spot_img
spot_img

ಅಪ್ಪಟ ದೇಶಭಕ್ತ ಬಾಬು ಜಗಜೀವನರಾಮ

Must Read

spot_img
- Advertisement -

ಜಗಜೀವನರಾಮ ಅವರು ಒಬ್ಬ ಶ್ರೇಷ್ಠ ರಾಜಕೀಯ ಮುತ್ಸದ್ದಿ,ಹಸಿರು ಕ್ರಾಂತಿಯ ಹರಿಕಾರ, ಪ್ರಜಾಪ್ರಭುತ್ವವಾದಿ, ದಲಿತ ಜನಾಂಗದ ಧ್ವನಿ, ಭಾರತದ ಉಪಪ್ರಧಾನಿ, ಪುಟಕಿಟ್ಟ ಚಿನ್ನ ಎಂದು ಪ್ರೊ.ನಾಗರಾಜ ಕೋಟಗಾರ ಹೇಳಿದರು.

ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ್ ಅವರ ತಂದೆಯವರಾದ ಲಿಂಗೈಕ್ಯ ಶರಣ ಬಿಎಮ್ ಪಾಟೀಲ್ ಮತ್ತು ತಾಯಿಯವರಾದ ಲಿಂಗೈಕ್ಯ ಶರಣೆ ಅಕ್ಕಮಹಾದೇವಿ ಪಾಟೀಲ್ ಅವರ ಸ್ಮರಣಾರ್ಥ ನಡೆದ ಶ್ರಾವಣ ಮಾಸದ ದತ್ತಿ ಉಪನ್ಯಾಸದ 30ನೇ ದಿವಸ ಮಾತನಾಡಿದರು

ಬಾಬು ಜಗಜೀವನ್ ರಾಮ್ ಅವರು ಏಪ್ರಿಲ್ 5 1908 ರಲ್ಲಿ ಜನಿಸಿದರು. ಬಾಪೂಜಿ ಎಂದು ಖ್ಯಾತರಾದ ಜಗಜೀವನ ರಾಮ್ ಅವರು ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲದೆ ಸಮಾಜಸೇವಕರು ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮೊರಾರ್ಜಿ ದೇಸಾಯಿ ಅವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯು ಆಗಿದ್ದರು ಎನ್ನುವುದನ್ನು ನೆನಪಿಸಿದರು.

- Advertisement -

ಜಗಜೀವನರಾಮ ಅವರು ಶಾಲೆಯಲ್ಲಿ ಕಲಿಯುವಾಗ ಅನುಭವಿಸಿದ ತಾರತಮ್ಯ ನೀತಿಯನ್ನು ಹೇಳುತ್ತಾ, ಆಗಲೇ ಅವರು ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಮುಂಚೂಣಿ ವಹಿಸಿದ್ದರು ಮತ್ತು ಮದನ ಮೋಹನ ಮಾಲವೀಯ ಅವರಿಂದ ಬನಾರಸ್ ಹಿಂದೂ ಯೂನಿವರ್ಸಿಟಿಗೆ ಸೇರ್ಪಡೆ, ಕಲಕತ್ತಾ ಯೂನಿವರ್ಸಿಟಿಯಿಂದ ಪಿಎಚ್ಡಿ
ಪಡೆದದ್ದು, ಸುಭಾಷಚಂದ್ರ ಬೋಸ ಮತ್ತು ಗಾಂಧೀಜಿಯವರೊಡಗಿನ ಆತ್ಮೀಯ ಒಡನಾಟ, ಮಜದೂ ರ್ ಸಮ್ಮೇಳನದಲ್ಲಿ ನಾಯಕತ್ವ ವಹಿಸಿದ್ದು, ಭೂಕoಪ, ಬರಗಾಲದಲ್ಲಿ ಅನ್ನ, ಬಟ್ಟೆ ವಿತರಣೆ ಮಾಡಿದ್ದು, ಹಿಂದೂ ಮಹಾಸಭಾ ಅಧಿವೇಶನದಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶ, ಕೆರೆ -ಭಾವಿಗಳಲ್ಲಿ ನೀರು ಕುಡಿಯುವ ಅವಕಾಶ ಕಲ್ಪಿತವಾಗಿದ್ದನ್ನು, ಆಧುನಿಕ ಕೃಷಿ ಪದ್ಧತಿ, ಹಸಿರು ಕ್ರಾಂತಿ ಮಾಡಿದ್ದು, ಹಂಚಿಕೊಂಡರು.

