spot_img
spot_img

ಶಿವಮೊಗ್ಗದಲ್ಲಿ ರಾಜ್ಯ ಸರ್ವೋದಯ ಮಂಡಲ ಸಮಾವೇಶ ಅಮೃತ ಮಹೋತ್ಸವ ಸಂಪನ್ನ

Must Read

- Advertisement -

ಶಿವಮೊಗ್ಗ – ರಾಷ್ಟ್ರೀಯ ಶಿಕ್ಷಣ ಸಮಿತಿ ಮತ್ತು ಸರ್ವೋದಯ ಮಂಡಲಗಳ ಸಹಯೋಗದಲ್ಲಿ ಇದೇ 30 ರಂದು ಸ್ಥಳೀಯ ಕಮಲಾ ನೆಹರು ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗಾಂಧೀ ಸಂಸ್ಮರಣೆ, ಹುತಾತ್ಮರ ದಿನ ಅಮೃತ ಮಹೋತ್ಸವ ಮತ್ತು ರಾಜ್ಯ ಸರ್ವೋದಯ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

ಶಿಕ್ಷಣ ಸಮಿತಿ ಅಧ್ಯಕ್ಷ ಜಿ. ನಾರಾಯಣ ರಾವ್ ಅವರು ಸರ್ವಾಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಾ, ಆದರ್ಶಕ್ಕೂ ಅವಶ್ಯಕತೆಗೂ ಬಹಳ ಅಂತರವಿದೆ ಸ್ವಾತಂತ್ರೋತ್ತರ ಭಾರತದಲ್ಲಿ ಜನಸಂಖ್ಯೆ ಹೆಚ್ಚಳ ವಾದಂತೆ ಜನರ ಅವಶ್ಯಕತೆಯನ್ನು ಪೂರೈಸಲು ಪರಿಸರ ನಾಶ ಕಾರಣವಾಗಿದೆ ಸ್ನೇಹ ಸಂಬಂಧ ಸಾಮರಸ್ಯ ಸಹಬಾಳ್ವೆ ಎಲ್ಲಾ ಕಣ್ಮರೆಯಾಗುತ್ತಿದೆ. ಆಧುನಿಕತೆಯ ವಡ್ಡೋಲಗದಲ್ಲಿ ಹಣದ ಹಿಂದೆ ನಾಗಾಲೋಟದಿಂದ ಸಾಗುವ ನಮ್ಮೀ ಬದುಕಿಗೆ ಅನ್ಯರ ಸಂತೋಷದಲ್ಲಿ ಪಾಲುದಾರನಾಗು ಆದರೆ ನೋವಿಗೆ ಕಾರಣರಾಗ ಬೇಡ ಎಂಬ ಸರ್ವೋದಯ ಸಿದ್ಧಾಂತ ಪ್ರಸ್ತುತ ಇಂದು ಹೆಚ್ಚಾಗಿದೆ ಎಂದು ಅಭಿಪ್ರಾಯ ಪಟ್ಟರು.

ಶಿಕ್ಷಣ ಸಮಿತಿ ಕಾರ್ಯದರ್ಶಿ ಎಂ.ಎನ್.ನಾಗರಾಜ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ ಸಾಮಾಜಿಕ ಹಿತದಲ್ಲಿ ವೈಯಕ್ತಿಕ ಹಿತ ಅಡಗಿದೆ ನಾವು ಬೆಳೆದು ಇನ್ನೊಬ್ಬರಿಗೂ ಬೆಳೆಯಲು ಅವಕಾಶ ಮಾಡಿಕೊಡುವ ಸರ್ವೋದಯ ಕಲ್ಪನೆ ಇಂದು ಸಾಕಾರವಾಗಬೇಕಿದೆ.

- Advertisement -

ಮೇಲುಕೋಟೆ ಜನಪದ ಸೇವಾ ಟ್ರಸ್ಟ್ ನ ಡಾ.ಸುಮನಸ್ ಕೌಲಗಿ ಯುವಜನರನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ದಲ್ಲಿ ಅಭಿವೃದ್ಧಿ ಕಡೆಗೆ ಸಾಗುವುದೆಂದರೆ ಗಾಂಧಿ ಪ್ರಣಿತ ಶೋಷಣೆ ಮುಕ್ತ ಅಹಿಂಸಾತ್ಮಕ ಸಮಾಜ ನಿರ್ಮಾಣದಲ್ಲಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ನೇಕಾರಿಕೆ ಮಾಡುವ ವ್ಯಕ್ತಿಗೆ ಎಷ್ಟು ಪ್ರಾಮುಖ್ಯತೆ ವಿದೆಯೋ ಅಷ್ಟೇ ಒಬ್ಬ ವಿಜ್ಞಾನಿಗೂ ಇದೆ ಎಂಬ ಅಂಶ ಇಂದಿನ ಶಿಕ್ಷಣ ಪದ್ಧತಿಯ ಮೂಲಕ ತಲುಪಬೇಕು ಎಂದು ತಿಳಿಸಿದರು.

