spot_img
spot_img

ಒಬ್ಬ ವ್ಯಕ್ತಿಯ ತತ್ವ, ಆಶಯಗಳು ಶತಮಾನಗಳ ಕಾಲ ಆಚರಣೆಯಾಗಬೇಕು

Must Read

- Advertisement -

ಸಿಂದಗಿ: ಮಹಾತ್ಮಗಾಂಧೀಜಿ ಹಾಗೂ ಲಾಲ್‍ಬಹದ್ದೂರ ಶಾಸ್ತ್ರೀಜಿ ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. ಇಂತಹ ಮಹನೀಯರ ಜನ್ಮದಿನಗಳನ್ನು ನೆಪಕ್ಕೆ ಮಾತ್ರ ಅಚರಿಸದೇ ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾದರೆ ಸ್ವಾರ್ಥಕ ಬದುಕು ಸಾಗಿಸಿದಂತಾಗುತ್ತದೆ ಎಂದು ಸಿ.ಎಂ.ಮನಗೂಳಿ ಕಾಲೇಜಿನ ಪ್ರಾಧ್ಯಾಪಕ ಪ್ರದೀಪ ಕತ್ತಿ ಹೇಳಿದರು.

ಪಟ್ಟಣದ ಕರ್ನಾಟಕ ಜನಸ್ಪಂದನ ಟ್ರಸ್ಟ್ ವಿಜಯಪುರ ಹಾಗೂ ಸಿಂದಗಿ ತಾಲೂಕ ಘಟಕದ ಕಚೇರಿಯಲ್ಲಿ ಹಮ್ಮಿಕೊಂಡ ಮಹಾತ್ಮಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ ನಿಮಿತ್ತ ಕಲ್ಯಾಣ ನಗರದಲ್ಲಿರುವ ಆಂಜನೇಯ ದೇವಸ್ಥಾನ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಬ್ಬ ವ್ಯಕ್ತಿಯ ಆಶಯಗಳು ಅವರ ತತ್ವಗಳು ಶತಮಾನಗಳ ಕಾಲ ಆಚರಣೆಯಾದಾಗ ಮಾತ್ರ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಪಸರಿಸಿ. ನಾವು ಸಿದ್ಧಾಂತಗಳನ್ನು ಸಾಮಾಜಿಕ, ಆರ್ಥಿಕ, ಅಭಿವೃದ್ಧಿಗಾಗಿ ಬಳಸಬೇಕು. ಭಾರತ ಒಂದು ಸ್ವಚ್ಛ ರಾಷ್ಟ್ರವಾಗಬೇಕು. ವಿಶ್ವಕ್ಕೆ ಮಾದರಿ ರಾಷ್ಟ್ರವಾಗಬೇಕು ಎಂಬ ಗಾಂಧೀಜಿಯವರು ಕಂಡಿದ್ದ ಹಲವು ಕನಸುಗಳು ಸ್ವಾತಂತ್ರ್ಯಾ ನಂತರ ಹಲವಾರು ವರ್ಷಗಳವರೆಗೂ ನನಸಾಗಿರಲಿಲ್ಲ. ನಿರಂತರ ಪ್ರೋತ್ಸಾಹ ಹಾಗೂ ಖಾದಿಯ ಬಳಕೆಯನ್ನು ಉತ್ತೇಜಿಸಬೇಕೆನ್ನುವ ದೇಶದ ಯುವ ಜನತೆಯ ಹೆಜ್ಜೆಗುರುತಿನಂತಾಗಿದೆ ಎಂದರು.

- Advertisement -

ಜಿಲ್ಲಾಧ್ಯಕ್ಷ ಮಹಾಂತೇಶ ನೂಲಾನವರ್ ಮಾತನಾಡಿ, ದೇಶದಾದ್ಯಂತ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಸ್ಥಿರ ಮತ್ತು ಅತ್ಯಂತ ದೃಢ ನಿಲುವಿನ ವ್ಯಕ್ತಿಯಾಗಿದ್ದರು. ಸರಳತೆಯನ್ನು ನಿರೂಪಿಸಿದರು. ರಾಷ್ಟ್ರದ ಕಲ್ಯಾಣಕ್ಕಾಗಿ ಬದುಕಿದರು. ಭಾರತಕ್ಕಾಗಿ ಅವರು ಮಾಡಿದ ಎಲ್ಲ ಕಾರ್ಯಗಳಿಗೆ ಕೃತಜ್ಞತೆಯೊಂದಿಗೆ ಅವರ ಜಯಂತಿಯಲ್ಲಿ ನಾವು ಅವರನ್ನು ನೆನಪಿಸಿಕೊಳ್ಳುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ನವೀನ ಶೆಳ್ಳಗಿ, ಜಿಲ್ಲಾ ಕಾರ್ಯಾಧ್ಯಕ್ಷ ಶರಣಪ್ಪ ಮೇತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಮಣೂರ, ಜಿಲ್ಲಾ ಪ್ರಧಾನ ಸಂಚಾಲಕ ಭಾಗಣ್ಣ ತಮದೊಡ್ಡಿ, ಉಪಾಧ್ಯಕ್ಷ ದಯಾನಂದ ಜಾಡರ್, ಸಾಹೇಬಗೌಡ ದುದ್ದಗಿ, ಸಂತೋಷ ಮನಗೂಳಿ, ಬಸವರಾಜ ಗುರುಶೆಟ್ಟಿ, ಆನಂದ ಚಿಮ್ಮಲಗಿ, ಬಸವರಾಜ ದೇಸಾಯಿ, ಶಿವಾನಂದ ಮುಡಸಿ, ಶಿವರಾಯಗೌಡ ಖೈನೂರ ಸೇರಿದಂತೆ ಇನ್ನಿತರರು ಇದ್ದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group