ಮೂಡಲಗಿ : ಬಸವಾದಿ ಶರಣರ ಕಾಲದಿಂದಲೂ ಶರಣರ ಮಾರ್ಗದರ್ಶನ ಹಾಗೂ ಅವರ ಆಚಾರ ವಿಚಾರಗಳನ್ನು ಯಾವ ಮನುಷ್ಯ ಸದಾ ತನ್ನ ಬಾಳಿನುದ್ದಕ್ಕೂ ಪಾಲಿಸುತ್ತಾ ಇರುತ್ತಾನೆ ಅವನಿಗೆ ಕಷ್ಟಗಳು ಎಂದು ಬರುವದಿಲ್ಲ ಎಂದು ಮೂಡಲಗಿ ತಾಲೂಕಾ ಬಣಗಾರ ಸಂಘದ ಅಧ್ಯಕ್ಷ ಆನಂದ ಮಿರ್ಜಿ ಹೇಳಿದರು,
ಸೋಮವಾರ ಸಂಜೆ ಅವರ ನಿವಾಸದಲ್ಲಿ ಬಣಗಾರ ಸಮಾಜದ ಕುಲಗುರು ಶಂಕರದಾಸಿಮಯ್ಯ ಅವರ ಜಯಂತ್ಯುತ್ಸವದಲ್ಲಿ ಮಾತನಾಡಿದರು,
ಮೂಡಲಗಿ ತಾಲೂಕಾ ಬಣಗಾರ ಸಂಘದ ಕಾರ್ಯದರ್ಶಿ ಶಿವಾನಂದ ಮುಧೋಳ ಶಂಕರದಾಸಿಮಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ನೂಲಿಗೆ ಬಣ್ಣ ಹಾಕುವ ಕಾಯಕದಿಂದ ಶರಣ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳಡಿಸಿಕೊಂಡು ಬಂದ ಶಂಕರದಾಸಿಮಯ್ಯವರು ಸದಾ ಕಾರ್ಯಪ್ರವರ್ತರಾಗಿದ್ದರು ಇದರಿಂದ ನೆಮ್ಮದಿಯ ಬದುಕಿದೆ ಎಂದು ಹೇಳಿದ್ದಾರೆ ಅದರಂತೆ ನಾವು ಸದಾ ಕೆಲಸದಲ್ಲಿ ತೊಡಗುವದರಿಂದ ಕ್ರಿಯಾಶೀಲರಾಗಿರುತ್ತವೆ ಎಂದರು,
ಈ ಸಮಯದಲ್ಲಿ ಸಂಘದ ಸದಸ್ಯರಾದ ಬಸವರಾಜ ಕಬ್ಬೂರ, ಅರುಣ ಬಣಗಾರ, ದಯಾನಂದ ಮಟ್ಟಿಕಲ್ಲಿ, ಶಿವಬೋದ ಗುಣಕಿ,ಚಿದಾನಂದ ಆಲತಗಿ ಸಹಿತ ಸಮಾಜದ ಮಹಿಳಾ ಮಂಡಳಿ ಉಪಸ್ಥಿತರಿದ್ದರು.