spot_img
spot_img

ಸಂತೋಷ ಎಂದರೇನು?

Must Read

- Advertisement -

” ನಾನು ನಿಮಗೆ ಹೆಳಲು ಬಯಸುವದೆನೆಂದರೆ ಇಲ್ಲಿ ದೊಡ್ಡದೆಂಬುದು ಇಲ್ಲ .ಬದುಕು ತುಂಬಾ ಸಣ್ಣ ಪುಟ್ಟ ಸಂಗತಿಗಳಿಂದ ಕೊಡಿದೆ.ಆದ್ದರಿಂದ ಒಂದು ವೇಳೆ ನಿವೇನಾದರೊ ದೊಡ್ಡ ಸಂಗತಿಗಳ ವಿಷಯದಲ್ಲಿ ಆಸಕ್ತಿ ತೋರಿದರೆ ಬದುಕನ್ನು ಕಳೆದುಕೊಳ್ಳುವಿರಿ “

-‌ಓಶೋ

ಎಂತಹ ಅರ್ಥಗರ್ಭಿತ ಮಾತು ಸಂತೋಷ ಮತ್ತು ಆನಂದ ಎರಡು ಪದದ ಅರ್ಥ ಒಂದೇ. ನನ್ನ ಅರ್ಥ ದಲ್ಲಿ ಆನಂದ ಎಂದರೆ ಆತ್ಮವನ್ನು ನಂದನವನ್ನಾಗಿ ಮಾಡುವ ಪ್ರಕ್ರಿಯೆ. ಆದರೆ ಇಂದಿನ ಯುಗದಲ್ಲಿ ಒತ್ತಡ, ದ್ವೇಷ, ಭಯ, ಮತ್ತು ಅಸೂಯೆ ಎಂಬ ಹುಲ್ಲಿನ ಬಣವೆಯಲ್ಲಿ ಸಂತೋಷ ಎಂಬ ಸೂಜಿಯನ್ನು ಹುಡುಕುವುದು ಬಹಳ ಕಷ್ಟದ ಕೆಲಸ.

- Advertisement -

ಆನಂದಕ್ಕೆ ಅರ್ಥ ಬರಬೇಕಾದರೆ ಸ್ವಲ್ಪಮಟ್ಟಿಗೆ ಅಸಂತೋಷ ಇರಲೇಬೇಕು. ಜೀವನ ಬರಿ ಸಂತೋಷದ ಜೇನುಗೂಡಲ್ಲ ಅದರಲ್ಲಿ ಮುಳ್ಳುಗಳು ಇವೆ.ಸಂತೋಷದ ಜೀವನ ನಡೆಸಬೇಕಾದರೆ ಕುಟುಂದಲ್ಲಿ ಪರಸ್ಪರ ನಂಬಿಕೆ ವಿಶ್ವಾಸ ಇರಬೇಕು.ನಮಗೆ ಆನಂದ ಸಿಗಬೇಕಾದರೆ ಮೊದಲು ನಮ್ಮ ಇತಿಮಿತಿಗಳನ್ನು ಅರಿತುಕೊಳ್ಳಬೇಕು. ಅನಂದ ಪಡಬೇಕಾದರೆ ಸಣ್ಣ ಪುಟ್ಟ ಸಂಗತಿಗಳೆ ಸಾಕು.

