spot_img
spot_img

ಔಷಧೀಯ ಸಸ್ಯಗಳನ್ನು ಉಳಿಸಿ, ಬಳಸಿ, ಬೆಳೆಸಿ

Must Read

- Advertisement -

ಬೆಳಗಾವಿ: ಔಷಧೀಯ ಸಸ್ಯಗಳನ್ನು ಉಳಿಸಿ, ಔಷಧೀಯ ಸಸ್ಯಗಳನ್ನು ಬಳಸಿ, ಔಷಧೀಯ ಸಸ್ಯಗಳನ್ನು ಬೆಳೆಸಿ. ಈ ತತ್ವಗಳನ್ನು ಆಧರಿಸಿ ಔಷಧೀಯ ಸಸ್ಯಗಳ ಸುಸ್ಥಿರ ಅಭಿವೃದ್ಧಿಗೆ ಮೂಲಮಂತ್ರವಾಗಬೇಕೆಂದು ಔಷಧೀಯ ಸಸ್ಯಗಳ ಸಂವರ್ಧನೆ ಹಾಗೂ ಸಂಶೋಧನೆ ಕುರಿತು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ ಟ್ರಾನ್ಸ್ ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಔಷಧೀಯ ಸಸ್ಯಗಳ ಅಭಿವೃದ್ಧಿ ವಿಭಾಗದ ಪ್ರಾಧ್ಯಾಪಕ ಡಾ. ಜಗನ್ನಾಥರಾವ್ ಅಭಿಪ್ರಾಯ ಪಟ್ಟರು.

ದಿ‌ 7 ರಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ, ಗದಗ ಹಾಗೂ  ಶ್ರೀ ಕಪ್ಪತ ಮಲ್ಲೇಶ್ವರ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ಲಿಮಿಟೆಡ್, ಕಡಕೋಳ ಇವರ ಸಹಯೋಗದಲ್ಲಿ ದೇವರಡ್ಡಿ ಅಗಸನಕೊಪ್ಪ ರವರ ತೋಟದಲ್ಲಿ ಆಯೋಜಿಸಿದ ಔಷಧೀಯ ಸಸ್ಯಗಳ ಬೆಳೆಸುವ ಕುರಿತು ವೈಜ್ಞಾನಿಕ ಕಾರ್ಯಾಗಾರದಲ್ಲಿ ವಿಷಯ ಮಂಡಿಸುವ ಸಂದರ್ಭದಲ್ಲಿ ಅವರು ಮಾತನಾಡಿದರು.

ಜಗತ್ತಿನಾದ್ಯಂತ ಅಳಿವಿನಂಚಿನಲ್ಲಿರುವ ಅಪರೂಪದ ಔಷಧಿ ಸಸಸ್ಯಗಳು ಕಪ್ಪತಗುಡ್ಡದಲ್ಲಿರುವುದು ನಮ್ಮ ಹೆಮ್ಮೆಯಾಗಿದ್ದು, ಅಂಥ ಸಸ್ಯಗಳ ಉಳಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕಾಗಿದೆ. ಲಭ್ಯವಿರುವ ಔಷಧೀಯ ಸಸ್ಯಗಳ ಸುಸ್ಥಿರ ಬಳಕೆಗಾಗಿ ಸಮಯಬದ್ಧ ಕ್ರಿಯಾಯೋಜನೆ ಹಮ್ಮಿಕೊಳ್ಳುವುದರ ಜೊತೆಗೆ ಈ ಸಸ್ಯಗಳ ಬೆಳವಣಿಗೆಗಾಗಿ ತುರ್ತು ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದ್ದು, ನಾವೆಲ್ಲರೂ ಯುದ್ಧೋಪಾದಿಯಲ್ಲಿ ಕಂಕಣಬದ್ಧರಾಗಬೇಕೆಂದು ಕರೆ ನೀಡಿದರು.

