spot_img
spot_img

ಗ್ರಾಪಂ ಸದಸ್ಯನ ಬಳಿ ಲಂಚಕ್ಕೆ ಬೇಡಿಕೆ ಇಟ್ಟ ಕಾರ್ಯದರ್ಶಿ; ವಿಡಿಯೋ ವೈರಲ್

Must Read

- Advertisement -

ಬೀದರ: ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮ ಪಂಚಾಯತಿಯಲ್ಲಿ ನಡೆದ ಲಂಚಾವತಾರದ ವಿಡಿಯೋ ಒಂದು ವೈರಲ್ ಆಗಿದೆ.

ಗ್ರಾಮ‌ ಪಂಚಾಯತ್‌ ಕಾರ್ಯದರ್ಶಿ ಚಂದ್ರಕಾಂತ ಮಾಮನೆ ಜಮೀನಿನ ಮ್ಯುಟೇಷನ್ ವಿಚಾರಕ್ಕೆ ರೂ. 4500 ಕ್ಕೆ ಬೇಡಿಕೆ ಇಟ್ಟಿದ್ದು, ಕೇಳಿದಾಗ ಅಧ್ಯಕ್ಷರಿಗೆ, ಪಿಡಿಓ, ಕಾರ್ಯದರ್ಶಿ ಸೇರಿ ಮೂರ್ನಾಲ್ಕು ಜನರಿಗೆ ಪಾಲು ನೀಡಬೇಕು ಎಂದು ಕಾರಣ ಹೇಳಿದ ಘಟನೆ ನಡೆದಿದೆ.

ಬಡವರಿದ್ದಾರೆ ಅವರಿಂದ ಹಣ ತೆಗೆದುಕೊಳ್ಳಬೇಡಿ ಎಂದರೂ ಹಣ ನೀಡದೇ ಇದ್ದರೆ ಕೆಲಸವೇ ಆಗೋದಿಲ್ಲ ಎಂದ ಲಂಚಬಾಕ ಅಧಿಕಾರಿ ಚಂದ್ರಕಾಂತ ಮಾಮನಿಯಿಂದ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋವನ್ನು ಗೋರ್ಟಾ ಗ್ರಾಮ ಪಂಚಾಯತ್ ಸದಸ್ಯ ಅರುಣ್ ತೆಲಾಂಗ್‌  ವೈರಲ್ ಮಾಡಿದ್ದಾರೆ

- Advertisement -

ಈ ಮಧ್ಯೆ ಬೀದರ್ ಜಿಲ್ಲೆಯ ಪಂಚಾಯತಿಗಳಲ್ಲಿ ಭ್ರಷ್ಟಾಚಾರ ಹೆಚ್ವಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ ಸಾರ್ವಜನಿಕರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಸರ್ವರಿಗೂ ಸಮಬಾಳು, ಸಮಪಾಲು ನೀಡುವುದು ಕಾಂಗ್ರೆಸ್ – ಲಕ್ಷ್ಮಿ ಹೆಬ್ಬಾಳಕರ

ಮೂಡಲಗಿ - ನಮ್ಮ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕೆಲಸ ಮಾಡುತ್ತದೆ. ನಾವು ಐದೂ ಗ್ಯಾರಂಟಿಗಳನ್ನು ನೆರವೇರಿಸಿದ್ದೇವೆ. ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group