- Advertisement -
ಬೀದರ: ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮ ಪಂಚಾಯತಿಯಲ್ಲಿ ನಡೆದ ಲಂಚಾವತಾರದ ವಿಡಿಯೋ ಒಂದು ವೈರಲ್ ಆಗಿದೆ.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಚಂದ್ರಕಾಂತ ಮಾಮನೆ ಜಮೀನಿನ ಮ್ಯುಟೇಷನ್ ವಿಚಾರಕ್ಕೆ ರೂ. 4500 ಕ್ಕೆ ಬೇಡಿಕೆ ಇಟ್ಟಿದ್ದು, ಕೇಳಿದಾಗ ಅಧ್ಯಕ್ಷರಿಗೆ, ಪಿಡಿಓ, ಕಾರ್ಯದರ್ಶಿ ಸೇರಿ ಮೂರ್ನಾಲ್ಕು ಜನರಿಗೆ ಪಾಲು ನೀಡಬೇಕು ಎಂದು ಕಾರಣ ಹೇಳಿದ ಘಟನೆ ನಡೆದಿದೆ.
ಬಡವರಿದ್ದಾರೆ ಅವರಿಂದ ಹಣ ತೆಗೆದುಕೊಳ್ಳಬೇಡಿ ಎಂದರೂ ಹಣ ನೀಡದೇ ಇದ್ದರೆ ಕೆಲಸವೇ ಆಗೋದಿಲ್ಲ ಎಂದ ಲಂಚಬಾಕ ಅಧಿಕಾರಿ ಚಂದ್ರಕಾಂತ ಮಾಮನಿಯಿಂದ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋವನ್ನು ಗೋರ್ಟಾ ಗ್ರಾಮ ಪಂಚಾಯತ್ ಸದಸ್ಯ ಅರುಣ್ ತೆಲಾಂಗ್ ವೈರಲ್ ಮಾಡಿದ್ದಾರೆ
- Advertisement -
ಈ ಮಧ್ಯೆ ಬೀದರ್ ಜಿಲ್ಲೆಯ ಪಂಚಾಯತಿಗಳಲ್ಲಿ ಭ್ರಷ್ಟಾಚಾರ ಹೆಚ್ವಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ ಸಾರ್ವಜನಿಕರು.
ವರದಿ: ನಂದಕುಮಾರ ಕರಂಜೆ, ಬೀದರ