ಬಿಹಾರದ ಭಾರತೀಯ ಸ್ವಾತಂತ್ರ್ಯ ಕಾರ್ಯಕರ್ತ ಮತ್ತು ರಾಜಕಾರಣಿ. 1935ರಲ್ಲಿ ದಲಿತರಿಗೆ ಸಮಾನತೆಯನ್ನು ಸಾಧಿಸಲು ಮೀಸಲಾಗಿರುವ ಆಲ್ ಇಂಡಿಯಾ ಡಿಪ್ರೆಸ್ಡ
ಕ್ಲಾಸ್ ಲೀಗ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. 1937ರಲ್ಲಿ ಬಿಹಾರ ವಿಧಾನಸಭೆಗೆ ಚುನಾಯಿತರಾದರು ನಂತರ ಅವರು ಗ್ರಾಮೀಣ ಕಾರ್ಮಿಕ ಚಳವಳಿಯನ್ನು ಸಂಘಟಿಸಿದರು ಎಂದು ಅವರ ಜೀವನಗಾತೆಯ ತುಣುಕನ್ನು ಹೇಳುತ್ತಾ ಹೋದರು.

1930ರ ದಶಕದಲ್ಲಿ ಮತ್ತು 1934 ರಲ್ಲಿ ಬಿಹಾರ ಭೂಕಂಪದ ಸಂತ್ರಸ್ತರಿಗೆ ಪರಿಹಾರ ಶಿಬಿರಗಳನ್ನು ಸ್ಥಾಪಿಸುವಂತಹ ಸಾಮಾಜಿಕ ಕಾರ್ಯಗಳಲ್ಲಿ ವ್ಯಾಪಕವಾಗಿ ತೊಡಗಿಸಿಕೊಂಡಿದ್ದರು. ನಾಗರಿಕ ಅಸಹಕಾರ ಚಳುವಳಿ ಉಪ್ಪಿನ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳುವಳಿಯಂತಹ ಮುಖ್ಯ ವಾಹಿನಿಯ ಮತ್ತು ಜನಪ್ರಿಯ ಚಳುವಳಿಗಳಲ್ಲಿ ಭಾಗವಹಿಸಿದರು. ಇದರಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಅವರು ಎರಡು ಬಾರಿ ಜೈಲು ಪಾಲಾದರು ಎನ್ನುವುದನ್ನು ನೆನೆಸಿದರು.

