ಕನ್ನಡದ ಜ್ಯೋತಿ
ಕರುನಾಡ ಕಂದ ವರನಟನ ಪುತ್ರನಿವ
ಕನ್ನಡಿಗರ ಹೆಮ್ಮೆ ಸರಳತೆಯ ಪ್ರತೀಕನಿವ
ಪರಮಾತ್ಮ ಕರುನಾಡಿಗೆ ನೀಡಿದ ಕಣ್ಮಣಿ ಇವ
ಕರುಣೆಯಲಿ ಪರಮ ಪುನೀತನಿವ
ಕನ್ನಡಿಗರ ಮಿಲನಕ್ಕೆ ಬೆಟ್ಟದ ಹೂವು ಒಂದು
ಕನ್ನಡದ ಕಂಪು ರಾಷ್ಟ್ರಮಟ್ಟದಿ ಸೂಸುತ್ತಾ ಬಂದು
ಸಿನಿರಂಗದಲ್ಲಿ ಅಣ್ಣಾಬಾಂಡ್ ಆಗಿ ಮಿಂಚಿ ಮೆರೆದು
ನೇತ್ರದಾನದ ಧನ್ಯತೆಯಲಿ ಅಮರವಾಗಿದೆ ತಾ ಇಂದು
ಅಭಿಮಾನಿಗಳ ಪ್ರಿಯ ರಾಜಕುಮಾರ
ನಟಸಾರ್ವಭೌಮನ ಮುದ್ದು ಕುವರ
ಸ್ನೇಹದಲ್ಲಿ ಆಕಾಶದಷ್ಟು ಎತ್ತರ
ಬಾಂಧವ್ಯದಿ ಮೀರಿಸಲಾಗದು ಅಪ್ಪು ಹುಡುಗರ
ಚಿಣ್ಣರ ಕುಣಿಸುವ ಅಣ್ಣನು
ಹೆಚ್ಚಿಸಿದ ಬಣ್ಣದಲೋಕದ ಸೊಬಗನು
ನನಸು ಮಾಡಿದ ಬಹುಜನರ ಕನಸನು
ಅಮರನಾಗಿಹ ಕನ್ನಡ ಮಾತೆಯ ಪ್ರೀತಿಯ ಕುವರನು
ಕೋಟ್ಯಂತರ ಕನ್ನಡಿಗರ ಹೃದಯದ ಅಧಿಪತಿ
ಅಭಿಮಾನಿಗಳಲ್ಲಿ ಬೆಳಗಿದರು ಕನ್ನಡದ ಜ್ಯೋತಿ
ಲೀನವಾಯಿತು ವೀರ ಕನ್ನಡಿಗನ ಪ್ರಾಣ ಜ್ಯೋತಿ
ಕಾತರಿಸಿ ಹೊರಟಿದೆ ತಂದೆ ತಾಯಿಯ ಮಡಿಲ ಪ್ರೀತಿ.