ಒತ್ತಡದ ಜೀವನ ಮರೆತು ನಮ್ಮ ಕುಟುಂಬದವರೊಡನೆ ಬೆರೆತಾಗ ಮಾತ್ರ ಸಂತೋಷದ ಬಾಗಿಲು ತೆರೆಯುತ್ತದೆ.ಭಯ,ನೌಕರಿಯ ಅಸ್ಥಿರತೆ, ಪ್ರತಿಷ್ಠೆಯ ವಿಷಯಗಳನ್ನು ದೂರ ಇಟ್ಟಾಗ ಆಗ ನಮಗೆ ಸಂತೋಷ ಸಿಗುವುದು. ಜೀವನ ನಡೆಸಲು ಹಣದ ಅವಶ್ಯಕತೆ ಬೇಕು. ಆದರೆ ಹಣದ ಬೆನ್ನು ಹತ್ತಿ ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುವದು ಮೂರ್ಖತನ. ಬೆಳಗಿನ ಸೂರ್ಯನ ಬಿಸಿಲು, ಮಳೆಯ ಸೊಬಗು ಮತ್ತು ಮನೆಯ ಅಂಗಳದಲ್ಲಿ ಹೊವುಗಳು ಅರಳುವುದು ಇವುಗಳನ್ನು ಗಮನವಿಟ್ಟು ನೊಡಿದಾಗ ಆನಂದ ತಾನಾಗಿಯೆ ಉಕ್ಕುತ್ತದೆ.

ಮಕ್ಕಳೊಡನೆ ಬೆರೆಯುವದು,ವೃದ್ದರಿಗೆ ಮತ್ತು ಆಶಕ್ತರಿಗೆ ಸಹಾಯ ಮಾಡುವದು ಇವು ಜೀವನದಲ್ಲಿ ತುಂಬ ಖುಷಿ ಕೂಡುವ ಸಂಗತಿಗಳು. ಮನಸಿನಲ್ಲಿ ದುಗುಡು ಇಟ್ಟುಕೊಂಡು ಎಲ್ಲಿಯೆ ಪ್ರವಾಸ ಮಾಡಿದರು ಸಂತೋಷ ಸಿಗಲಾರದು. ದೈನಂದಿನ ಚಟುವಟಿಕೆಗಳಲ್ಲಿ ಸಣ್ಣ ಪುಟ್ಟ ಸಂಗತಿಗಳಲ್ಲಿ ಸಂತೋಷ ಕಾಣುವದು ಒಂದು ಕಲೆ. ಬಿಡುವಿದ್ದಾಗ ಆಫಿಸಗಳಲ್ಲಿ ಸಹೋದ್ಯೋಗಿಗಳಿಗೆ ಹಾಸ್ಯ ಮಿಶ್ರಿತ ಜೋಕಗಳನ್ನು ಹೇಳಿ ನಗಿಸುವದು, ನಾವು ಅವರೊಡನೆ ಬೆರೆತು ನಗುವದು ನಾವು ಎಷ್ಟೆ ದೊಡ್ಡ ಹುದ್ದೆಯಲ್ಲಿ ಇದ್ದರು ಪ್ರತಿಷ್ಟೆ ಬಿಟ್ಡು ಎಲ್ಲರೊಡನೆ ಬೆರೆಯುವದು,ಇವೆಲ್ಲ ಚಿಕ್ಕ ಪುಟ್ಟ ಸಂಗತಿಗಳೆ ಆದರೆ ಇವು ತುಂಬಾ ಖುಷಿಕೊಡುವದು.ನಮ್ಮ ಜೀವನ ಶಾಶ್ವತವಲ್ಲ, ಆದರೆ ನಾವು ಸಂತೋಷದಿಂದ ಕಳೆದ ಕ್ಷಣಗಳು ಶಾಶ್ವತ. ಇವುಗಳನ್ನು ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಸಂತೋಷಮಯವಾಗುತ್ತೆ.

- Advertisement -

ಕಿರಣ.ಯಲಿಗಾರ ಮುನವಳ್ಳಿ

- Advertisement -
- Advertisement -

Latest News

ಉಚಿತ ಕಣ್ಣು ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ಸಿಂದಗಿ; ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಿಂದಗಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್, ವಿಜಯಪುರ, ಜಿ.ಪಿ. ಪೋರವಾಲ...
- Advertisement -

More Articles Like This

- Advertisement -
close
error: Content is protected !!
Join WhatsApp Group