spot_img
spot_img

ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನ ; ವಿವಿಧ ಉಪಸಮಿತಿಗಳ ನೇಮಕ

Must Read

- Advertisement -

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಫೆಬ್ರವರಿ ೧ ಮತ್ತು ೨ ರಂದು ಬುಧವಾರ, ಗುರುವಾರ ೧೭ ನೆಯ ಜಿಲ್ಲಾ  ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ.

ಈ ಸಮ್ಮೇಳನ ಯಶಸ್ವಿಯಾಗಿ ನಡೆಯಲು ಅನುಕೂಲ ಆಗುವಂತೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು.

ಜನವರಿ ೨೮ ರಂದು ಶನಿವಾರ ಸಂಜೆ ಕಸಾಪ ಜಿಲ್ಲಾ ಅಧ್ಯಕ್ಷರಾದ  ಡಿ. ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜನವರಿ ೨೪ ರಂದು ನಡೆದ ಸಭೆಯ ನಡಾವಳಿಯನ್ನು ಡಿ. ಗಣೇಶ್ ಓದಿದರು. ಜಿಲ್ಲಾ ಅಧ್ಯಕ್ಷರು ಸಮ್ಮೇಳನ ಸಿದ್ದತೆ ಕುರಿತು ಮಾತನಾಡಿದರು. ಪ್ರತಿನಿಧಿ ನೋಂದಣಿ ಪ್ರಗತಿ ಪರಿಶೀಲನೆ, ಓ.ಓ.ಡಿ. ವಿಚಾರ ಚರ್ಚೆಮಾಡಲಾಯಿತು. ಅನುದಾನ ಇನ್ನೂ ಬಿಡುಗಡೆ ಆಗಿಲ್ಲ. ಇದುವರೆಗೆ ೧೪ ಸಾವಿರ ಸಂಗ್ರಹವಾಗಿದೆ. ಯಾರ ಬಳಿಯೂ ದೇಣಿಗೆ ಪಡೆಯಲು ಹೋಗಲು ಆಗಲಿಲ್ಲ. ಸಿದ್ದತೆ ಮಾಡಿದ್ದೇವೆ. ಅರ್ಥಪೂರ್ಣ ಸಮ್ಮೇಳನ ಆಗುವಂತೆ ಪ್ರಯತ್ನ ಮಾಡಿದ್ದೇವೆ. ಪ್ರತಿನಿಧಿಗಳು, ಅತಿಥಿಗಳು, ಪದಾಧಿಕಾರಿಗಳಿಗೆ ಊಟ, ತಿಂಡಿ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ನೋಂದಣಿ ಮಾಡಿಕೊಂಡು ಚೀಟಿ ಪಡೆಯಬೇಕು. ಚೀಟಿಯನ್ನು ಕಲ್ಯಾಣ ಮಂದಿರದ ಪ್ರವೇಶ ದ್ವಾರದಲ್ಲಿ ಸಂಗ್ರಹಿಸಲು ತೀರ್ಮಾನ ಮಾಡಲಾಯಿತು.

- Advertisement -

ಪ್ರತಿನಿಧಿಗಳಿಗೆ, ಅತಿಥಿಗಳಿಗೆ ತೊಂದರೆ ಆಗದಂತೆ ಎಲ್ಲರೂ ಸಹಕರಿಸಲು ತೀರ್ಮಾನ ಮಾಡಲಾಯಿತು.

ಧ್ವಜಾರೋಹಣ ಸಮಿತಿ : ಪ್ರಸನ್ನಕುಮಾರ್, ಜಿಲ್ಲಾ ಭಾರತ ಸೇವಾದಲ, ಎಂ. ರುದ್ರಪ್ಪ, ಟಿ. ಮಂಜಪ್ಪ, ಬಿ. ಎಂ. ಬಸವರಾಜ, ಸಾವಿತ್ರಮ್ಮ, ಸೋಮಿನಕಟ್ಟಿ, ಭೈರಾಪುರ ಶಿವಪ್ಪ ಗೌಡ, ಕುಬೇರಪ್ಪ, ಉಮೇಶ್ ಹಿರೇನೆಲ್ಲೂರು, ಬಿ. ಆಂಜನೇಯ, ಬಿ. ಕೆ. ಸುಜಾತಾ

