ಕುಂದಾನಗರಿ ಹುಡುಗಿ ಪ್ರಿಯಾ ಸವದಿ ನಾಯಕಿ ನಟಿಯಾಗಿ ಅಭಿನಯಿಸುತ್ತಿರುವ ಹೊಸಚಿತ್ರ “ಸ್ಕೂಲ್ ಡೇ” ರಿಹರ್ಸಲ್ ಪೂರ್ಣಗೊಂಡಿದ್ದು ಚಿತ್ರತಂಡ ಇದೇ ಅಕ್ಟೋಬರ್ 05 ರಿಂದ ಚಿತ್ರೀಕರಣ ಶುರು ಮಾಡಲಿದ್ದಾರೆ. ಚಿತ್ರತಂಡದ ಮೂಲಗಳ ಮಾಹಿತಿಯಂತೆ ಸ್ಕೂಲ್ ಡೇ ಮೊದಲ ಹಂತದ ಚಿತ್ರೀಕರಣ ಅಕ್ಟೋಬರ್ 05 ರ ದಿನದಿಂದಲೇ ಶುರುವಾಗಲಿದ್ದು ಸುಮಾರು 20 ದಿನಗಳ ಕಾಲ ಬೆಳಗಾವಿಯ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
ಸ್ಕೂಲ್ ಡೇ ಚಿತ್ರದಲ್ಲಿ ಪ್ರಿಯಾ ಅವರಿಗೆ ನಾಯಕನಟನಾಗಿ ಸಂದೀಪ್ ಹಾವೇರಿ ಅಭಿನಯಿಸುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರ ಮನಗೆಲ್ಲಲು ಯಶಸ್ವಿಯಾಗಿರುವ ಸಂದೀಪ್ ಈಗ “ಸ್ಕೂಲ್ ಡೇ” ಮೂಲಕ ಹಿರಿತೆರೆಯಲ್ಲೂ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಉಳಿದಂತೆ ಪ್ರಿಯಾ, ಸಂದೀಪ್ ಅವರೊಂದಿಗೆ ಸ್ಕೂಲ್ ಡೇ ಚಿತ್ರದಲ್ಲಿ ಹೊಸ ಪ್ರತಿಭೆಗಳು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಎಲ್ಲ ಅಂದುಕೊಂಡತೆ ನಡೆದರೆ , ಈ ವರ್ಷದ ಕೊನೆಯೊಳಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ “ಸ್ಕೂಲ್ ಡೇ” ಚಿತ್ರೀಕರಣ ಪೂರ್ಣಗೊಳಿಸಿ, ಮುಂದಿನ ಅಕ್ಟೋಬರ್ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ಲಾನ್‌ನಲ್ಲಿದೆ ಚಿತ್ರತಂಡ. ಸಂಜಯ್ ಎಚ್ ಅವರ ನಿರ್ದೇಶನ, ಉಮೇಶ್ ಹಿರೇಮಠ ಚಿತ್ರದ ನಿರ್ಮಾಪಕರು, ಕೃಷ್ಣ ಛಾಯಾಗ್ರಹಣ, ತಂಡದಲ್ಲಿ ರಂಜಿತ್ ತಿಗಡಿ,
ಚಿತ್ರದಲ್ಲಿ ನಾಯಕ ನಟರಾಗಿ ಸಂದೀಪ್ ಹಾವೇರಿ ನಾಯಕಿ ನಟಿಯಾಗಿ ಪ್ರಿಯಾ ಸವದಿ ಉಳಿದ ಪಾತ್ರಗಳಲ್ಲಿ ಅನೀಲ ಹುದಳಿ, ದರ್ಶನ ರಜನ್ನವರ, ವೀರೇಂದ್ರ, ಅನಿಕೇತ, ನಮೃತಾ, ಸಂಜು ಬಸಯ್ಯ, ಮಜಾಭಾರತ ಬಸವರಾಜ, ಮುಂತಾದವರು ಅಭಿನಯಿಸುತ್ತಿದ್ದಾರೆ.
- ವರದಿ: ವಿಶ್ವಪ್ರಕಾಶ ಮಲಗೊಂಡ