ಬೆಂಗಳೂರು – ಕಾಂಗ್ರೆಸ್ ನ ಮಾಜಿ ಸಂಸದೆ ಚಲನ ಚಿತ್ರ ನಟಿ ರಮ್ಯಾ ಅವರು ಈ ಸಲವೂ ಮತದಾನ ಮಾಡಲಿಲ್ಲವಂತೆ !
ಇವರು ೨೦೧೮ ರಿಂದಲೂ ಮತದಾನ ಮಾಡೇ ಇಲ್ಲವಂತೆ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಕೊಂಡು ರಮ್ಯಾ ಅವರು ಪ್ರಜಾಪ್ರಭುತ್ವದ ಕರ್ತವ್ಯವಾದ ಮತದಾನವನ್ನೇ ಮಾಡಿಲ್ಲ ಎಂದರೆ ದೇಶ ಕಟ್ಟುವಲ್ಲಿ ಇವರ ಗಂಭೀರತೆ ಅರ್ಥ ಮಾಡಿಕೊಳ್ಳಬಹುದಾಗಿದೆ.
ಕಾಂಗ್ರೆಸ್ ನಂಥ ಶತಮಾನದ ಇತಿಹಾಸವಿರುವ ಪಕ್ಷದಿಂದ ಸಂಸದೆಯಾಗಿ ಆಯ್ಕೆಯಾಗಿ ಕರ್ತವ್ಯ ನಿಭಾಯಿಸಿರುವ ರಮ್ಯಾ ಪ್ರಧಾನ ಮಂತ್ರಿ ಮೋದಿಯವರನ್ನು ಟೀಕಿಸಿ ಸುದ್ದಿಯಲ್ಲಿದ್ದರು. ಮೋದಿಯವರನ್ನು ಟೀಕಿಸಿದ್ದರಿಂದ ಜನರಿಂದ ಸರಿಯಾಗಿಯೇ ಟ್ರೋಲ್ ಗೆ ಒಳಗಾದ ರಮ್ಯಾ ಕೆಲವು ವರ್ಷ ನೇಪಥ್ಯಕ್ಕೆ ಸರಿದಿದ್ದರು. ಇತ್ತೀಚೆಗೆ ಅವರು ಮತ್ತೆ ರಾಜಕಾರಣಕ್ಕೆ ಮರಳುತ್ತಾರೆ ಎಂಬ ಗುಲ್ಲು ಎಲ್ಲೆಡೆ ಹರಿದಾಡುತ್ತಿತ್ತು ಆದರೆ ಈ ಸಲದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಂಡ್ಯದ ಸುತ್ತಮುತ್ತ ಅವರು ಸುಳಿಯದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ರಾಜಕಾರಣ ಏನೇ ಇರಲಿ ರಮ್ಯಾ ಅವರು ಮತದಾನ ಮಾಡದೇ ತಮ್ಮ ಕರ್ತವ್ಯವಂಚಿತರಾಗಿದ್ದು ಮಾತ್ರ ವಿಷಾದನೀಯ.