ಬೀದರ – ತಮ್ಮ ವಿರುದ್ಧ ವೈಯಕ್ತಿಕವಾಗಿ ಅವಾಚ್ಯ ಪದ ಬಳಸಿ ನಿಂದಿಸಿರುವ ಎಮ್ ಎಲ್ ಸಿ ಚಂದ್ರಶೇಖರ ಪಾಟೀಲ ವಿರುದ್ಧ ಶಾಸಕ ಸಿದ್ದು ಪಾಟೀಲ ಹುಮನಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ
ನಂತರ ಚಂದ್ರಶೇಖರ ಪಾಟೀಲ್ ಕುಟುಂಬದ ವಿರುದ್ದ ಆಕ್ರೋಶ ಹೊರಹಾಕಿದ ಶಾಸಕ ಸಿದ್ದು ಪಾಟೀಲ್, ಅಭಿವೃದ್ದಿ ಪರ ಚರ್ಚೆ ಮಾಡೋದು ಬಿಟ್ಟು, ರಾಜಕೀಯ ದ್ವೇಷ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ನೂತನ ಕಾಂಗ್ರೆಸ್ ಸಂಸದರು, ಎಮ್‌ಎಲ್‌ಸಿಗಳ ಅಭಿನಂದನಾ ಸಮಾರಂಭದಲ್ಲಿ ನನ್ನ ಬಗ್ಗೆ ಮಾತಾಡಿದ್ದಾರೆ. ಸಮಾರಂಭದಲ್ಲಿ ಕಾರ್ಯಕರ್ತರಿಗೆ ಧನ್ಯವಾದ ಹೇಳಬೇಕಿತ್ತು. ಆದರೆ ಎಮ್‌ಎಲ್‌ಸಿಗಳು ನನ್ನ ನಾಲಿಗೆ ಕಟ್ ಮಾಡ್ತಿನಿ ಅಂದಿದ್ದಾರೆ. ಅವರು ನನ್ನ ನಾಲಗೆ ಕಟ್ ಮಾಡಿದ್ರೆ, ಹುಮನಾಬಾದ್ ಜನತೆಯ ನಾಲಗೆ ಕಟ್ ಮಾಡಿದ ಹಾಗೆ. ಎಲ್ಲದರಲ್ಲೂ ರಾಜಕೀಯ ಮಾಡುವ ಕೆಲಸವನ್ನು ರಾಜಶೇಖರ ಪಾಟೀಲ್ ಸಹೋದರರು ಮಾಡುತ್ತಾ ಇದ್ದಾರೆ ಎಂದು ದೂರು ದಾಖಲಿಸಿ, ಪಾಟೀಲ್ ಕುಟುಂಬದ ವಿರುದ್ದ ಅಸಮಾಧಾನ ಹೊರಹಾಕಿದ ಶಾಸಕ ಸಿದ್ದು ಪಾಟೀಲ.
ವೈಯಕ್ತಿಕ ನಿಂದನೆ ಮಾಡಿದ ಎಮ್ ಎಲ್ ಸಿ ಚಂದ್ರಶೇಖರ ಪಾಟೀಲ ವಿರುದ್ದ ಸಿದ್ದು ಪಾಟೀಲ ಬೆಂಬಲಿಗರು ಕೂಡ ಘೋಷಣೆ ಹಾಕಿ ಪ್ರತಿಭಟನೆ ವ್ಯಕ್ತಪಡಿಸಿದರು.
ನಾಲಗೆ ಹರಿಬಿಟ್ಟ ಚಂದ್ರಶೇಖರ ಪಾಟೀಲ :
ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಸಂಸದರು, ಶಾಸಕರ ಸನ್ಮಾನ ಸಮಾರಂಭದಲ್ಲಿ ಚಂದ್ರಶೇಖರ ಪಾಟೀಲ ಮಾತನಾಡುತ್ತ, ಶಾಸಕ ಸಿದ್ದು ಪಾಟೀಲ ಅವರಿಗೆ ಪಾಕೀಟ ಎಮ್ ಎಲ್ ಎ ಎಂದು ಸಂಬೋಧಿಸಿದ್ದು, ಆತನ ನಾಲಗೆ ಕಟ್ ಮಾಡುತ್ತೇನೆ ಎಂದು ಗುಡುಗಿದರು.
ನಮ್ಮಣ್ಣ ರಾಜಶೇಖರ ಪಾಟೀಲ, ಭೀಮು ಪಾಟೀಲ ಈ. ವಿಷಯದಲ್ಲಿ ಸಮಾಧಾನದಿಂದ ಇರಬೇಕು. ಅವನನ್ನು ಗಣೇಶನ ಸೊಂಡಿಲಿನಿಂದ ಬಿಸಾಕಿ ಬಿಡುತ್ತೇವೆ, ಈ ಪಾಕೀಟ ಎಮ್ಎಲ್ಎ ನಾಲಿಗೆ ಕಟ್ ಮಾಡುತ್ತೇವೆ ಎಂದು ನುಡಿದರು.
ಸದ್ಯ ಚಂದ್ರಶೇಖರ ಪಾಟೀಲ ವಿರುದ್ಧ ಸಿದ್ದು ಪಾಟೀಲ ದೂರು ನೀಡಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