- Advertisement -
ಮೈಸೂರು – ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಯಾದವಗಿರಿ ಸೇವಾ ಕೇಂದ್ರದಲ್ಲಿ ಇಂದಿನಿಂದ (ಏ.10) ಐದು ದಿನಗಳ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಿಣ್ಣರೇ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಕ್ಕಳಿಗೆ ವ್ಯಕ್ತಿತ್ವ ನಿರ್ಮಾಣ, ಯೋಗ, ಮೌಲ್ಯಾಧಾರಿತ ಕಥೆಗಳು, ಚಿತ್ರಕಲೆ, ಸೃಜನಾತ್ಮಕ ಕಲಿಕೆ, ಸಂವಹನ ಕೌಶಲ, ಆಟೋಟಗಳ ಬಗ್ಗೆ ತರಬೇತಿ ನೀಡಲಾಯಿತು.
ಎಲ್ಲ ಮಕ್ಕಳು ಅತಿ ಉತ್ಸಾಹದಿಂದ ಈ ಶಿಬಿರದಲ್ಲಿ ಪಾಲ್ಗೊಂಡು, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
- Advertisement -
ಈ ಶಿಬಿರವನ್ನು ಏ.14ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಡೆಯಲಿದೆ. ಏ.12ರಂದು ಸಂಜೆ 5ರಿಂದ 6.30ರವರೆಗೆ ಪೋಷಕರಿಗಾಗಿ ಉಚಿತ ಪಾಸಿಟಿವ್ ಪೇರೆಂಟಿಂಗ್ ಸೆಷೆನ್ ಬಿ.ಎಲ್.ವೇದಪ್ರದರವರಿಂದ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಬಿಕೆ ರಶ್ಮಿ, ಬಿಕೆ ಸಾಧನಾ, ಬಿಕೆ ಶ್ರೀಕಂಠಯ್ಯ, ಬಿಕೆ ನರಸಿಂಹ ಹಾಗೂ ಮುಂತಾದವರು ಭಾಗವಹಿಸಿದ್ದರು.