ಶ್ರೀಮತಿ, ಭಾಗ್ಯ ಗಿರೀಶ್
ಹೊಸದುರ್ಗ
ಮೋ:-೯೬೧೧೦೯೨೩೯೪
ಯುವರತ್ನ
ಭುವಿಗಿಳಿದು ಬಂದನೊಬ್ಬ ಮುತ್ತುಮಣಿ
ಚಿಪ್ಪಿನೊಳಗಿನ ಮುತ್ತಿನಂತ ಕನ್ನಡದ ಕಣ್ಮಣಿ
ಕನ್ನಡ ನಾಡು ನುಡಿ ನಟನೆಯ ಖಣಿ
ನೋವಿನ ನೊಂದ ಜನರಿಗಾಸರೆಯಾದ ಧಣಿ//
ವರನಟನ ಮಗನಿವನು ಬಾಲನಟ
ಹರಿಸಿ ಬೆಳೆಸಿತು ನಮ್ಮ ಕರ್ನಾಟಕ
ಬೆಳೆಬೆಳೆಯುತ್ತ ಆದ ನಮ್ಮ ನೆಚ್ಚಿನ ನಟ
ಕನ್ನಡಕಿವನು ಮುದ್ದಿನ ಕಂದನೇ ದಿಟ //
ನಟನೆ ನಾಟ್ಯ ಹಾಡು ಎಲ್ಲದರಲ್ಲೂ ವಿಶಾರದ
ಕರುನಾಡಿನಬೆಳಗುವ ದೀಪವಿವನು ಆರದಾ
ಬಾಳುವ ಕಲೆಯನು ಕಲೆಯಲ್ಲಿ ತೋರಿದ
ನಗುಮುಖದಿ ಕನ್ನಡವಾ ಎಲ್ಲಡೆ ಬೆಳಗಿದ//
ತಂದೆಗೆ ತಕ್ಕ ಮಗನಾಗಿ ಕೀರ್ತಿಗಳಿಸಿ
ಕನ್ನಡಿಗರ ಮನದಲ್ಲಿ ಅಳಿಯದಂತೆ ನೆಲೆಸಿ
ಎಲ್ಲ ವಯಸ್ಸಿನ ಮನಗಳನು ತಣಿಸಿ
ಕರುನಾಡಿನ ಹಿರಿಮೆ ಎಲ್ಲೆಡೆ ಬೆಳಗಿಸಿ//
ಅಭಿ ಅಪ್ಪು ಪುನೀತ್ ಅರಸನೀತ
ಇವನ ಹೊತ್ತ ಕನ್ನಡವಿದು ಪುನೀತ
ಎಲ್ಲ ಪಾತ್ರಗಳು ನಟನೆಯಲಿ ಅಗಣಿತ
ಚಿನ್ನದಂತಹ ಸಹಕಾರದ ಗುಣದವನಿತ//
ರಾಜನಂತೆ ರಾರಾಜಿಸುತಾ ಎಲ್ಲರ ರಂಜಿಸಿ
ಸಂತಸದ ಹೆಜ್ಜೆಯಲ್ಲಿ ಕಣ್ಮನಗಳ ತಣಿಸಿ
ಚಲಿಸುವ ಮೋಡದಿಂದ ಹನಿಹನಿಗೂಡಿಸಿ
ಯುವರತ್ನ ಪವರ್ ಸ್ಟಾರ್ ಆಗಿ ಪಯಣಿಸಿ//
ಧ್ರುವತಾರೆ ಆಗಿ ಗಗನದ ನಕ್ಷತ್ರವಾಗಿ
ಭಕ್ತಿ ಮೆರೆದ ಪ್ರಹ್ಲಾದನಾಗಿ ಪಾರ್ವತಮ್ಮನ ಮಗನಾಗಿ
ಶಿವಣ್ಣ ರಾಘಣ್ಣರ ಪ್ರೀತಿಯ ತಮ್ಮನಾಗಿ
ಕನ್ನಡಿಗರ ಹೃದಯ ಕದ್ದ ಗೆದ್ದ ಪೋರನಾಗಿ//
ಸರಿಗಮ ಶೋನಲ್ಲಿ ಮಿಂಚಿ ಮಿಂಚಿ
ಕರುನಾಡಿನ ಕಾರ್ಯಕ್ರಮ ಹಂಚಿ ಹಂಚಿ
ಕನ್ನಡ ಭಾಷೆ ನುಡಿಗೆ ಸುಂದರ ಗರಿ ಚುಚ್ಚಿ
ಕರ್ನಾಟಕದ ಹೆಮ್ಮೆಯ ಮಗನಾಗಿ ಹೆಚ್ಚಿ//
ಡಾ ಅನ್ನಪೂರ್ಣ ಹಿರೇಮಠ
ಬೆಳಗಾವಿ
ಪುನೀತ ನೀ ಜನಜನಿತ
ಬೆಟ್ಟದ ಹೂವಿಂದು
ತಟ್ಟನೆ ಮರೆಯಾಯಿತೇ?