- Advertisement -

ಜೀವ ವೈವಿಧ್ಯಗಳ ತಾಣವಾಗಿರುವ ಕಪ್ಪತಗುಡ್ಡ ಪರಿಸರದಲ್ಲಿ ಸುಸ್ಥಿರತೆಗಾಗಿ ಜನಸಾಮಾನ್ಯರು, ರೈತರು, ವಿಜ್ಞಾನಿಗಳು, ವಿಶ್ವವಿದ್ಯಾಲಯಗಳು, ವಿದ್ಯಾರ್ಥಿಗಳು, ಹಾಗೂ ಸಮಾಜದ ಎಲ್ಲ ಸ್ಥರಗಳ ಜನರ ಭಾಗೀದಾರತ್ವದಿಂದ ಉಳಿಕೆ, ಬಳಕೆ, ಹಾಗೂ ಬೆಳೆಸುವಿಕೆಗಳು ಅರ್ಥಪಡೆದುಕೊಳ್ಳುತ್ತವೆಯೆಂದು ವಿವರಿಸಿದರು.

ಅಳಿವಿನಂಚಿನಲ್ಲಿರುವ ಅಂಟುಪರ್ಣಿ, (Pseudarthria viscida), ಚಿಲ್ಲುಮರ (Strychnos potatorum), ದಾಗಡಿ ಬಳ್ಳಿ (Coccolus hirsutus), ಎಕ್ಕಿ (Calatropis gigantea), ಫ್ಲಾವರ್ ಆಫ್ ಕೋಡುಮುರುಗಾ (Maerua oblongifolia), ಫ್ಲಾವರಿಂಗ್ ಶ್ಯಾವಿ (Soymida febrifuga), ಹಾಲಿಪ್ಪೆ ಹೂವು (Madhuca latifolia), ಹೇಲುಕಸ (Ageratum conyzoides), ಹೊನ್ನಮುರುಕ್ಕಿ (Cassia auriculata), ಇಲಿ ಬಳ್ಳಿ (Passiflora foetida), ಇನ್ಫ್ಲೋರೋಸೆನ್ಸ್ ಆಫ್ ಹಾಲಿಪ್ಪೆ (Madhura latifolia), ಇನ್ಫ್ಲೋರೆಸೆನ್ಸ್ ಆಫ್ ತೊಟ್ಲೆಬಳ್ಳಿ (Capparis zeylanics), ಕಾಡು ಬಿಕ್ಕೆ ಹಣ್ಣು (Gardenia latifolia), ಕಕ್ಕೆಬಳ್ಳಿ, (Capparis sepiaria), ಕಾಲ ಮುರುಕ (Cadaba fruticosa), ಕೋಡ ಮುರುಗ (Maerua oblongifoloa), ಮಧುನಾಸಿನಿ (Gymnema sylvestre), ಪುಲ್ಲಮ್ ಪುರ್ಚಿ (Oxalis corniculata) ಸ್ಯಾಪ್ಲಿಂಗ್ ಆಫ್ ಟುಮ್ರಿ (Diospyros melanoxylon), ಸೋಮೇದ ಮರ (Soymida febrifuga), ಉತ್ತೆ (Dolichandrone atrovirens), ಎಡಮುರಿ (Helicteres isora), ಮುಂತಾದ ಔಷಧೀಯ ಸಸ್ಯಗಳ ಕುರಿತು ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡರಲ್ಲದೆ ಅವುಗಳ ಬಳಕೆ ಹಾಗೂ ಬೆಳೆಸುವ ಕುರಿತು ಸಾಂಪ್ರದಾಯಿಕ ಮತ್ತು ವೈಜ್ಞಾನಿಕ ಮಾಹಿತಿಯನ್ನೊಳಗೊಂಡ ಅವರ ವಿದ್ವತ್ಪೂರ್ಣ ವಿಷಯ ಮಂಡನೆ ಸಭಿಕರು ಕೂಡಲೇ ಕಾರ್ಯತತ್ಪರರಾಗುವಂತೆ ಪ್ರೇರಣಾತ್ಮಕವಾಗಿತ್ತು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group