ರಾಜ್ಯ ಸರ್ವೋದಯ ಮಂಡಲದ ಕಾರ್ಯದರ್ಶಿ ಡಾ. ಯ.ಚಿ ದೊಡ್ಡಯ್ಯ, ಕಾರ್ಯಕಾರಿ ಸಮಿತಿಯ ವಿ.ಟಿ ಹುಡೇಡ್, ಡಾ.ಗುರುರಾಜ ಪೋಷಟ್ಟಿಹಳ್ಳಿ ,ಜಿಲ್ಲಾ ಸರ್ವೋದಯ ಮಂಡಲ ಅಧ್ಯಕ್ಷ ಭಗವಂತ ರಾವ್ ಉಪಸ್ಥಿತರಿದ್ದರು.

- Advertisement -

ಯುವಕರಿಂದ ಯುವಕರಿಗಾಗಿ ಧ್ಯೇಯದಡಿ ಶಿಕ್ಷಣದ ಪರಿಕಲ್ಪನೆಗಳು, ಸರ್ವೋದಯ ತತ್ವಗಳ ಕ್ರಿಯಾನ್ವಯ , ಯುವಜನರಲ್ಲಿ ಸಾಮಾಜಿಕ ಹೊಣೆಗಾರಿಕೆ ಮತ್ತು ಸಾಮರಸ್ಯಕ್ಕಾಗಿ ಜಾಲತಾಣ ಗಳ ಸದುಪಯೋಗ ಕುರಿತ ನಾಲ್ಕು ಗೋಷ್ಠಿಗಳನ್ನು ಆಯೋಜಿಸಲಾಗಿತ್ತು.

ಸ್ಥಳೀಯ ಕಾಲೇಜ್ಗಳಿಂದ ಕು. ಹೆಚ್.ಆರ್. ದೀಪಶ್ರಿ, ಕು.ಸು ಪ್ರದಾ, ಕು. ನಿಸರ್ಗ, ಕು. ಜಯಶ್ರೀ, ಕು.ಶಾಲಿನಿ ಹಾಗೂ ರಂಜನ್ ಕುಮಾರ್, ಕು.ಅನನ್ಯ, ಕು. ದಿವ್ಯ ನಡೆಸಿ ಕೊಟ್ಟರು.

      ರಾಜ್ಯದ ನಾನಾ ಜಿಲ್ಲೆಗಳ ಸರ್ವೋದಯ ಮಂಡಲದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯ ಸರ್ವೋದಯ ಮಂಡಲದ ಅಧ್ಯಕ್ಷ ಡಾ.ಹೆಚ್.ಎಸ್.ಸುರೇಶ್ ಸಮಾರೋಪ ನುಡಿಗಳನ್ನಾಡುತ್ತಾ ನ್ಯಾಕ್ ಎ ಶ್ರೇಣಿ ಗಳಿಸಿದ ಕಾಲೇಜಿನ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ಕರ್ನಾಟಕ ಸಂಘದ ಅಧ್ಯಕ್ಷರು ಮತ್ತು ಸಾಹಿತಿಗಳೂ ಆದ ಎಂ.ಎನ್.ಸುಂದರ್ ರಾಜ್ ಉಪಸ್ಥಿತಿಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್. ಎಸ್.ನಾಗಭೂಷಣ ತಿಳಿಸಿದ್ದಾರೆ.

- Advertisement -
- Advertisement -

Latest News

ಸಾಮಾಜಿಕ, ಸಾಂಸ್ಕೃತಿಕ ಸಾಹಿತ್ಯಿಕ ಪೋಷಕ ಜಿ.ಓ.ಮಹಾಂತಪ್ಪ ವಿಚಾರ ಸಂಕಿರಣ.

ಬದುಕಿ ಸತ್ತವರ ನಡುವೆ, ಸತ್ತು ಬದುಕಿದವರು ತುಂಬಾ ವಿರಳ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಮುಂತಾದವರು ಅವರುಗಳ ನಿಸ್ವಾರ್ಥ ಸೇವಾ ಕೈಂಕರ್ಯದಿಂದ ಇನ್ನೂ ನಮ್ಮ ನಡುವೆ...
- Advertisement -

More Articles Like This

- Advertisement -
close
error: Content is protected !!
Join WhatsApp Group