ಪಟ್ಟದ ಅರಮನೆಯ
ಬಿಟ್ಟು ಹೋರಟೋಯಿತೇ?
ಕಲಾದೇವಿಯ ಮುಕುಟದ
ನೀಲ ವರ್ಣದ ಹವಳವದು ಕಳಚಿತೆ?
ಪುನೀತನೆಂಬ ನಾಮವದು
ಜನಿತವಾಯಿತು ಜನಮಾನಸದಲ್ಲಿ
ನಗುವ ಮೊಗವದು ಮರೆಯಾಗಿ
ಸಗ್ಗದ ಕಡೆಗೆ ನಡೆಯಿತು
ಅಗಲಿಕೆಯು ನೋವು ನೀಡಿತು
ಜಗದ ಅಭಿಮಾನಿ ಬಳಗದಲಿ
ಕನ್ನಡದ ಕಲರವವ
ಚಿನ್ನದ ನಾಡಿನ ಕಥೆಗಳ
ಬಣ್ಣ ಹಚ್ಚಿ ಕುಣಿಯಲು
ಅಣ್ಣ ಮತ್ತೆ ಬನ್ನಿ ಜನಿಸಿ
ವಿಷ್ಣುಪ್ರಿಯ
(ಪಿ.ಎಮ್.ನಿಕ್ಕಮ್ಮನವರ)
ಪುನೀತರಾಜ
ಅಪಾರ ಕೀರ್ತಿ ಗಳಿಸಿ ಮೆರೆವ ನಾಡು
ಕನ್ನಡ ಭವ್ಶ ಕುಟುಂಬದ ಸದಸ್ಶನಾಗಿ
ಬಾಲ ಪ್ರತಿಭೆಯಾಗಿ ಬೆಳೆದು ಬಂದ
ಅಪ್ಪುನ ಅಕಾಲಿಕ ಅಗಲಿಕೆ ಅರಗಿಸಿಕೊಳ್ಳಲಾಗುತ್ತಿಲ್ಲ
ಚಲಿಸುವ ಮೋಡಗಳೆಲ್ಲ
ಚದುರಿ ಹೋದ ಹಾಗೆ ಕರಗಿ ಹೋದೆ
ಕನ್ನಡ ಅಭಿಮಾನಿಗಳ ಕೋಟ್ಶಧಿಪತಿ ನೀನು
ಕನ್ನಡಿಗರ ಕೋಟಿ ಕೋಟಿ ನಮನ ನಿನಗೆ
ಕನ್ನಡಿಗರ ನಾಲಿಗೆ ಮೇಲೆ ನಲಿದಾಡುವ ಹೆಮ್ಮೆಯ
ಕನ್ನಡ ಕುಲಕೋಟಿಗರ ರಾಜಕುಟುಂಬ ನೀವು
ಕನ್ನಡಿಗರ ಕುಲಗೌರವ ಮುತ್ತುರಾಜನ ಪಪ್ಪು
ನಮಗೆಲ್ಲ ಗರ್ವ ಮೂಡಿಸಿದ್ದೆ ‘ ಅಪ್ಪು’ ವಾಗಿ
ಕಾಣದಂತೆ ಮಾಯವಾದ ನಮ್ಮ ಅಪ್ಪು
ಅದೇಕೊ ಶಿವ ನಿನಗೆ ಇಷ್ಟವಾಗಲಿಲ್ಲ
ಅದೆಷ್ಟು ತರಾತುರಿ ನೀನು
ನಮ್ಮ ಅಪ್ಪುವನ್ನು ಕರೆದುಕೊಂಡು ಬಿಟ್ಟೆ ?
– ಅಮರೇಗೌಡ ಪಾಟೀಲ
ಕುಷ್ಟಗಿ.