ಸತೀಶ ಮಾಳಗೊಂಡ ಅವರ ‘ಸತ್ ಪಾತ’ ಕೃತಿ ಬಿಡುಗಡೆ ಹಾಗೂ ಕವಿಗೋಷ್ಠಿ

0
330

ಬೆಳಗಾವಿ–  ಕರ್ನಾಟಕ ರಾಜ್ಯದ ಐತಿಹಾಸಿಕ ಊರು, ಮಲೆನಾಡ ಒಡಲು, ಅನನ್ಯ ಪ್ರಕೃತಿ ಸೌಂದರ್ಯ ಧರೆ, ಸಂಗೊಳ್ಳಿ ರಾಯಣ್ಣನ ಸಮಾಧಿ ಇರುವ  ಬೆಳಗಾವಿ ಜಿಲ್ಲೆಯ ನಂದಗಡದಲ್ಲಿ  ಇದೇ ಅಕ್ಟೋಬರ್ ೨ ರಂದು ನಂದಗಡ ಗ್ರಾಮ ನಾಗರಿಕ ವೇದಿಕೆ ಹಾಗೂ ನವಿಲುಗರಿ ಸಾಹಿತ್ಯ  ಮತ್ತು ಸಾಂಸ್ಕೃತಿಕ ವೇದಿಕೆ ಧಾರವಾಡ ಇವರ ಸಹಯೋಗದಲ್ಲಿ ಸತೀಶ. ಬಿ. ಮಾಳಗೊಂಡ ಅವರ ರಚನೆಯ ಸತ್ ಪಾತ ಎಂಬ ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ.

ಸತೀಶ ಮಾಳಗೊಂಡರ ಪ್ರಥಮ ಕವನ ಸಂಕಲನವಾದ  ಸತ್ ಪಾತ  ಲೋಕಾರ್ಪಣೆ ಕಾರ್ಯಕ್ರಮದ ಜೊತೆಗೆ ಕವಿಗೋಷ್ಠಿ ಕೂಡ ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರಣ ಆಸಕ್ತ ಕವಿ ಮಿತ್ರರು ಕವಿಗೋಷ್ಠಿಯಲ್ಲಿ ಭಾಗವಹಿಸಿ “ಸತ್ ಪಾತ”  ಕವನ ಸಂಕಲನಕ್ಕೆ ಮನದುಂಬಿ ಹಾರೈಸಬೇಕೆಂದು ಕೋರಲಾಗಿದೆ.

ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳಿಗೆ ಪುಸ್ತಕ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಗುವದು.

ಭಾಗವಹಿಸಲು ಆಸಕ್ತಿ ಹೊಂದಿದವರು ತಮ್ಮ ನೆಚ್ಚಿನ ಯಾವುದಾದರೂ ಒಂದು  ಕವನವನ್ನು ವಾಚಿಸಬೇಕು.

ಭಾಗವಹಿಸಲು ಇಚ್ಚಿಸುವ ಕವಿಗಳು ಕೆಳಗೆ ನೀಡಿದ ದೂರವಾಣಿ ಸಂಖ್ಯೆಗೆ ವಾಟ್ಸಪ್ ಮೂಲಕ ಹೆಸರು ನೊಂದಾಯಿಸಿಕೊಳ್ಳಬೇಕು.

ವಾಟ್ಸಪ್ ಸಂಖ್ಯೆ: 9739059166, 9980268557

ಹೆಸರು ನೊಂದಾಯಿಸಲು ಕೊನೆಯ ದಿನಾಂಕ ೨೭-೦೯-೨೦೨೨. ಮೊದಲು ಬಂದ ೨೦ ಹೆಸರುಗಳಿಗೆ ಮಾತ್ರ ಅವಕಾಶ.

ಕಾರ್ಯಕ್ರಮದ ಸಮಯ ಬೆಳಿಗ್ಗೆ ೧೦.೦೦ ರಿಂದ ಸಂಜೆ ೫.೦೦ ರವರೆಗೆ ನಡೆಯಲಿದೆ ಎಂದು ಸತೀಶ. ಬಿ. ಮಾಳಗೊಂಡ,
ಗೌರವ ಸಲಹೆಗಾರರು, ನವಿಲುಗರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ(ರಿ) ಧಾರವಾಡ ಇವರು ಕೋರಿದ್ದಾರೆ.