ಮೂಡಲಗಿ – ಕರ್ನಾಟಕ ಪತ್ರಕರ್ತರ ಸಂಘಕ್ಕೆ ನಿವೇಶನ ನೀಡಬೇಕು ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಎಮ್.ಎಸ್.ಡಿ.ಪಾಟೀಲ ಮತ್ತು ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಅವರಿಗೆ ಸೋಮವಾರ ಘಟಕದ ಅಧ್ಯಕ್ಷ ಶಿವಾನಂದ ಮುಧೋಳ ಮತ್ತು ಸದಸ್ಯರು ಮನವಿ ಸಲ್ಲಿಸಿದರು.
ಮೂಡಲಗಿ ತಾಲೂಕಾ ಕೇಂದ್ರವಾಗಿ 4 ವರ್ಷಗಳು ಗತಿಸುತ್ತಿವೆ ಈ ತಾಲೂಕಿನಲ್ಲಿ ಕರ್ನಾಟಕ ಪತ್ರಕರ್ತರ ಸಂಘವು ದೇಶವ್ಯಾಪಿಯಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಈ ರಾಜ್ಯದ ತುಂಬ ಸಾವಿರಾರು ಪತ್ರಕರ್ತರನ್ನು ಗುರುತಿಸುವ ಮತ್ತು ಕಷ್ಟದ ಪರಿಸ್ಥಿತಿಯಲ್ಲಿ ಪತ್ರಕರ್ತರ ಕುಟುಂಬಕ್ಕೆ ಸಹಾಯ ಮಾಡಿಕೊಂಡು ಬಂದಿದೆ,
ಈ ಪತ್ರಕರ್ತರ ಸಂಘದ ಸದಸ್ಯರು ಈಗ ಮೂಡಲಗಿ ತಾಲೂಕಿನ ಹಲವಾರು ಹಳ್ಳಿಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮೂಡಲಗಿ ತಾಲೂಕಾ ಕೇಂದ್ರವಾಗಿ 4 ವರ್ಷಗಳು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಮೂಡಲಗಿಯಲ್ಲಿ ತಾಲೂಕಾ ಪತ್ರಕರ್ತರ ಸಂಘಕ್ಕೆ ಕಟ್ಟಡದ ಅವಶ್ಯ ಇದೆ ಆದ್ದರಿಂದ ಕರ್ನಾಟಕ ಪತ್ರಕರ್ತರ ಸಂಘದ ಕಟ್ಟಡಕ್ಕಾಗಿ ಪುರಸಭೆಯ ವ್ಯಾಪ್ತಿಯಲ್ಲಿ ಯಾವುದಾದರು ಖಾಲಿ ಜಾಗವನ್ನು ಪತ್ರಿಕಾ ಭವನ ನಿರ್ಮಾಣ ಮಾಡಲು ಉಚಿತವಾಗಿ ನೀಡಬೇಕು,
ಸಂಘಕ್ಕೆ ಖಾಲಿ ನಿವೇಶನ ನೀಡುವದರಿಂದ ಅಲ್ಲಿ ತಾಲೂಕಾ ಮಟ್ಟದ ಕಟ್ಟಡ ನಿರ್ಮಾಣ ಮಾಡಿ ಗ್ರಾಮೀಣ ಭಾಗದ ಪತ್ರಕರ್ತರಿಗೆ ಅನುಕೂಲವಾಗುವಂತಹ ಕಟ್ಟಡ ನಿರ್ಮಾಣ ಮಾಡಲಾಗುವದು ಆದ್ದರಿಂದ ಖಾಲಿ ನಿವೇಶನವನ್ನು ಉಚಿತವಾಗಿ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಎಲ್.ಸಿ.ಗಾಡವಿ, ಉಪಾಧ್ಯಕ್ಷ ಶಿವಬಸು ಗಾಡವಿ, ಹಣಮಂತ ಸತರಡ್ಡಿ, ಅಶೋಕ ಶಿದ್ಲಿಂಗಪ್ಪಗೋಳ, ಬಸವರಾಜ ಶೆಕ್ಕಿ, ಶಿವಬೋಧ ಗುಣಕಿ, ಮಹಾಲಿಂಗಯ್ಯ ನಂದಗಾಂವಮಠ, ಪ್ರಕಾಶ ಕೆಳಗಡೆ, ನವೀಣ ನಿಶಾನಿಮಠ, ಮುರಿಗೆಪ್ಪ ಮಾಲಗಾರ ಉಪಸ್ಥಿತರಿದ್ದರು.