ದಿ.20 ರಂದು ಬೆಳಗಾವಿಯ ಮಹಾಂತೇಶ ನಗರದ ಲಿಂಗಾಯತ ಸಂಘಟನೆಯ ವಾಷಿ೯ಕೋತ್ಸವ ಮತ್ತು ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಿಸಲಾಯಿತು.
ಆ ನಿಮಿತ್ತ ಏರ್ಪಡಿಸಿದ್ದ ಮೂರು ದಿನಗಳ ಕಾರ್ಯಕ್ರಮದ ಪ್ರಥಮ ದಿನದಂದು ಚಿತ್ತರಗಿ ವಿಜಯ ಮಹಾಂತೇಶ, ತೀಥ೯, ಶಿರೂರದ ಪೂಜ್ಯರಾದ ಮ.ನಿ.ಪ್ರ. ಡಾll ಬಸವಲಿಂಗ ಸ್ವಾಮೀಜಿಗಳು ಗುರು ಬಸವಣ್ಣನವರ ಸಮಾಜೋ-ಧಾಮಿ೯ಕ ಕ್ರಾಂತಿ ಕುರಿತಾದ ತಮ್ಮ ಪ್ರವಚನದಲ್ಲಿ ಶರಣರ ಕಾಯಕ ದಾಸೋಹದ ಪರಿಕಲ್ಪನೆಯ ಮೌಲಿಕತೆ, ದೇಹ, ಮನಸ್ಸು ಮತ್ತು ಆತ್ಮವಿಕಾಸಕ್ಕಾಗಿ ಶರಣರು ಕೊಟ್ಟ ಕಾಯಕ ,ಅರಿವು ಮತ್ತು ಆರಾಧನೆಯ ಮಹತ್ವವನ್ನು ವಿಶೇಷವಾಗಿ ಅಲ್ಲಮಪ್ರಭುಗಳ ಹಾಗೂ ಚೆನ್ನಬಸವಣ್ಣನವರ ವಚನ ವಿಮರ್ಶೆಯೊಂದಿಗೆ ವಿವರಿಸಿದರು.
ಕ್ಷಣವಾದರೂ ಸಾಕು. ನಿಜದ ನೆನಹೇ ಸಾಕು ಎನ್ನುವ ಅಲ್ಲಮಪ್ರಭುಗಳ ವಚನದಂತೆ ಲಿಂಗ ನಿಷ್ಠೆಯನ್ನು ಸಾದಿಸುವಲ್ಲಿ ಮನವು ಘನಮನವಾಗುವಲ್ಲಿ ಶಿವಯೋಗದ ಪಾತ್ರವನ್ನು ತಮ್ಮ ಅನುಭಾವದ ನುಡಿಗಳ ಮೂಲಕ ನೆರೆದಿರುವ ಶರಣ ಸಮೂಹವನ್ನು ಮಂತ್ರಮುಗ್ದರನ್ನಾಗಿಸಿದರು.
ಬೆಳಗಾವಿಯವರೇ ಆದ ಮಾತೋಶ್ರೀ ವಾಗ್ದೇವಿ ತಾಯಿಯವರು ಶರಣರ ನಡೆ, ನುಡಿ, ಸಾಮರಸ್ಯದ ಬದುಕು, ವಚನಗಳಲ್ಲಿರುವ ಜೀವನ ಮೌಲ್ಯಗಳನ್ನು ಸೂಕ್ಷ್ಮವಾಗಿ ಸೂಕ್ತ ದೃಷ್ಟಾಂತಗಳೊಂದಿಗೆ ತಿಳಿಯಪಡಿಸಿದರು.
ಮಾತೋಶ್ರೀ ಕುಮುದಿನಿ ತಾಯಿಯವರು ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಿಂಗಾಯತ ಸಂಘಟನೆಯ ಅಧ್ಯಕ್ಷರಾದ ಈರಣ್ಣ ದೇಯಣ್ಣವರ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಸಂಘಟನೆಯ ಮೂಲಕ ನೆರವೇರುತ್ತಿರುವ ರಕ್ತದಾನ ಶಿಬಿರ, ನೇತ್ರ ತಪಾಸಣೆ, ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪೂರಕವಾದ ಬೇಸಿಗೆ ಶಿಬಿರಗಳು ಹೀಗೆ ಹಲವಾರು ವಾರ್ಷಿಕ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.