- Advertisement -

1936 ರಲ್ಲಿ 28ನೆಯ ವಯಸ್ಸಿನಲ್ಲಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದರು. 1936 ರಲ್ಲಿ ಬಿಹಾರ ಲೆಜಿಸ್ಲೇಟಿವ್ ಕೌನ್ಸಿಲ್ ಗೆ ನಾಮನಿರ್ದೇಶನಗೊಂಡ ನಂತರ ಅವರು ಖಿನ್ನತೆಗೆ ಒಳಗಾದ ವರ್ಗಗಳ ಟಿಕೆಟ್ ನಲ್ಲಿ ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರು ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಕೃಷಿ, ಸಹಕಾರ, ಕೈಗಾರಿಕೆ ಮತ್ತು ಗ್ರಾಮ ಅಭಿವೃದ್ಧಿ ಸಚಿವಾಲಯದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು,ಆದರೆ 1938 ರಲ್ಲಿ ಅವರು ಅಂಡಮಾನ್ ಖೈದಿಗಳ ಸಮಸ್ಯೆಗಳು ಮತ್ತು ಎರಡನೇ ಮಹಾಯುದ್ಧದಲ್ಲಿ ಭಾರತದ ಪಾಲ್ಗೊಳ್ಳುವಿಕೆಯ ವಿಷಯದ ಸಲುವಾಗಿ ಕ್ಯಾಬಿನೆಟ್ ಗೆ ರಾಜೀನಾಮೆ ನೀಡಿದರು. 1946ರ ಸಾರ್ತಿಕ ಚುನಾವಣೆಯಲ್ಲಿ ಅವರು ಪೂರ್ವ ಸೆಂಟ್ರಲ್ ಶಹಬಾದ ಕ್ಷೇತ್ರದಿಂದ ಗೆದ್ದರು 30 ಆಗಸ್ಟ್ 1946 ರಂದು ರಾಮ್ ಅವರನ್ನು ಮಧ್ಯಂತರ ಸರಕಾರದ ಭಾಗವಾಗಿ ಆಹ್ವಾನಿಸಲಾದ ಏಕೈಕ ದಲಿತ ಸದಸ್ಯ ಅವರು. ಆಗ ಸಚಿವಾಲಯದ ಉಸ್ತುವಾರಿ ವಹಿಸಿದ್ದರು ಎನ್ನುವುದನ್ನು ಹಂಚಿಕೊಂಡರು.

ಜಗಜೀವನರಾಮ ಅವರು ಭಾರತದ ಅತ್ಯಂತ ನಿಷ್ಠಾವಂತ ಸಂಸದರಲ್ಲಿ ಒಬ್ಬರು. 1936ರಲ್ಲಿ ಬಿಹಾರ ಕೌನ್ಸಲ್ಲಿಗೆ 28 ವರ್ಷ ವಯಸ್ಸಿನಲ್ಲಿ ಚುನಾಯಿತರಾದವರು, ಕೇಂದ್ರ ಶಾಸಕಾಂಗ ಮತ್ತು ನಂತರ 40 ವರ್ಷಗಳಿಗೂ ಹೆಚ್ಚು ಕಾಲ ಸಂಸತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ ಹಿರಿಮೆಯನ್ನು ಹೊಂದಿದ್ದಾರೆ. ಅವರ ಸುಧೀರ್ಘ ರಾಜಕೀಯ ಜೀವನದಲ್ಲಿ ಅವರು ವಿವಿಧ ಖಾತೆಗಳನ್ನು ಹೊಂದಿದ್ದರು ಕಾರ್ಮಿಕ ಮಂತ್ರಿ ಸಂವಹನಗಳು, ರೈಲ್ವೇಸ್ ಸಾರಿಗೆ ಮತ್ತು ಸಂವಹನ, ಆಹಾರ ಮತ್ತು ಕೃಷಿ, ರಕ್ಷಣಾ ಕೃಷಿ ಮತ್ತು ನೀರಾವರಿ.

ತಮ್ಮ 78ನೇ ವಯಸ್ಸಿನಲ್ಲಿ ಲೋಕಸಭೆಯ ಸದಸ್ಯರಾಗಿದ್ದಾಗ ಜುಲೈ 6 1986 ರಂದು ನಿಧನರಾದರು. ಅವರ ಸ್ಮಶಾನ ಸ್ಥಳವನ್ನು ಸ್ಮಾರಕವಾಗಿ ಗುರುತಿಸಲಾಗಿದೆ ಅದುವೇ ಸಮತಾ ಸ್ಥಳ.ಅವರ ಜನ್ಮ ದಿನದ ನೆನಪಿಗಾಗಿ ಪ್ರತಿ ವರ್ಷ ಏಪ್ರಿಲ್ ಐದರಂದು ಭಾರತವು ಸಮತಾ ದಿವಸ ಆಚರಿಸುತ್ತದೆ ಎಂದು ಹೇಳುತ್ತಾ ತಮ್ಮ ಮಾತುಗಳನ್ನು
ಮುಗಿಸಿದರು.

