ಶಿವಾಪೂರದಲ್ಲಿ ಶಿವಾನುಭವ ಗೋಷ್ಠಿ

Must Read

ಮೂಡಲಗಿ: ತಾಲ್ಲೂಕಿನ ಶಿವಾಪೂರ ಗ್ರಾಮದಲ್ಲಿ ಶ್ರೀ ಗುರು ಅಡವಿಸಿದ್ದೇಶ್ವರ ಮಠದಲ್ಲಿ ಅಮವಾಸ್ಯೆ ನಿಮಿತ್ತ ದ್ವಿತೀಯ ಶಿವಾನುಭವ ಗೋಷ್ಠಿ ಮಾರ್ಚ-10 ರಂದು ರವಿವಾರ ಸಂಜೆ 6-00 ಗಂಟೆಗೆ ನಡೆಯಲಿದೆ.

ಸಾನ್ನಿಧ್ಯವನ್ನು ಶ್ರೀ ಅಡವಿಸಿದ್ದೇಶ್ವರ ಮಠದ ಪೂಜ್ಯ ಶ್ರೀ ಅಡವಿಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದು, ಮಹಾ ಶಿವಯೋಗ ಕುರಿತು ಚಿಂತಕರಾದ ಬೆಳಗಾವಿ ಪ್ರಣವಂ ಫೌಂಡೇಷನ್‌ ಗುರುಕುಲದ ಪೂಜ್ಯ ಶ್ರೀ ನಿಶ್ಚಲ ಸ್ವರೂಪ ಸ್ವಾಮೀಜಿ ನಡೆಸುವರು.

ಮುಖ್ಯ ಅತಿಥಿಯಾಗಿ ಧಾರವಾಡ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿವೃತ್ತಿ ಅಧಿಕಾರಿ ಗಜಾನನ ಮನ್ನಿಕೇರಿ,ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಸುಭಾಸ ಪಾಟೀಲ,ನಿವೃತ್ತಿ ಶಿಕ್ಷಕಿ ಅನಸೂಯಾ ತುಪ್ಪದ, ಆನಂದ ಬ್ಯಾಳಿ, ಅಪ್ಪಣ್ಣ ಮುಗಳಖೊಡ, ಎನ ಜಿ ಹೆಬ್ಬಾಳಿ ಸೇರಿದಂತೆ ಅನೇಕರು ಉಪಸ್ಥಿತಿ ಇರುವರು. ಹೆಚ್ಚಿನ ಸಂಖ್ಯೆಯಲ್ಲಿ ಮಠದ ಭಕ್ತರು ಭಾಗವಹಿಸುವಂತೆ ಕಾರ್ಯಕ್ರಮದ ಸಂಘಟಕರು ವಿನಂತಿಸಿದ್ದಾರೆ.

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group