ಬೆಳಗಾವಿಯ ಲಿಂಗಾಯತ ರುದ್ರಭೂಮಿಯ ಕಾಯಕಜೀವಿಯಾದ ಶರಣ ದೇವಪ್ಪ ಕಾಂಬಳೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ತಮ್ಮ ಪ್ರಾಮಾಣಿಕ ಸೇವೆಗಾಗಿ ಪೂಜ್ಯರಿಂದ ಸನ್ಮಾನ ಸ್ವೀಕರಿಸಿದರು.
ಶಂಕರಣ್ಣ ಗುಡಸ ಅವರು ದೇವಪ್ಪ ಕಾಂಬಳೆ ಅವರ ಸೇವೆ ಕುರಿತಾಗಿ ಪರಿಚಯಿಸಿದರು. ಸಂಘಟನೆಯ ಕಾರ್ಯದರ್ಶಿಗಳಾದ ಶರಣ ಸುರೇಶ ನರಗುಂದ ಸ್ಟಾಗತಿಸಿದರು. ಮಹಾದೇವಿ ಅರಳಿಯವರ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು.
ಸಂಘಟನೆಯ ಶರಣೆಯರ ಬಳಗದಿಂದ ವಚನ ನೃತ್ಯ ರೂಪಕ ಪ್ರದರ್ಶನ, ವಚನ ಗಾಯನ, ಪುಟಾಣಿ ಮಕ್ಕಳಿಂದ ನೃತ್ಯ ಪ್ರದರ್ಶನ…. ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ವೇದಿಕೆ ಶೋಭಿಸುವಂತಾಗಿತ್ತು.
ಪ್ರಸಾದ ದಾಸೋಹ ಸೇವೆಯನ್ನು ಶರಣರಾದ ಡಾll ಬಸವರಾಜ ಗೋಮಾಡಿ ವಹಿಸಿಕೊoಡಿದ್ದರು ಸಂಘಟನೆಯ ನಿಕಟಪೂರ್ವ ಅಧ್ಯಕ್ಷರಾಗಿದ್ದ ಶರಣರಾದ ಸದಾಶಿವ ದೇವರಮನಿ ಕಾರ್ಯಕ್ರಮದ ನಿರೂಪಣೆಗೈದರು. ಶಿಕ್ಷಕಿಯರಾದ ಶರಣೆ ಶ್ರೀದೇವಿ ನರಗುಂದ ವಂದನಾರ್ಪಣೆ ನೆರವೇರಿಸಿದರು.. ಇನ್ನೂ ಎರಡು ದಿನ ನಡೆಯುವ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬಾಗಿಗಳಾಗಲು ವಿನಂತಿಸಲಾಯಿತು. ಸಂಘಟನೆಯ ಉಪಾಧ್ಯಕ್ಷರಾದ ಸಂಗಮೇಶ ಅರಳಿ, ನಿಕಟಪೂರ್ವ ಅಧ್ಯಕ್ಷರಾದ ಶಶಿಭೂಷಣ ಪಾಟೀಲ್, ಸತೀಶ ಪಾಟೀಲ, ಅಶೋಕ ಇಟಗಿ, ವಿಜಯ ಹುದಲಿಮಠ, ಪ್ರಭು ಪಾಟೀಲ, ಮಹಾoತೇಶ ದೇಸಾಯಿ, ಶoಕರ ಶೆಟ್ಟಿ, ರಮೇಶ ಕಳಸಣ್ಣವರ ಶಿವನಗೌಡ ಪಾಟೀಲ ರಾಜಶೇಖರ ಡೋಣಿ, ಅನಸೂಯಾ ಬಶೆಟ್ಟಿ, ಪ್ರಭು ಪಾಟೀಲ, ವಿಜಯ ಹುದಲಿಮಠ, ದೀಪಾ ಪಾಟೀಲ್. ಲಕ್ಷ್ಮೀ ಜೇವನಿ , ಮಹಾಂತೇಶ ಮೆನಸಿನಕಾಯಿ, ಬಸವರಾಜ ಚೆಟ್ಟರ, ಹೀಗೆ ಸಂಘಟನೆಯ ಸರ್ವ ಸದಸ್ಯರಾದಿಯಾಗಿ ಬೆಳಗಾವಿಯ ಆಸಕ್ತ ಸಮಸ್ತ ಶರಣ ಸಮೂಹ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶೋಭೆ ತಂದುಕೊಟ್ಟರು.