ಶಾಸ್ತ್ರೀಜಿ ಗಾಂಧೀಜಿಯವರ ನೀತಿಗಳಿಂದ ಪ್ರಭಾವಿತರಾಗಿದ್ದರು

Must Read

ಸಿಂದಗಿ: ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿಯಂತಹ ಅನೇಕ ಹೋರಾಟಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜೀವನ ಚರಿತ್ರೆ ತಿಳಿದುಕೊಂಡು ಅವರ ಪ್ರತಿ ಹೆಜ್ಜೆಯ ಗುರುತನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ಎಂ ಎಸ್ ಹೈಯ್ಯಾಳಕರ ಹೇಳಿದರು.

ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಮಹಾವಿದ್ಯಾಲಯದಲ್ಲಿ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಮೂವತ್ತು ವರ್ಷಗಳ ಸಮರ್ಪಣಾ ಸೇವೆ ಶಾಸ್ತ್ರೀಜಿಯವರ ಹಿಂದಿತ್ತು. ಆ ಅವಧಿಯಲ್ಲಿ ಅವರೊಬ್ಬ ಪ್ರಾಮಾಣಿಕ ಮತ್ತು ಅತ್ಯಂತ ಸಾಮರ್ಥ್ಯವಿರುವ ವ್ಯಕ್ತಿಯಾಗಿ ಗುರುತಿಸಿ ಕೊಂಡರು ಶಾಸ್ತ್ರೀಜಿ ಅವರು ವಿನಮ್ರತೆ, ಸಹಿಷ್ಣುತೆ, ಮಹಾನ್ ಆಂತರಿಕ ಶಕ್ತಿಯುಳ್ಳ ಹಾಗೂ ದೃಢ ನಿಶ್ಚಯವುಳ್ಳವರಾಗಿದ್ದರು. ಜನರ ಭಾವನೆಯನ್ನು ಅರ್ಥೈಸಿಕೊಂಡ ಜನರ ವ್ಯಕ್ತಿಯಾಗಿದ್ದರು. ಶಾಸ್ತ್ರೀಜಿಯವರು ಗಾಂಧೀಜಿಯವರ ರಾಜಕೀಯ ಚಿಂತನೆಗಳಿಂದ ಅತ್ಯಂತ ಪ್ರಭಾವಿತರಾಗಿದ್ದರು ಎಂದರು.

ಇದೇ ಸಂದರ್ಭದಲ್ಲಿ ಬಿ ಎಸ್ ಡಬ್ಲ್ಯೂ ಕಾಲೇಜಿನ ಪ್ರಾಚಾರ್ಯ ಎಸ್ ಎಂ ಪೂಜಾರಿ ಮಹಾವಿದ್ಯಾಲಯದ ಉಪನ್ಯಾಸಕರಾದ ಮಹಾಂತೇಶ ನೂಲಾನವರ, ಗದಗಯ್ಯ ನಂದಿಮಠ, ಡಾ. ಬಾಹುಬಲಿ ಒನಕುದರಿ, ರೇವಣಸಿದ್ಧಪ್ಪ ಹಾಲಕೇರಿ, ಸಾಯಬಣ್ಣ ಸಜ್ಜನ, ಶ್ರೀನಿವಾಸ ಪತ್ತಾರ, ಉಮೇಶ ಪೂಜಾರಿ, ಹೇಮಾ ಹಿರೇಮಠ, ಹೇಮಾ ಕಾಸರ, ನಾಗಯ್ಯ ಹಿರೇಮಠ ಹಾಗೂ ಲಕ್ಷ್ಮಿ ಭಜಂತ್ರಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group