spot_img
spot_img

ಡಾ.ರಾಜ್‍ಕುಮಾರ್ ಜಯಂತ್ಯುತ್ಸವ ವಿಜೃಂಭಣೆಯಿಂದ ಸಂಪನ್ನ

Must Read

- Advertisement -

ಮೈಸೂರು -ನಗರದ ಡಾ.ರಾಜ್‍ಕುಮಾರ್ ಕಲಾಸೇವಾ ಟ್ರಸ್ಟ್ ವತಿಯಿಂದ ಕೊಡುಗೈ ದಾನಿ, ಬಡವರ ಬಂಧು, ಕಲಾಪೋಷಕ ಮೈಸೂರು ಜಯರಾಂ ಅವರ ನೇತೃತ್ವದಲ್ಲಿ ನಿರಂತರವಾಗಿ ಒಂದು ವಾರಗಳ ಕಾಲ ನಾದಬ್ರಹ್ಮ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ರಾಜ್‍ಕುಮಾರ್ 96ನೇ ಜಯಂತ್ಯುತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಏ.23ರಂದು ಡಾ.ಪಿ.ಬಿ.ಶ್ರೀನಿವಾಸ್ ಅಣ್ಣಾವ್ರಿಗಾಗಿ ಹಾಡಿರುವ ಗೀತೆಗಳು, ಏ.24ರಂದು ಅಣ್ಣಾವ್ರು ಹಾಡಿರುವ ಏಕವ್ಯಕ್ತಿ (ಸೋಲೋ) ಗೀತೆಗಳು. ಏ.25ರಂದು ಅಣ್ಣಾವ್ರು ಸಹನಟರುಗಳಿಗೆ ಹಾಡಿರುವ ಗೀತೆಗಳು, ಏ.26ರಂದು ಅಣ್ಣಾವ್ರ ಚಿತ್ರಗಳ ಮಹಿಳಾ ಪ್ರಧಾನ ಗೀತೆಗಳು ಮತ್ತು ಅಣ್ಣಾವ್ರು ಹಾಡಿರುವ ವಿರಸ ಗೀತೆಗಳು, ಏ.28 ಹಾಗೂ ಏ.29ರಂದು ರಂದು ಅಣ್ಣಾವ್ರು ಹಾಡಿರುವ ಯುಗಳ ಗೀತೆಗಳು, ಏ.30ರಂದು ಇತರೆ ಗಾಯಕರುಗಳು ಅಣ್ಣಾವ್ರಿಗಾಗಿ ಹಾಡಿರುವ ಗೀತೆಗಳು ಮತ್ತು ಅಣ್ಣಾವ್ರು ಹಾಡಿರುವ ಭಕ್ತಿಗೀತೆಗಳನ್ನು ನಗರದ ನುರಿತ ಕಲಾವಿದರಿಂದ ಸುಶ್ರಾವ್ಯವಾಗಿ ಪ್ರಸ್ತುತಪಡಿಸಲಾಯಿತು.

ಮೈಸೂರು ಜಯರಾಂ ಯುವ ಕಲಾವಿದರುಗಳಿಗೆ ಅವಕಾಶ ಕಲ್ಪಿಸಿ, ಅವರನ್ನು ಮುಖ್ಯವಾಹಿನಿಗೆ ತರಬೇಕೆಂದು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ.

- Advertisement -

ಮೈಸೂರಿನ ನಾದಬ್ರಹ್ಮ ಸಭಾಂಗಣದಲ್ಲಿ ಕುಳಿತು ಡಾ.ರಾಜ್‍ರವರ ಹಾಡುಗಳನ್ನು ಕೇಳುವಾಗ ಸುಮಾರು 45 ವರ್ಷಗಳ ಹಿಂದೆ ಕೇಳಿ ಹೋದ ಅನುಭವವಾಯಿತು. ಡಾ.ರಾಜ್ ಧ್ವನಿ ಗಾಯಕರು ಹಾಗೂ ಟ್ರಸ್ಟ್‍ನ ಅಧ್ಯಕ್ಷರೂ ಆದ ಮೈಸೂರು ಜಯರಾಂ ಅವರ ಪರಿಕಲ್ಪನೆ, ಯೋಚನೆ, ಆಲೋಚನೆ ಹಾಗೂ ಗಾಯನಕ್ಕೆ ಪ್ರೇಕ್ಷಕರು ಮನಸೋತು ಕೊಂಡಾಡಿ ಹೊಗಳಿದರು.

7 ದಿನಗಳ ಕಾರ್ಯಕ್ರಮ ಮಾಡುವುದಕ್ಕೆ ಜಯರಾಂ ಅವರಿಗೆ ಜಯರಾಂ ಅವರೇ ಸರಿ ಸಾಟಿ. ಅವರ ಧೈರ್ಯ ಮತ್ತು ಅವರು ಅಣ್ಣಾವ್ರ ಬಗ್ಗೆ ಇಟ್ಟಿರುವ ಅಗಾಧವಾದ ಭಕ್ತಿ ಅಭಿಮಾನಕ್ಕೆ ಕನ್ನಡಿಗರಾಗಿ ನಾವು ಹೆಮ್ಮೆ ಪಡಬೇಕು. ಲಕ್ಷ್ಮೀಪುರಂ, ಚಾಮುಂಡಿಪುರಂ ಮತ್ತು ಕೃಷ್ಣಮೂರ್ತಿಪುರಂಗೆ ಹೊಂದಿಕೊಂದಿಕೊಂಡಿರುವ ಈ ಸಭಾಂಗಣ ವಿಶೇಷ ಅನುಭವ ನೀಡುತ್ತದೆ. ಎಂದು ಸಂತೋಷ ವ್ಯಕ್ತಪಡಿಸಿ ಹರಸಿದ ಹಿರಿಯ ನಾಗರೀಕರು. ಇಡೀ ಸಭಾಂಗಣ ಒಂದು ವಾರಗಳ ಕಾಲ ತುಂಬಿ ತುಳುಕಿತ್ತು. ಕಿರಿಯರು, ಹಿರಿಯರು ಎನ್ನದೇ ಎಲ್ಲ ವಯಸ್ಸಿನ ಪ್ರೇಕ್ಷಕರು ಆಗಮಿಸಿ ಅಣ್ಣಾವ್ರ ಹಾಡುಗಳನ್ನು ಹೃನ್ಮನಸ್ಸಿನಿಂದ ಸವಿದರು.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group