ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾವಿಲಾಸ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಇಂದು (06.03.2024) ವಿದ್ಯಾರ್ಥಿ ವೇದಿಕೆಯ ಪ್ರತಿಭೆಯ ಅನಾವರಣವಾದ ವಾರ್ಷಿಕ ಸಂಚಿಕೆ ಚಿಂತನವನ್ನು ಬಿಡುಗಡೆಗೊಳಿಸಲಾಯಿತು.
ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್.ಚಂದ್ರಶೇಖರ್ ರವರು ಚಿಂತನ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿ ಪೋಷಕ, ವಿದ್ಯಾರ್ಥಿ, ಶಿಕ್ಷಕರನ್ನು ಬೆಸೆಯುವ ವೇದಿಕೆ ಸಾಂಸ್ಕೃತಿಕ ಚಟುವಟಿಕೆಗಳು. ಅದರದ್ದೇ ಒಂದು ಭಾಗವಾದ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸುವ ವಿಶೇಷವಾದ ವೇದಿಕೆಯೇ ಚಿಂತನ. ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಕಥೆ, ಕವನ, ಚಿತ್ರಕಲೆ, ಸಂಗೀತ, ಸಾಹಿತ್ಯಗಳನ್ನು ಬರಹಗಳ ಮೂಲಕ ಹೊರತರುವುದಕ್ಕೆ ಇದು ಅಡಿಪಾಯವಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಬಾಲ್ಯದಿಂದಿಲೇ ವೇದಿಕೆಯಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು, ಪ್ರತಿಭೆಗಳನ್ನು ಗುರುತಿಸಿಕೊಂಡಾಗ ಯಶಸ್ಸನ್ನು ತಮ್ಮದಾಗಿಸಿಕೊಳ್ಳಬಹುದೆಂದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಿ.ಕೆ.ಅಶೋಕ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ, ನಾಯಕತ್ವ ಗುಣ, ಉತ್ಸಾಹ ಬೆಳೆಯುವಲ್ಲಿ ಚಿಂತನ ವಾರ್ಷಿಕ ಸಂಚಿಕೆ ಪೂರಕ ವಾತವರಣವನ್ನು ನಿರ್ಮಿಸುತ್ತದೆ. ಪಠ್ಯೇತರ ಚಟುವಟಿಕೆಗಳನ್ನು ಗುರುತಿಸುವಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕ ಸಂಚಿಕೆ ಮೈಲಿಗಲ್ಲು ಎಂದರು. ಕಾರ್ಯಕ್ರಮದಲ್ಲಿ ಚಿಂತನ ವಾರ್ಷಿಕ ಸಂಚಿಕೆಯ ಸಂಪಾದಕರು ಆಂಗ್ಲ ವಿಭಾಗದ ಮುಖ್ಯಸ್ಥರಾದ ಮನೋಜ್ ಕುಮಾರ್ ಎಸ್, ಉಪನ್ಯಾಸಕರಾದ ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಡಾ.ಎಂ.ಲಾವಣ್ಯ, ವಿದೂಷಿ ಕಾವ್ಯಶ್ರೀ ಆರ್ ರಾವ್, ಮನೋಹರ್ ಬಿ, ಸಯ್ಯದ್ ಮುಶೀರ್ ಅಹಮ್ಮದ್ ಉಪಸ್ಥಿತರಿದ್ದರು.