- Advertisement -

ಊಟದ ಸಮಿತಿ :  ಕೆ. ಎಸ್. ಹುಚ್ಚರಾಯಪ್ಪ, ಇ. ಜಯಣ್ಣ, ಎಸ್. ಷಣ್ಮುಖಪ್ಪ, ಕುಬೇರಪ್ಪ, ಎ. ಎಸ್. ನಾರಾಯಣ ಚಾಲುಕ್ಯ ನಗರ, ಎಚ್. ಎಂ. ರಾಮಪ್ಪ ಗೌಡ, ಸೋಮಿನಕಟ್ಟಿ, ಎಚ್.  ಈಶ್ವರಪ್ಪಗೌಡರು, ಭದ್ರಾವತಿ, ಕಮಲಾಕರ್, ಕಾನೂರು ಮಲ್ಲಿಕಾರ್ಜುನ, ಮಂಜುನಾಥ ಕಾಮತ್, ಸಂ. ಬ. ಸಿದ್ದಪ್ಪ ಹೊಳೆಹೊನ್ನೂರು.

ಮೆರವಣಿಗೆ ಸಮಿತಿ : ಡಾ. ಕೆ. ಜಿ. ವೆಂಕಟೇಶ್, ತ. ಮ. ನರಸಿಂಹ, ಪಿ. ಕೆ. ಸತೀಶ್, ಡಾ. ಬಿ. ಎನ್. ತಂಬೂಳಿ, ನರಸಿಂಹಸ್ವಾಮಿ, ಜಗದೀಶ್ ಗಾಜನೂರು, ಭೈರಾಪುರ ಶಿವಪ್ಪ ಮೇಷ್ಟ್ರು, ಡಿ. ಸಿ. ದೇವರಾಜ್, ರಘು, ಆನಂದಪುರ, ಚಂದ್ರಪ್ಪ ಹೊಳೆಹೊನ್ನೂರು, ವಿನಾಯಕ ಕಾನಡೆ, ಸೊರಬ, ಉಮೇಶ್ ಹಿರೇನೆಲ್ಲೂರು, ಆಂಜನೇಯ ಬಿ., ಕು. ಸುಜಾತಾ, ಜಿ. ಕುಬೇರಪ್ಪ,  ಜಿಯಾವುಲ್ಲಾ ಶಿಕಾರಿಪುರ. ಎಂ. ಮಂಜಣ್ಣ, ಶಿರಾಳಕೊಪ್ಪ, ನಾಗೋಜಿರಾವ್, ಭಾರತಿ ರಾಮಕೃಷ್ಣ, ಮಮತಾ ಶಿವಣ್ಣ, ಖಲಂದರ್ ಸಾಬ್, ಪ್ರಕಾಶ್, ಭದ್ರಾವತಿ ಸೇರಿದಂತೆ ನೀವು.

ವೇದಿಕೆ ಸಮಿತಿ : ಮಹಾದೇವಿ, ಡಿ. ಗಣೇಶ್, ಅನುರಾಧ, ಎಂ. ನವೀನ್ ಕುಮಾರ್, ಸೌಳಿ ನಾಗರಾಜ್, ಮೇರಿ ಡಿಸೋಜ,ಡಾ. ಅನಿತಾ ಹೆಗ್ಗೋಡು, ಮಮತಾ ಶಿವಣ್ಣ

ಪುಸ್ತಕ ಮಳಿಗೆ ಸಮಿತಿ : ಡಿ. ಎಚ್. ಸೂರ್ಯಪ್ರಕಾಶ್, ಡಾ. ಅಣ್ಣಪ್ಪ ಮಳೀಮಠ, ಬಿ. ಟಿ. ಅಂಬಿಕಾ, ಎಚ್. ಎಸ್. ರಘು, ಮೋಹನ್ ಕುಮಾರ್, ಲತಾ ಮೇಡಂ, ಭದ್ರಾವತಿ, ಆರ್. ರತ್ನಯ್ಯ, ಪ್ರೊ. ಸತ್ಯನಾರಾಯಣ, ಬಿ. ಎನ್ ಸುನಿಲ್ ಕುಮಾರ್

