spot_img
spot_img

ಪ್ರಗತಿ ಪಥದತ್ತ ಶಿವಾಪೂರ ಸೊಸಾಯಿಟಿ

Must Read

- Advertisement -

ಶಿವಾಪೂರ: ಎರಡು ಶಾಖೆಗಳನ್ನು ಹೊಂದಿರುವ ಮೂಡಲಗಿ ತಾಲೂಕಿನ ಶಿವಾಪೂರ ಗ್ರಾಮದ ಶಿವಾಪೂರ ಅರ್ಬನ್ ಕೋ ಆಪ್ ಸೊಸೈಟಿಯು ಗ್ರಾಹಕರಿಗೆ ಅತ್ಯುತ್ತಮ ಸಾಲ ಮತ್ತು ಹೂಡಿಕೆಯ ಅವಕಾಶಗಳನ್ನು ನೀಡುವ ಮೂಲಕ ಗ್ರಾಮೀಣ ಭಾಗದ ಜನರ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹಕಾರಿಯಾಗಿದೆ, ಮಾರ್ಚ ಅಂತ್ಯಕ್ಕೆ 15.61ಲಕ್ಷ ಲಾಭ ಗಳಿಸಿ ಪ್ರಗತಿಯತ್ತ ಸಾಗಿದೆ  ಎಂದು ಸೊಸೈಟಿಯ ಅಧ್ಯಕ್ಷರಾದ ಕಲ್ಲಪ್ಪ ಬ.ಬೆಂಡವಾಡ ಅವರು ಹೇಳಿದರು.

ಗುರುವಾರ ಸೊಸೈಟಿಯ ಸಭಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೊಸೈಟಿಯು 2023 ರ ಮಾರ್ಚ ಅಂತ್ಯಕ್ಕೆ  ರೂ 22.52ಲಕ್ಷ ಶೇರು ಬಂಡವಾಳ ಹೊಂದಿದ್ದು, 53.77ಲಕ್ಷ ನಿಧಿಗಳು, 8.75ಕೋಟಿ  ಠೇವುಗಳನ್ನು ಸಂಗ್ರಹಿಸಿ, 6.05ಕೋಟಿ ಸಾಲ ವಿತರಿಸಿ, 9.84ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದು ಹೇಳಿದರು. 

ಉಪಾಧ್ಯಕ್ಷರಾದ ಮಲ್ಲಪ್ಪ ಗೌ. ಪಾಟೀಲ ಮಾತನಾಡಿ, ಪ್ರತಿಯೊಂದು ಸೊಸೈಟಿ ಯು ಉತ್ತಮ ಪ್ರಗತಿ ಹೊಂದಲು ಗ್ರಾಹಕರು ಸರಿಯಾದ ಸಮಯಕ್ಕೆ ಸಾಲ ಮರು ಪಾವತಿ ಮಾಡಿದ್ದು ಕಾರಣ ಮತ್ತು ಸೊಸೈಟಿಯ ಎಲ್ಲ ಸಿಬ್ಬಂದಿ ವರ್ಗದವರ  ಪರಿಶ್ರಮವು ಮುಖ್ಯ ಹಾಗೂ ಬೆಟಗೇರಿಯಲ್ಲಿರುವ ಎರಡನೇ ಶಾಖೆಯು ಪ್ರಗತಿ ಪಥದತ್ತ ಸಾಗಿದೆ ಎಂದು ಹೇಳಿದರು. 

- Advertisement -

ಈ ಸಂದರ್ಭದಲ್ಲಿ ಸೊಸೈಟಿಯ ಮಾರ್ಗದರ್ಶಕರಾದ ಎಂ ಎಸ್. ಶೀಲನವರ, ನಿರ್ದೇಶಕರಾದ  ಎಸ್ ಎಸ್. ಶೆಕ್ಕಿ, ಎಸ್ ಎಸ್. ಗಿಡ್ಡನವರ, ಎಂ ಎಂ. ಜುಂಜರವಾಡ, ಐ ಎಸ್. ಗೊರಗುದ್ದಿ, ಯು ಎಂ. ಮುಧೋಳ, ಎನ್  ಡಿ.ಹಡಗಿನಾಳ, ವಿ ಎಂ. ಕದಂ, ಪ್ರಧಾನ ವ್ಯವಸ್ಥಾಪಕರಾದ ಡಿ ಬಿ. ಸುಣದೋಳಿ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group