ಮೂಡಲಗಿ:- ಪಟ್ಟಣದ ಶ್ರೀ ಸಾಯಿ ಕಾಲೇಜಿನ ವಿದ್ಯಾರ್ಥಿನಿಯರು ಖೋ ಖೋ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡು ಸಾಧನೆ ಮಾಡಿದ್ದಾರೆ. ನಿಪ್ಪಾಣಿ ತಾಲೂಕಿನ ಬೇಡಕಿಹಾಳದ ಬಿ.ಎಸ್. ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಖೋ ಖೋ ಕ್ರೀಡೆಯಲ್ಲಿ ಮೂಡಲಗಿಯ ಶ್ರೀ ಸಾಯಿ ಪದವಿ ಪೂರ್ವ ಮಹಾವಿದ್ಯಾಲಯದವಿದ್ಯಾರ್ಥಿನಿಯರು ಭಾಗವಹಿಸಿ ವಿಜೇತರಾಗಿ, ರಾಜ್ಯಮಟ್ಟಕ್ಕೆ
ಆಯ್ಕೆಯಾದರು.
ಈ ತಂಡಕ್ಕೆ ಮಹಾವಿದ್ಯಾಲಯದ ಅಧ್ಯಕ್ಷರಾದ ಪಿ. ಆರ್.
ಸೋನವಾಲಕರ ಮತ್ತು ಆಡಳಿತ ಮಂಡಳಿ, ಪ್ರಾಚಾರ್ಯರಾದ ಪ್ರವೀಣ ಕುಲಗೋಡ ಮತ್ತು
ಸಮಸ್ತ ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ಸಲ್ಲಿಸಿ,
ರಾಜ್ಯಮಟ್ಟದಲ್ಲಿ ಗೆದ್ದು, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಲಿ ಎಂದು ಹಾರೈಸಿದರು.
ಖೋ ಖೋದಲ್ಲಿ ಗೆದ್ದ ತಂಡದಲ್ಲಿ ವಿದ್ಯಾರ್ಥಿನಿಯರಾದ ಅನನ್ಯ ತೇರದಾಳ, ಪ್ರೀತಿ ಕುಂದರಗಿ, ಮಾಯವ್ವ ಹುಲ್ಲೋಳಿ, ಜ್ಯೋತಿ ಈಟಿ, ಸ್ಫೂರ್ತಿ ಢವಳೇಶ್ವರ, ರೂಪಾ ಗಡದಿ, ಲತಾ ಪಾಟೀಲ, ಸಂಗೀತ ಹಳಿಂಗಳಿ, ರಕ್ಷಿತಾ ಕೆಂಪ್ಪಣ್ಣವರ, ಶಿವಲೀಲಾ ದಡ್ಡಗೋಳ, ಸಂಗೀತ ಕುರಣಿ ಮತ್ತು ಯಲ್ಲವ್ವ ಇದ್ದಾರೆ