ನೋಂದಣಿ ಸಮಿತಿ : ಕೋಗಲೂರು ತಿಪ್ಪೇಸ್ವಾಮಿ, ಶಿವಕುಮಾರ್, ಬಿ. ಟಿ. ಅಂಬಿಕಾ, ನಳಿನಾಕ್ಷಿ, ಅನಿತಾ, ಸುಮಿತ್ರಾ ನಿಕ್ಕಂ, ವಿ. ಆರ್. ಸೋಮಿನಕಟ್ಟಿ,   ಶ್ರೀನಿವಾಸ ನಗಲಾಪುರ, ಕು. ಸುಜಾತಾ, ನಾಗಭೂಷಣ ಆರ್. ರಿಪ್ಪನ್ ಪೇಟೆ, ಸುಧಾ ಮಹೇಶ್, ಎಸ್, ಸುಶೀಲಾ ಷಣ್ನುಗಂ, ವಿಜಯ ಮಂಜುನಾಥಾಚಾರ್

ಅತಿಥಿ ಸತ್ಕಾರ ಸಮಿತಿ :

ಯು. ಮಧುಸೂದನ್ ಐತಾಳ್, ಎಂ. ಎಂ. ಸ್ವಾಮಿ, ಉಮೇಶ್ ಹಿರೇನೆಲ್ಲೂರು, ವಿ. ಟಿ. ಸ್ವಾಮಿ, ಶಿವಾನಂದ ಪಾಣಿ, ಬಿ. ಆಂಜನೇಯ, ಕೆ. ಎಸ್. ಮಂಜಪ್ಪ, ಕೆ. ಎಸ್. ಹುಚ್ಚರಾಯಪ್ಪ, ಮಥಿಯಾಸ್, ರಾಮಚಂದ್ರ ಕೆ., ಲೋಕೇಶ್ ಮಕರಿ, ಬಸವನಗೌಡರು, ಕಾರ್ತಿಕ್ ಸಾಹುಕಾರ್, ಧರ್ಮಕುಮಾರ್, ತೀರ್ಥಹಳ್ಳಿ,

ಸಾಂಸ್ಕೃತಿಕ ಸಮಿತಿ : ನಳಿನಾಕ್ಷಿ, ಶಾಂತಾ ಆನಂದ, ಲಲಿತಮ್ಮ ವಿಠಲದಾಸ್, ಶೀಲಾ ಸುರೇಶ್, ಲಕ್ಷ್ಮೀಮಹೇಶ್, ಮಹಾದೇವಿ, ನಾರಾಯಣ, ಪ್ರಹ್ಲಾದ್ ದೀಕ್ಷಿತ್, ಎಂ. ಜಿ. ಗಾಯತ್ರಿ ಶೇಷಗಿರಿ, ಕಾಶಿಬಾಯಿ, ಅನು ಸತೀಶ್, ಸುಶೀಲಾ ಷಣ್ಮುಗಂ, ಸತ್ಯನಾರಾಯಣ ಸಿರಿವಂತೆ, ಕಸ್ತೂರಿ ಸಾಗರ, ಪ್ರತಿಭಾ ನಾಗರಾಜ್ ಸೇರಿದಂತೆ ಹಲವರನ್ನು ಒಳಗೊಂಡ ಸಮಿತಿ ರಚಿಸಲಾಯಿತು. ಫೆಬ್ರವರಿ ೧ ರಂದು ಬೆಳಿಗ್ಗೆ ೮ ಕ್ಕೆ ಎಲ್ಲರೂ ಬರಬೇಕು. ತಿಂಡಿ ತಿಂದು ಆಯಾಯ ಸಮಿತಿಗಳು ತಮ್ಮ ಜವಾಬ್ದಾರಿ ನಿರ್ವಹಿಸಲು ತೀರ್ಮಾನ ಮಾಡಲಾಯಿತು.

ಜಿಲ್ಲಾ ಕಾರ್ಯದರ್ಶಿ ಎಂ. ಎಂ. ಸ್ವಾಮಿ ವಂದಿಸಿದರು.

- Advertisement -
- Advertisement -

Latest News

Yuva Movie: ಯುವ ರಾಜ್‌ಕುಮಾರ್ ಅವರ ಚಿತ್ರದ ಕಥೆ ಲೀಕ್ ಆಯ್ತಾ?

ಕನ್ನಡ ಚಲನಚಿತ್ರ "ಯುವ" ಮಾರ್ಚ್ 2024 ರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಪ್ರಸಿದ್ಧ ಕನ್ನಡ ನಟ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್...
- Advertisement -

More Articles Like This

- Advertisement -
close
error: Content is protected !!
Join WhatsApp Group