ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ

Must Read

ಬೀದರ – ಇಬ್ಬರೂ ಒಂದೇ ಕ್ಷೇತ್ರ ಇಬ್ಬರೂ ಸಹೋದರರು ಆದರೆ ಪಕ್ಷಗಳು ಬೇರೆ ಬೇರೆ. ಪರಿಷತ್ ಚುನಾವಣೆಯಲ್ಲಿ ಇಬ್ಬರೂ ಸಹೋದರರಿಗೆ ಜಟಾಪಟಿ ಶುರುವಾಗಿದೆ. ಇವರ ಮಧ್ಯೆ ಪಕ್ಷಗಳ ಕಾರ್ಯಕರ್ತರು ಕೂಡ ಗಲಾಟೆ ಮಾಡಿಕೊಂಡಿದ್ದಾರೆ.

ಜಿಲ್ಲೆಯ ಜ್ಯಾಂತಿ ಗ್ರಾಮ ಪಂಚಾಯತಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಪ್ರಕಾಶ್ ಖಂಡ್ರೆ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಪೊಲೀಸರ ಮಧ್ಯಸ್ಥಿಕೆ ಯಿಂದ ಗಲಾಟೆ ನಿಯಂತ್ರಣಕ್ಕೆ ಬಂದಿದ್ದು ಸದ್ಯಕ್ಕೆ ಜ್ಯಾಂತಿ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಂಗ್ರೆಸ್ ಪಕ್ಷದಿಂದ ಭಾಲ್ಕಿ ತಾಲೂಕಿನ ಜ್ಯಾಂತಿ ಗ್ರಾಮದ ವೈಜನಾಥ ಪಾಟೀಲ ಅವರ ತೋಟದ ಮನೆಯಲ್ಲಿ ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪಂಚಾಯತ್ ಸದಸ್ಯರಿಗೆ ಹಣ ಹಂಚುತ್ತಿದ್ದಾರೆ ಎಂದು ಮಾಹಿತಿ ಲಭ್ಯ ಇದ್ದು ಸ್ಥಳಕ್ಕೆ ಆಗಮಿಸಿದ ಬಿ ಜೆ ಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ. ಆದರೆ ಈಶ್ವರ್ ಖಂಡ್ರೆ ಅವರ ವಾಹನ ಬರುವ ರಸ್ತೆ ಗೆ ಪ್ರಕಾಶ ಖಂಡ್ರೆ ಅವರ ವಾಹನ ಅಡ್ಡ ಹಚ್ಚಿ ಕೆಲ ಕಾಲ ಈಶ್ವರ್ ಖಂಡ್ರೆ ಅವರನ್ನು ತಡೆ ಹಿಡಿದ್ದರು. ಇದರಿಂದ ಸ್ಥಳದಲ್ಲಿ ಉದ್ರಿಕ್ತ ಸ್ಥಿತಿ ನಿರ್ಮಾಣವಾಗಿತ್ತು.ಇವಾಗ ಜ್ಯಾಂತಿ ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿ ಕೆಂಡದಂತೆ ಇದೆ.

ಮದ್ಯದ ಬಾಟಲು ವಶ

ಒತ್ತ ಸಚಿವ ಪ್ರಭು ಚೌಹಾಣ್​ ಹಿಂಬಾಲಿಸುತ್ತಿದ್ದ ಕಾಂಗ್ರೆಸ್​ ಪರಿಷತ್ ಅಭ್ಯರ್ಥಿ ಸಹಚರರ ಕಾರಿನಲ್ಲಿ ಮದ್ಯ ಬಾಟಲ್ ಪತ್ತೆಯಾಗಿದೆ.

ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಎಎಸ್ಪಿ ಗೋಪಾಲ ಹಾಗೂ ಪೊಲೀಸರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜತೆ ಪರವಾನಿಗೆ ಇಲ್ಲದೇ ಓಡಾಡುತ್ತಿರುವ ವಾಹನಗಳಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ.

ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲರು ಬೆಳಗ್ಗೆಯಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್​ ರ ಬೆಂಬಿಡದೆ ಕಾರ್ಯಕರ್ತರ ಜೊತೆ ಕಾರಿನಲ್ಲಿ ಹಿಂಬಾಲಿಸುತ್ತಿದ್ದ ವಿಧಾನ ಪರಿಷತ್​ ಕಾಂಗ್ರೆಸ್​ ಅಭ್ಯರ್ಥಿ ಭೀಮರಾವ್​ ಪಾಟೀಲ್​ ಸಹಚರರ ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ.

ಔರಾದ್ ತಾಲೂಕಿನ ಚಿಮ್ಮೆಗಾಂವ್, ಮುರ್ಕಿ ಸೇರಿದಂತೆ ಹಲವು ಗ್ರಾಮಗಳಿಗೆ ಸಚಿವರು ಭೇಟಿ ನೀಡಿದರು. ಮುರ್ಕಿ ಗ್ರಾಮಕ್ಕೆ ಬಂದಾಗ ಕಾಂಗ್ರೆಸ್​-ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ ಎಎಸ್ಪಿ ಗೋಪಾಲ ಹಾಗೂ ಪೊಲೀಸರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜತೆ ಪರವಾನಿಗೆ ಇಲ್ಲದೇ ಓಡಾಡುತ್ತಿರುವ ವಾಹನಗಳಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group