ಬೆಳಗಾವಿ – ದಿ 7-4-24 ರಂದು ಲಿಂಗಾಯತ ಸಂಘಟನೆಯ ವಚನ ಪಿತಾಮಹ ಡಾ.ಪ.ಗು.ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ವಾರದ ಪ್ರಾರ್ಥನೆ ಹಾಗೂ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಪ್ರಾರಂಭದಲ್ಲಿ ಮಹಾದೇವಿ ಅರಳಿ ವಚನ ಪ್ರಾರ್ಥನೆ ನಡೆಸಿಕೊಟ್ಟರು, ಜಯಶ್ರೀ ಚಾವಲಗಿ, ಜಾಹ್ನವಿ ಘೋರ್ಪಡೆ, ದೀಪಾ ಪಾಟೀಲ, ಆನಂದ ಕರ್ಕಿ, ವಿ.ಕೆ.ಪಾಟೀಲ, ಬಿ.ಪಿ.ಜೇವಣಿ, ಸುರೇಶ ನರಗುಂದ, ಶಂಕರ ಗುಡಸ ವಚನಗಳನ್ನು ಪ್ರಸ್ತುತ ಪಡಿಸಿದರು.
ಡಾ. ನಾನಾಸಾಹೇಬ ಪ್ರತಿಷ್ಠಾನ ವತಿಯಿಂದ ಪಂಕಜ ಘೋಡಕೆ, ಬಾಹು ಕಂಗ್ರಾಲಕರ, ಗ್ರೀನ್ ಸೇವಿಯರ್ ವತಿಯಿಂದ ರಾಘವೇಂದ್ರ ನಾಯ್ಡು, ಶೈಲೇಜ ತುಬಾಕಿ ಮಾತನಾಡಿ ಮರಗಳಿಂದ ಹಾಗೂ ಉತ್ತಮ ಪರಿಸರದಿಂದ ಮಾತ್ರ ಮನುಷ್ಯ ಒಳ್ಳೆಯ ಆರೋಗ್ಯ ಪಡೆಯಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದಾಸೋಹ ಸೇವೆಯನ್ನು ಶ್ರೀ ಮಹಾಂತೇಶ ಮೆಣಶಿನಕಾಯಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಈರಣ್ಣ ದೇಯನ್ನವರ, ಶಶಿಭೂಷಣ ಪಾಟೀಲ, ಅಶೋಕ ಇಟಗಿ, ರಮೇಶ ಕಳಸಣ್ವರ, ಶಂಕರ ಶೆಟ್ಟಿ, ಮಲ್ಲಿಕಾರ್ಜುನ ಶಿರಗುಪ್ಪಿ ಭಾಗವಹಿಸಿದ್ದರು. ಸಂಗಮೇಶ ಅರಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.