ತತ್ತ್ವಸಂಖ್ಯಾನಂ ಆಂಗ್ಲಾನುವಾದ ಬಿಡುಗಡೆ

Must Read

ಫೌಂಡೇಶನ್ ಫಾರ್ ಪ್ರಿಸರ್ವೆಷನ್ ಆಫ್ ನಾಲೆಜ್ ಹಾಗು ತಾರಾ ಪ್ರಕಾಶನ ನಗರದ ಜೆ ಎಸ್ ಎಸ್ ಆಡಿಟೋರಿಯಂನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಮಧ್ವಾಚಾರ್ಯರ ಸರ್ವಮೂಲ ಗ್ರಂಥ “ತತ್ತ್ವ ಸಂಖ್ಯಾನಂ” ಕೃತಿಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ವಿದ್ವಾನ್ ಡಾ || ಪಿ. ವಿನಯಾಚಾರ್ಯರವರ ಆಂಗ್ಲಾನುವಾದ, ವ್ಯಾಖ್ಯಾನ ಮತ್ತು ವಿಮರ್ಶಾತ್ಮಕ ಅಧ್ಯಯನವಿರುವ ಪುಸ್ತಕವನ್ನು ಸೋಸಲೆ ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ಲೋಕಾರ್ಪಣೆಗೊಳಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.. ಕೆ.ಇ.ದೇವನಾಥನ್ , ಪೂರ್ಣಪ್ರಜ್ಞ ಸಂಶೋಧನಾ ಮಂದಿರದ ನಿರ್ದೇಶಕ ಡಾ.ಆನಂದತೀರ್ಥ ನಾಗಸಂಪಿಗೆ ಮತ್ತು ತಾರಾ ಪ್ರಕಾಶನದ ಪ್ರೊ.ಪಿ.ಆರ್ ಮುಕುಂದ್ ಉಪಸ್ಥಿತರಿದ್ದರು.

Latest News

ಕವನ : ಪ್ರೀತಿಸಿದ ತಪ್ಪಿಗೆ

ಪ್ರೀತಿಸಿದ ತಪ್ಪಿಗೆ... ಇಂದು ಈ ಮುಸ್ಸಂಜೆಯಲಿ.... ಯಾರೋ ಎಲ್ಲೋ ಪ್ರೀತಿಸುವ ಹೃದಯಕೆ ನೋವುಣಿಸಿರಬೇಕು... ಅಕಾಲದಲ್ಲಿ ಆಕಾಶ ಆರ್ಭಟಿಸಿ ಭೋರ್ಗರೆದು ಹೀಗೆ ಸುರಿಯಬೇಕಾದರೆ... ಸದ್ದಿಲ್ಲದೇ ಒಡೆದ ಎದೆ ತುಣುಕುಗಳು ಮುಗಿಲಲಿ ಶೋಕಗೀತೆ ನುಡಿಸುತಿವೆ....ಯಾರೋ ಎಲ್ಲೋ ಹೂವಂತ ಮನಸನು ಮಾತಿನ ಮುಳ್ಳುಗಳಿಂದ ಚುಚ್ಚಿ ನೋಯಿಸಿರಬೇಕು... ಹೆಪ್ಪುಗಟ್ಟಿದ ದುಃಖ ಕಪ್ಪು ಮೋಡದ ಒಡಲ ಬಗೆದು...

More Articles Like This

error: Content is protected !!
Join WhatsApp Group