ಪೂರ್ಣಿಮಾ. ಕೆ. ಜೆ. ಅವರು 12ನೇ ಶತಮಾನದ ಲಿಂಗಾಯತ ಚಳವಳಿಯ ಸಂಸ್ಥಾಪಕ ಬಸವಣ್ಣನವರ ಪತ್ನಿಯ ಹೆಸರು ನೀಲಾಂಬಿಕೆಯ ಪರಿಚಯವನ್ನು ಮಾಡಿಕೊಟ್ಟರು. ನೀಲಾoಬಿಕೆಯವರು ಬಸವಣ್ಣನವರ ಜೀವನದಲ್ಲಿ ಮತ್ತು ಅವರ ಆಧ್ಯಾತ್ಮಿಕ, ಸಾಮಾಜಿಕ ಸುಧಾರಣೆಯ ಪ್ರಯತ್ನಗಳನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದು ಹೇಳುತ್ತಾ,
ನಿಷ್ಠಾವಂತ ಮತ್ತು ಬೆಂಬಲದ ಸಂಗಾತಿಯಾಗಿದ್ದರು ಮತ್ತು
ಮಹಾನ್ ಸದ್ಗುಣ, ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕ ತಿಳುವಳಿಕೆ ಹೊಂದಿರುವ ವ್ಯಕ್ತಿ ಎಂದು ಹೇಳಿದರು. ನೀಲಾoಬಿಕೆ ಅವರು ಲಿಂಗಾಯತ ಸಮುದಾಯದ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು
ಎನ್ನುವುದನ್ನು ಹಂಚಿಕೊಂಡರು.

ಡಾ. ಶಶಿಕಾಂತ ಪಟ್ಟಣ ಅವರು ಜಗಜೀವನರಾಮ ಅವರು ಗಾಂಧೀಜಿಯವರ ಮಾನಸಪುತ್ರ, ಅಪ್ಪಟ ದೇಶಪ್ರೇಮಿ, ಎಂದು ಹೇಳುತ್ತಾ ತಾವು ಮೊದಲ ಸಲ ವಿಜಯಪುರದಲ್ಲಿ ಅವರ ಭಾಷಣವನ್ನು ಕೇಳಿದ್ದು, ನೆನಪು ಮಾಡಿಕೊಂಡು, ಅವರ ಕೃಷಿವಿಜ್ಞಾನದ ಡಿಗ್ರಿ ಬಗೆಗೆ, ಆಹಾರ ಪದ್ಧತಿಯನ್ನು ಅಳವಡಿಸಿದ ಬಗೆಗೆ, ಉಗ್ರಾಣಗಳ ನಿರ್ಮಾಣದ ಕುರಿತು, ಭಾರತೀಯ ಜನತಾ ಪಕ್ಷ ಸ್ಥಾಪಿಸಿದ್ದು, ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿದ್ದಾಗ ಉಪಪ್ರಧಾನಿ ಆಗಿದ್ದನ್ನು ಹಂಚಿಕೊಂಡರು. ನೀಲಾoಬಿಕೆ
ಬಸವಣ್ಣನವರ ವಿಚಾರಪತ್ನಿ ಎಂದು ಹೇಳುತ್ತಾ,ಅವರ ವಚನಗಳನ್ನು ಅರ್ಥ ಸಮೇತ ಹಂಚಿಕೊಂಡರು.

ಶರಣೆ ಜಯಶ್ರೀ ಆಲೂರ ಅವರ ವಚನ ಪ್ರಾರ್ಥನೆ, ಶರಣೆ ಅನಿತಾ ಕಾರಾಜನಗಿ ಅವರ ಸ್ವಾಗತ -ಪ್ರಾಸ್ತಾವಿಕ-ಪರಿಚಯ, ಶರಣೆ ಶಾಂತಾ ಧುಳoಗೆ ಅವರ ಶರಣು ಸಮರ್ಪಣೆ, ಶರಣೆ ರತ್ನಾಬಾಯಿ ಬಿರಾದಾರ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯ್ತು. ಶರಣೆ ಪ್ರೇಮಾ ಅಣ್ಣಿಗೇರಿ ಅವರು ಸಮರ್ಪಕವಾಗಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group