ಸಿಂದಗಿ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪರಿಸರ ನಾಶವನ್ನು ತಡೆಗಟ್ಟಬೇಕಾಗಿದೆ. ಇದಕ್ಕೆ ಪೂರಕವಾಗಿ ನಾವು ದಿನನಿತ್ಯ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಬೇಕು. ಜೊತೆಗೆ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಮಕ್ಕಳ ಸಾಹಿತಿ ಹ.ಮ. ಪೂಜಾರ ಹೇಳಿದರು.
ಪಟ್ಟಣದ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಕ್ರಿಯೇಟಿವ್ ಕಿಡ್ಸ್ ಹೋಮ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ತಾಯಿ ಸ್ವರೂಪಿ ಅದು ನಮ್ಮನ್ನು ರಕ್ಷಿಸುತ್ತದೆ. ಪ್ರಕೃತಿಯು ನಮಗೆ ಉಚಿತವಾಗಿ ಗಾಳಿ, ಬೆಳಕು, ನೀರು, ಆಹಾರ ಒದಗಿಸಿ ಸಲುಹುತ್ತದೆ. ಪ್ರಕೃತಿಯನ್ನು ಸ್ವಚ್ಛವಾಗಿ ಇಡಬೇಕು. ಮುಂದಿನ ಪೀಳಿಗೆಗಾಗಿ ಈ ಅಮೂಲ್ಯ ಪರಿಸರವನ್ನು ಸಂರಕ್ಷಣೆ ಮಾಡಬೇಕು ಎಂದರು.
ಸಂಸ್ಥೆ ಅಧ್ಯಕ್ಷ ರಮೇಶ ಪೂಜಾರ, ಕಾರ್ಯದರ್ಶಿ ಡಾ.ಜ್ಯೋತಿ ಪೂಜಾರ, ಶಿಕ್ಷಕಿಯರಾದ ಸಾದನಾ ಇಮಡೆ, ಮಂಗಲಾ ಬಮ್ಮಣ್ಣಿ, ದಾನಮ್ಮ ಕೋರಿ, ಪ್ರೀಯಾ ಪವಾಡೆ, ರೇವತಿ ಬಳೂಂಡಗಿ, ಸಿಬ್ಬಂಧಿಗಳಾದ ಅಂಬಿಕಾರಿ ಕರಿಶೆಟ್ಟಿ, ಹೇಮಾ ಬಡಿಗೇರ, ರೆಹಮತ್ತಬಿ, ಆನಂದಯ್ಯಸ್ವಾಮಿ ಹಿರೇಮಠ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.