಪಾಸಾಗಿದ್ದಾರೆ.    

- Advertisement -

ವಾಣಿಜ್ಯ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ಕುಮಾರ ಸಮೀರ ಮಂದೇವಾಲಿ 578 (96.33%), ಕುಮಾರಿ ಶ್ವೇತಾ ಹೊಸಮನಿ 574 (95.66%) ಕುಮಾರಿ ಪೂಜಾ ಅಕ್ಕಲಕೋಟ 573 (95.05%) ಸೇರಿದಂತೆ ವಾಣಿಜ್ಯ ವಿಭಾಗದಲ್ಲಿ 21 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ಕುಮಾರಿ ಆರತಿ ರಾ. ಕಡಕೋಳ 543 (90.05%)  ಕುಮಾರಿ ಅಶ್ವಿನಿ ಎ. ಮನಗೂಳಿ 541 (90.16%), ಕುಮಾರಿ ರಕ್ಷಿತಾ ಗೌಂಡಿ 533 (88.83%), ಮೋಶಿನಾ ಬಿ. ಪಾಟೀಲ 533 (88.83%)  ಒಟ್ಟು ವಿಜ್ಞಾನ ವಿಭಾಗದಲ್ಲಿ 14 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಕಲಾ, ವಾಣಿಜ್ಯ, ವಿಜ್ಞಾನ ಸೇರಿದಂತೆ ಒಟ್ಟು 118 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.

ಕಲಾ ವಿಭಾಗದಲ್ಲಿ 429 ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ 309 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ ಪ್ರತಿಶತ 72.02%, ವಾಣಿಜ್ಯ ವಿಭಾಗದಲ್ಲಿ 153 ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ 110 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ ಪ್ರತಿಶತ 72.00%, ವಿಜ್ಞಾನ ವಿಭಾಗದಲ್ಲಿ 317 ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ 206 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ ಪ್ರತಿಶತ 65.00% ರಷ್ಟಾಗಿದೆ. 

- Advertisement -

ಒಟ್ಟಾರೆ ಮಹಾವಿದ್ಯಾಲಯದಲ್ಲಿ 899 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ 625 ವಿದ್ಯಾರ್ಥಿಗಳು ಪಾಸಾಗಿದ್ದು ಮಹಾವಿದ್ಯಾಲಯದ ಪರೀಕ್ಷೆ ಪರಿಣಾಮ ಶೇಕಡಾ 70.00 % ರಷ್ಟಾಗಿದೆ. ಇದರಲ್ಲಿ 118 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. 

ಇವರ ಸಾಧನೆಗೆ ಸಂಸ್ಥೆಯ ಚೇರಮನ್ನರಾದ ಪೂಜ್ಯಶ್ರೀ ಪ್ರಭುಸಾರಂಗದೇವ ಶಿವಾಚಾರ್ಯರು, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಾಚಾರ್ಯ ವಿಮಲಕಾಂತ ಪಾಟೀಲ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group