ಶಿಷ್ಟಗುಣಗಳನ್ನು ಅಳವಡಿಸಿಕೊಂಡು ಜೀವನ ಪಾವನ ಮಾಡಿಕೊಳ್ಳಿ – ಶಿವಲಿಂಗಯ್ಯ ಶಾಸ್ತ್ರಿಗಳು

Must Read

ಸಿಂದಗಿ: ಧಾರ್ಮಿಕ ಆಚರಣೆಗಳು ಸಾಮಾಜಿಕ ಸಾಮರಸ್ಯಕ್ಕೆ ದಾರಿಯಾಗಿವೆ ಎಂದು ಪುರಾಣಿಕರಾದ ಶಿವಲಿಂಗಯ್ಯ ಶಾಸ್ತ್ರಿಗಳು ಗರೂರ(ಬಿ) ಹೇಳಿದರು.

ತಾಲೂಕಿನ ದೇವಣಗಾಂವ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ದೇವಿ ಪುರಾಣ ಕಾರ್ಯಕ್ರಮ ಪ್ರಾರಂಭಿಸಿ ಅವರು ಮಾತನಾಡುತ್ತಿದ್ದರು.

ಸುಜ್ಞಾನ ಮತ್ತು ಅಜ್ಞಾನಗಳ ನಡುವೆ ನಡೆಯುವ ಯುದ್ದವೇ ದೇವಿ ಪುರಾಣದಲ್ಲಿನ ಪ್ರಮುಖ ಅಂಶ ಇದರಲ್ಲಿನ ದುಷ್ಟಗುಣಗಳನ್ನು ಅಳಿಸಿ ಶಿಷ್ಟ ಗುಣಗಳನ್ನು ಅಳವಡಿಸಿಕೊಂಡು ಜೀವನ ಪಾವನ ಮಾಡಿಕೊಳ್ಳಿ ಎಂದರು.

ಗವಾಯಿಗಳಾದ ಶಿವರುದ್ರಯ್ಯ ಗೌಡಗಾಂವ, ತಬಲಾವಾದಕ ಶಾಂತಕುಮಾರ ಜೇರಟಗಿ, ಶಿವಯ್ಯ ಹಿರೇಮಠ, ಶಿವಲಿಂಗ ಬಗಲಿ, ಅಣವೀರ ಸುತಾರ, ಚನ್ನಪ್ಪ ಗಂಗನಳ್ಳಿ, ಲಕ್ಷ್ಮಿಪುತ್ರ ಬಗಲಿ ಹಾಗೂ ಗ್ರಾಮಸ್ಥರು ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group