spot_img
spot_img

ಶರಣರ ಶಿವಯೋಗದ ಪರಿಕಲ್ಪನೆ ವೈಜ್ಞಾನಿಕ ಮತ್ತು ವೈಶಿಷ್ಟ ಪೂರ್ಣವಾದದ್ದು — ತಪೋವನದ ಅನುಭಾವಿ ಶರಣ ಸತೀಶ ಸವದಿ ಅಭಿಮತ

Must Read

- Advertisement -

ಬೆಳಗಾವಿಯ ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ  18-02-2024 ರಂದು ನಡೆದ ವಾರದ ಸತ್ಸಂಗ ಸಮಾವೇಶದಲ್ಲಿ ಮಾತನಾಡಿದ ಧಾರವಾಡದ ಅನುಭಾವಿಗಳಾದ ಸತೀಶ್ ಸವದಿ ಅವರು ತಮ್ಮ ಅನುಭವದ ನುಡಿಗಳಲ್ಲಿ, ಶರಣರು ತಮ್ಮ ವಚನಗಳಲ್ಲಿ ಶಿವಯೋಗ ಸಾಧನೆಯ ಸ್ವಾನುಭವಗಳನ್ನು ತೆರೆದಿಟ್ಟಿದ್ದಾರೆ ಎಂಬುದನ್ನು ತಿಳಿಸಿದರು.

ಅದರಲ್ಲೂ ಧಾರವಾಡದ ತಪೋವನದ ಕುಮಾರಸ್ವಾಮಿಯವರ ಬದುಕು ಮತ್ತು  ಬರಹ ಪೂರ್ಣವಾಗಿ ಶಿವಯೋಗಕ್ಕೆ ಮೀಸಲಾಗಿತ್ತು. ಸಾಧಕರಾಗಿ ಮತ್ತು ತಪೋವನದ ಸ್ಥಾಪಕರಾಗಿ ಅವರು ಮಾಡಿದ ಸೇವೆ ಅನುಪಮವಾದದ್ದು. ಸಾಧಕರ ಲಿಂಗಾನುಸಂಧಾನದಲ್ಲಿನ ಪೂಜೆಯ ವಿಧಾನ, ದೃಷ್ಟಿಯೋಗಗಳ ಮೂಲಕ ಷಟಸ್ಥಳ ಸಾಧನೆ ಮಾರ್ಗಗಳನ್ನು ತಿಳಿಸಿದರು. ಶಂಕರ ಗುಡಸ  ಮತ್ತು ಸದಾಶಿವ ದೇವರಮನಿ ಹಾಗೂ ಸತೀಶ ಪಾಟೀಲ ಅವರು ಕೂಡ ಉಪನ್ಯಾಸದ ಕುರಿತು ತಮ್ಮ ಮೆಚ್ಚಿಗೆ ವ್ಯಕ್ತಪಡಿಸಿದರು.       

ಇತ್ತೀಚೆಗೆ ನಡೆದ ಬೆಳಗಾವಿಯ ವಕೀಲರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲ ಸದಸ್ಯರನ್ನು ಸಂಘಟನೆ ವೇದಿಕೆ ಮೂಲಕ ಸನ್ಮಾನಿಸಲಾಯಿತು.

- Advertisement -

ಬಿ.ಎಮ್. ಮುಗಳಿ. ವಿ.ಬಿ. ಸುಲ್ತಾನಪುರಿ ಸುನೀಲ್ ಅಗಸಗಿ, ವೀರಣ್ಣ ಪೂಜೇರಿ, ವಿನಾಯಕ ನಾಗನೂರೆ, ಸುರೇಶ ನಾಗನೂರೆ, ಅನಿಲ ಪಾಟೀಲ, ವಿ.ವಿ. ಪಾಟೀಲ, ಶೀತಲ ರಾಮಶೆಟ್ಟಿ ವಾಯ.ಬಿ.ಮುಗಳೆ — ಇವರನ್ನೆಲ್ಲ  ವೇದಿಕೆ ಮೂಲಕ ಸನ್ಮಾನಿಸಲಾಯಿತು.     

ಸನ್ಮಾನಿತರ ಪರವಾಗಿ  ನ್ಯಾಯವಾದಿಗಳ  ಸಂಘದ ಅಧ್ಯಕ್ಷರಾದ ಎಸ.ಎಸ.ಕಿವಡಸಣ್ಣವರ  ಅವರು ತಮ್ಮ ಅನುಭವದ ನುಡಿಗಳ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದರು. ಬೆಳಗಾವಿ ನಗರ ವಲಯದ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಶರಣೆ ಜ್ಯೋತಿ ಬಾದಾಮಿ ಅವರನ್ನು ಈ ಸಂದರ್ಭದಲ್ಲಿ ಹಾಗೂ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತ ಲಕ್ಷ್ಮಣ ಕುಂಬಾರರನ್ನು ಸನ್ಮಾನಿಸಲಾಯಿತು. ತಮ್ಮ ವಿವಾಹ ವಾರ್ಷಿಕೋತ್ಸವದ ನಿಮಿತ್ತ ಪ್ರಸಾದ ದಾಸೋಹ ಸೇವೆ ಮಾಡಿದ  ಲಕ್ಷ್ಮಿಕಾಂತ್ ಗುರುವ ಅವರನ್ನು ವೇದಿಕೆ ಮೂಲಕ ಸನ್ಮಾನಿಸಲಾಯಿತು. ಮಹಾದೇವಿ ಅರಳಿ ಅವರ ನೇತೃತ್ವದಲ್ಲಿ ವಚನ ಪ್ರಾರ್ಥನೆ ನೆರವೇರಿತು. ಸಂಘಟನೆಯ ಉಪಾಧ್ಯಕ್ಷರಾದ  ಸಂಗಮೇಶ ಅರಳಿ ಕಾರ್ಯಕ್ರಮದ ನಿರೂಪಣೆ ನೆರವೇರಿಸಿದರು. 

ಸಂಘಟನೆ ಅಧ್ಯಕ್ಷರಾದ ಶರಣ ಈರಣ್ಣ ದೇಯನ್ನವರ್ ವೇದಿಕೆಯನ್ನುದೇಶಿಸಿ  ತಮ್ಮ ಅಧ್ಯಕ್ಷೀಯ ನುಡಿಗಳನ್ನು ಆಡಿದರು. ಸಂಘಟನೆ ಕಾರ್ಯದರ್ಶಿಗಳಾದ ಸುರೇಶ ನರಗುಂದ, ಶಶಿಭೂಷಣ ಪಾಟೀಲ, ವಿರೂಪಾಕ್ಷ ದೊಡ್ಡಮನಿ, ಶಿವಾನಂದ ಲಾಳಸಂಗಿ, ಕಮಲಾ ಗಣಾಚಾರಿ, ದೀಪಾ ಪಾಟೀಲ, ಜಯಶ್ರೀ ಚಾವಲಗಿ,ಸತೀಶ್ ಚೌಗಲಾ, ಶಂಕರ ಶೆಟ್ಟಿ, ವಿ. ಕೆ. ಪಾಟೀಲ, ಎ. ಬಿ. ಜೇವಣಿ, ಬಸವರಾಜ ಕರಡಿಮಠ ಒಳಗೊಂಡಂತೆ ಸಂಘಟನೆಯ ಬಹುತೇಕ ಶರಣ ಬಳಗ ಉಪಸ್ಥಿತರಿದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group