ಮೈಸೂರು – ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿಗೆ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.91.07 ಫಲಿತಾಂಶ ಲಭಿಸಿದೆ.
ಒಟ್ಟು 336 ವಿದ್ಯಾರ್ಥಿಗಳ ಪೈಕಿ 306 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 58 ಅತ್ಯುನ್ನತ ಶ್ರೇಣಿ, 210 ಪ್ರಥಮ ದರ್ಜೆ, 32 ದ್ವಿತೀಯ ದರ್ಜೆ, 6 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿ, ಕಾಲೇಜಿಗೆ ಒಟ್ಟು 91.07 ಫಲಿತಾಂಶ ಲಭಿಸಿದೆ.
ಕಾಲೇಜಿನಲ್ಲಿ ಪ್ರಥಮ ಸ್ಥಾನವನ್ನು ವಾಣಿಜ್ಯ ವಿಭಾಗದಲ್ಲಿ ಪುರುಷೋತ್ತಮ ಪಿ. 600ಕ್ಕೆ 557 ಅಂಕಗಳನ್ನು ಪಡೆದರೆ, ಗಂಗಾಧರ್ ವಿಜ್ಞಾನ ವಿಭಾಗದಲ್ಲಿ 572 ಅಂಕಗಳೊಂದಿಗೆ 95.33 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಹರ್ಷ ಎ. 570, ಸಭಾ ಆರ್.568 ಚಂದನಾ ಎಂ. 568, ಛಾಯಾ ಎಂ.ಎಸ್. 567, ಸೃಜನಾ ಎಸ್. 565, ನಿಶ್ಚಿತ 563, ಶಶಿಕಲಾ 562, ನಿರಂಜನ್ ಎಸ್. 561, ಪ್ರಮೋದ್ ಡಿ.ಸಿ. 561, ನವೀನ ಬಿ.ಎನ್.558 ಅಂಕಗಳನ್ನು ಗಳಿಸಿರುತ್ತಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ.5 ರಷ್ಟು ಹೆಚ್ಚು ಫಲಿತಾಂಶ ಕಾಲೇಜಿಗೆ ಲಭಿಸಿದ್ದು, ಇದಕ್ಕೆ ಆಡಳಿತ ಮಂಡಳಿ ಹಾಗೂ ಅಧ್ಯಾಪಕರ ಸತತ ಪರಿಶ್ರಮ ಹಾಗೂ ಬಹು ಆಯ್ಕೆ ಪ್ರಶ್ನೆಗಳ ಕಲಿಕೆಗೆ ಹೆಚ್ಚು ಆದ್ಯತೆ ಮತ್ತು ವಿದ್ಯಾರ್ಥಿಗಳ ಸತತ ಓದಿನಲ್ಲಿ ಆಸಕ್ತಿ ನೀಡಿದ್ದು, ಫಲಿತಾಂಶ ಹೆಚ್ಚಲು ಕಾರಣವಾಗಿದೆ ಎಂದು ಕಾಲೇಜಿನ ಪ್ರಾಂಶಪಾಲರಾದ ಸಿ.ಕೆ.ಅಶೋಕಕುಮಾರ್ ತಿಳಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.